
ಗದಗ (ಸೆ.6): ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿ ಖರೀದಿಸಿ ಮನೆಗೆ ಹಿಂತಿರುಗುವ ವೇಳೆ ಕಾಂಕ್ರಿಟ್ ಲಾರಿ ಹರಿದು ಪೊಲೀಸ್ ಪೇದೆಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ಬಳಿ ನಡೆದಿದೆ.
ರಮೇಶ್ ಡಂಬಳ (45), ಮೃತ ದುರ್ದೈವಿ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್. ನೈಟ್ ಶಿಫ್ಟ್ ಪಾಳಿ ಮುಗಿಸಿ ಬೆಳಗ್ಗೆ ಮನೆಗೆ ಬಂದಿದ್ದ ಪೇದೆ. ಇಂದು ಗಣೇಶ ಹಬ್ಬ ಹಿನ್ನೆಲೆ ಪೂಜೆ ಮಾಡಲು ಮಾರ್ಕೆಟ್‌ನಿಂದ ಹಣ್ಣು, ಹೂ ಪೂಜಾ ಸಾಮಗ್ರಿ ಖರೀದಿಸಲು ಮಾರ್ಕೆಟ್‌ಗೆ ಬಂದಿದ್ದರು. ಪೂಜಾ ಸಾಮಗ್ರಿ ಖರೀದಿಸಿ ಮಾರ್ಕೆಟ್‌ನಿಂದ ಪೊಲೀಸ್ ಕ್ವಾಟ್ರಸ್ ಹೊರಡುವ ವೇಳೆ ಇದೇ ಮಾರ್ಕೆಟ್ ಏರಿಯಾದಿಂದ ಎಪಿಎಂಸಿ ಬಳಿ ಕಾಂಕ್ರಿಟ್ ಲಾರಿ ಹೊರಟಿದೆ. ಲಾರಿ ಓವರ್ ಟೇಕ್ ಮಾಡಲು ಮುಂದಾದಾಗ ನಡೆದಿರುವ ಅಪಘಾತ. ಲಾರಿ ಚಕ್ರ ತಲೆಯ ಮೇಲೆ ಹರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಪೇದೆ.
ನಾಟಕ ನೋಡಲು ಹೊರಟವರ ಮೇಲೆ ಹರಿದ ಪಲ್ಸರ್ 200cc ಬೈಕ್; ನಾಲ್ವರು ದುರ್ಮರಣ!
ಅಪಘಾತದಿಂದ ಜನ ಜಮಾಯಿಸಿ ಭೂಮರೆಡ್ಡಿ ಸರ್ಕಲ್ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಗದಗ ಟ್ರಾಫಿಕ್ ಪೊಲೀಸರು ಸ್ಥಳ ಕ್ಲೀಯರ್ ಮಾಡಿದರು. ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ