ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ಒಬ್ಬಂಟಿ ಯುವತಿಗೆ ಮರ್ಮಾಂಗ ತೋರಿಸಿದ ಫಯಾಜ್ ಪಾಷಾ!

By Sathish Kumar KH  |  First Published Sep 6, 2024, 1:08 PM IST

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಒಬ್ಬಂಟಿ ಯುವತಿ ಮುಂದೆ ಕಾಮುಕ ಫಯಾಜ್ ಪಾಷಾ ತನ್ನ ಮರ್ಮಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.


ಬೆಂಗಳೂರು (ಸೆ.06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷತೆ ಕಡಿಮೆಯಾಗುತ್ತಿದೆ ಎಂಬ ಆತಂಕ ತಲೆದೋರಿದ ನಡುವೆಯೇ ಪ್ರಸಿದ್ಧ ಪ್ರವಾಸಿ ಹಾಗೂ ವಿಹಾರ ತಾಣವಾದ ಕಬ್ಬನ್ ಪಾರ್ಕ್‌ನಲ್ಲಿ ಒಬ್ಬ ಕಾಮುಕ ಬೀಡು ಬಿಟ್ಟಿದ್ದಾನೆ. ಈತ ಒಬ್ಬಂಟಿಯಾಗಿ ಹೋಗುವ ಯುವತಿಯರು, ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಕಂಡರೆ ತನ್ನ ಮರ್ಮಾಂಗವನ್ನು ತೋರಿಸಿ ಕಾಮಕ್ಕೆ ಆಹ್ವಾನಿಸುತ್ತಾನೆ. ಹೀಗಾಗಿ, ಒಬ್ಬಂಟಿಯಾಗಿ ಮಹಿಳೆಯರು, ಯುವತಿಯರು ಕಬ್ಬನ್ ಪಾರ್ಕ್‌ಗೆ ಹೋಗುವ ಮುನ್ನ ಎಚ್ಚರವಾಗಿರಿ.

ಬೆಂಗಳೂರಿನ ಕಬ್ಬನ್ ಪಾರ್ಕ್ ವಾಯುವಿಹಾರಕ್ಕೆ ಬರುವ ಯುವತಿಯರೇ ಎಚ್ಚರವಾಗಿರಿ. ಕಬ್ಬನ್ ಪಾರ್ಕ್ ನಲ್ಲಿದ್ದಾನೊಬ್ಬ ಕಾಮುಕನಿದ್ದಾನೆ. ಒಬ್ಬಂಟಿಯಾಗಿ ಓಡಾಡೋ ಯುವತಿಯರನ್ನ ಟಾರ್ಗೇಟ್ ಮಾಡೋ ಕಾಮುಕ, ಒಬ್ಬಂಟಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತನೆ ತೋರುತ್ತಾನೆ. ಕಬ್ಬನ್‌ಪಾರ್ಕಿನ ಸೆಂಟ್ರಲ್ ಲೈಬ್ರರಿ ಮುಂದೆ ಯುವತಿಯೊಬ್ಬಳು ನಿಂತಿದ್ದಾಗ ಈತ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ, ಯುವತಿಯ ಮುಂದೆಯೇ ತನ್ನ ಖಾಸಗಿ ಅಂಗವನ್ನು ತೋರಿಸಿ, ಆ ಯುವತಿಯ ಬಟ್ಟೆ ಹಿಡಿದು ಕಾಮಕೇಳಿಗೆ ಎಳೆದೊಯ್ಯಲು ಪ್ರಯತ್ನಿಸಿದ್ದಾನೆ.

Tap to resize

Latest Videos

'ನಿನ್ನ ಫೋಟೋ ನೋಡಿಕೊಂಡು ಹಸ್ತಮೈಥುನ ಮಾಡಿಕೊಂಡೆ..' ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ!

ಆರಂಭದಲ್ಲಿ ಇವನೊಬ್ಬ ಮಾನಸಿಕ ಅಸ್ವಸ್ಥನೆಂದು ಸುಮ್ಮನಿದ್ದ ಯುವತಿ, ಆತನ ವರ್ತನೆಯ ಜೊತೆಗೆ ತನ್ನ ಬಟ್ಟೆಗೆ ಕೈ ಹಾಕಿದ್ದರಿಂದ ಬೆಚ್ಚಿ ಬಿದ್ದಿದ್ದಾಳೆ. ಈತನೊಬ್ಬ ಸಮಾಜಕ್ಕೆ ಕಂಟಕವಾದ ಮಹಿಳಾ ಪೀಡಕ, ಕಾಮುಕ ಎಂಬುದನ್ನು ಅರಿತು ಕೂಡಲೇ ಕಬ್ಬನ್ ಪಾರ್ಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಮರ್ಮಾಂಗ ತೋರಿಸಿ ಕಾಮದಾಟಕ್ಕೆ ಕರೆದ ಫಯಾಜ್ ಪಾಷಾ (57) ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಯುವತಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

click me!