Latest Videos

ಪತ್ನಿ ತೊರೆದು ಹೋದ ಸಿಟ್ಟು : ಅತ್ತೆಯ ಮೂಗು ಕಚ್ಚಿ ತುಂಡರಿಸಿದ ಅಳಿಯ!

By Anusha KbFirst Published Mar 13, 2023, 11:10 AM IST
Highlights

ರಾಮಾಯಣದಲ್ಲಿ ಶ್ರೀರಾಮ ರಾವಣನ ತಂಗಿ ಶೂರ್ಪನಖಿಯ ಮೂಗು ಕತ್ತರಿಸಿದ ವಿಚಾರ ರಾಮಾಯಣ ಮಹಾಕಾವ್ಯ ಓದಿದ ಬಹುತೇಕರಿಗೆ ತಿಳಿದಿದೆ. ಆದರೆ ಅಳಿಯನೋರ್ವ ಅತ್ತೆಯ ಮೂಗು ಕತ್ತರಿಸಿದ ಘಟನೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಎಂದಾದರೆ ಮಧ್ಯಪ್ರದೇಶದಲ್ಲಿ ಅಂತಹ ಘಟನೆಯೊಂದು ನಡೆದು ಹೋಗಿದೆ.

ಮಧ್ಯಪ್ರದೇಶ: ರಾಮಾಯಣದಲ್ಲಿ ಶ್ರೀರಾಮ ರಾವಣನ ತಂಗಿ ಶೂರ್ಪನಖಿಯ ಮೂಗು ಕತ್ತರಿಸಿದ ವಿಚಾರ ರಾಮಾಯಣ ಮಹಾಕಾವ್ಯ ಓದಿದ ಬಹುತೇಕರಿಗೆ ತಿಳಿದಿದೆ. ಆದರೆ ಅಳಿಯನೋರ್ವ ಅತ್ತೆಯ ಮೂಗು ಕತ್ತರಿಸಿದ ಘಟನೆ ಎಲ್ಲಾದರೂ ಕೇಳಿದ್ದೀರಾ? ಇಲ್ಲ ಎಂದಾದರೆ ಮಧ್ಯಪ್ರದೇಶದಲ್ಲಿ ಅಂತಹ ಘಟನೆಯೊಂದು ನಡೆದು ಹೋಗಿದ್ದು, ಅತ್ತೆಯ ಕಚ್ಚಿ ಗಾಯಗೊಳಿಸಿದ ಅಳಿಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಪತ್ನಿ ತೊರೆದು ಹೋದಳೆಂದು ಸಿಟ್ಟಿಗೆದ್ದ ಅಳಿಯನೊರ್ವ ಅತ್ತೆಯ ಮೂಗು ಕತ್ತರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.  ರಾಜು ಬಘೇಲ್ ಎಂಬಾತನೇ ಹೀಗೆ ಅತ್ತೆಯ ಮೂಗು ಕತ್ತರಿಸಿದ ದುರುಳ ಅಳಿಯ. ಈ ರಾಜು ಬಘೇಲ್ ಸದಾ ತನ್ನ ಹೆಂಡತಿ ಶ್ಯಾಮ್ ಸುಂದರಿ (Shyam Shundari) ಯನ್ನು ಥಳಿಸುತ್ತಿದ್ದ. ಗಂಡನ ಕಿರುಕುಳದಿಂದ ಬೇಸತ್ತ ಆಕೆ  ಪೊಲೀಸರಿಗೆ ದೂರು ನೀಡಿದ್ದಳು.  ಅಲ್ಲದೇ ತವರು ಮನೆ ಸೇರಿಕೊಂಡಿದ್ದಳು. ಇದರಿಂದ ಸಿಟ್ಟಿಗೆದ್ದ ರಾಜು ಬಘೇಲ್ ಈ ಕೃತ್ಯವೆಸಗಿದ್ದಾನೆ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Domestic Violence : ದ.ಕ.ದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಪ್ರಮೀಳಾ ನಾಯ್ಡು

ಮೊರೇನಾ (Morena) ಜಿಲ್ಲೆಯ ಚಂದಾಪುರ (Chandpur) ಗ್ರಾಮದ ನಿವಾಸಿಯಾದ 55 ವರ್ಷದ ರಾಮ್ ವಿಲಾಸಿ (Ram Vilasi) ತನ್ನ ಮಗಳನ್ನು ನೋಡುವ ಸಲುವಾಗಿ ತನ್ನ ಗಂಡ ರಾಮಹಿತ್ ಬಘೇಲ್ (Ramhet Baghel) ಹಾಗೂ ಪುತ್ರನೊಂದಿಗೆ ಮಗಳ ಮನೆಗೆ ತೆರಳಿದ್ದಾರೆ.  ಮಗಳನ್ನು ಕರೆದುಕೊಂಡು  ವಾಪಸ್ ಬರುತ್ತಿದ್ದ ವೇಳೆ  ರಾಮ್ ವಿಲಾಸಿಯ ಅಳಿಯ ರಾಜು ಬಘೇಲ್ ಹಾಗೂ ಆತನ ಇಬ್ಬರು ಸಂಬಂಧಿಗಳು ಇವರನ್ನು ರಸ್ತೆ ಮಧ್ಯೆ ಅಡ್ಡ ಹಾಕಿದ್ದು,  ಜಗಳ ಮಾಡಲು ಶುರು ಮಾಡಿದ್ದಾರೆ. ಇದಕ್ಕೆ ಅತ್ತೆ ರಾಮ್ ವಿಲಾಸಿ ವಿರೋಧ ವ್ಯಕ್ತಪಡಿಸಿದಾಗ ಅಳಿಯ ರಾಜು ಬಘೇಲ್ ಆಕೆಯ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಅಲ್ಲದೇ ಮಾವ ರಾಮ್‌ಹಿತ್ ಬಘೇಲ್ ಅವರನ್ನು ಥಳಿಸಿದ್ದಾನೆ. 

ಈ ಬಗ್ಗೆ ಸ್ಥಳೀಯರು 100 ಗೆ ಕರೆ ಮಾಡಿ ಪೊಲೀಸರಿಗೆ ವಿಚಾರ ತಿಳಿಸಿದ್ದು, ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಗಾಯಾಳುವನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲದೇ  ಹೀಗೆ ಅತ್ತೆಯನ್ನು ಕಚ್ಚಿ ಗಾಯಗೊಳಿಸಿದ ಅಳಿಯನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಠಾಣೆ ಮುಖ್ಯಸ್ಥ ಯೋಗೇಂದ್ರ ಸಿಂಗ್ ಜಾಡೌನ್ (Yogendra Singh Jadaun) ಹೇಳಿದರು. 

ಅಮ್ಮನ ಬದಲು ಅಪ್ಪನ ಆಯ್ಕೆ ಮಾಡಿದ ಮಗ: 13 ವರ್ಷದ ಬಾಲಕನ ತಂದೆ ಕಸ್ಟಡಿಗೆ ನೀಡಿದ ಕೋರ್ಟ್

ಪ್ರೀತಿಸಿ ಕೈ ಹಿಡಿದ ಹೆಂಡತಿಯ ಶೀಲ ಶಂಕಿಸಿ ಕೊಲೆ: ಅನಾಥರಾದ ಪುಟ್ಟ ಮಕ್ಕಳು

ಪ್ರೀತಿಸಿ ಕೈ ಹಿಡಿದ ಹೆಂಡತಿಯ ಶೀಲ ಶಂಕಿಸಿ ಪತಿಯೋರ್ವ ಕೊಡಲಿಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ ಘಟನೆ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟಿ ಗ್ರಾಮದಲ್ಲಿ ನಡೆದಿದೆ‌. ವಿದ್ಯಾ ಆಡಿನ್ (29) ಕೊಲೆಯಾದ ಮಹಿಳೆ. ಜಮೀನಿಗೆ ಕಡಲೆ ಕೀಳೋದಕ್ಕೆ ಅಂತಾ ಹೋಗಿದ್ದ ಪತ್ನಿ ವಿದ್ಯಾ 11 ಗಂಟೆ ಸುಮಾರಿಗೆ ಮನೆಗೆ ಬಂದಿದ್ದರು.  ಈ ವೇಳೆ ಕುಡಿದು ಫುಲ್ ಟೈಟ್ ಆಗಿದ್ದ ಮೌನೇಶ್ (Mounesh) ಮನೆಗೆ ಬಂದ ವಿದ್ಯಾಳೊಂದಿಗೆ ಜಗಳ ತೆಗೆದಿದ್ದ, ಬೇಡ ಅಂದ್ರು ಜಮೀನಿಗೆ ಹೋಗಿದ್ದಿಯಾ, ಯಾವನೊಂದಿಗೆ ಸಂಬಂಧ ಇಟ್ಕೊಂಡಿದಿಯಾ ಅಂತಾ ಜಗಳ ಶುರು ಮಾಡಿದ್ದಾನೆ. ಅಲ್ಲದೇ ಕುಡಿದ ಆವೇಶದಲ್ಲಿದ್ದ ಮೌನೇಶ ಮನೆಯಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಹೆಂಡತಿ ವಿದ್ಯಾ ಕತ್ತಿಗೆ ಕಡಿದಿದ್ದಾನೆ. ಒಂದೇ ಏಟಿಗೆ ವಿದ್ಯಾ (Vidya) ಮನೆ ಹೊಸ್ತಿಲಲ್ಲೇ ಪ್ರಾಣ ಬಿಟ್ಟಿದ್ದಾಳೆ. ಕೊಡಲಿ (Axe) ಏಟಿನಿಂದ ಪತ್ನಿ ಕೆಳಗೆ ಬಿದ್ದಾಗ ಗಾಬರಿಗೊಂಡ ಮೌನೇಶ್ ಅಕ್ಕಪಕ್ಕದ ಮನೆಯವರನ್ನೆಲ್ಲಾ ಕರೆದು ಹೊಡೆದುಬಿಟ್ಟೆ ಸಹಾಯ ಮಾಡಿ ಎಂದು ಗೋಳಾಡಿದ್ದಾನೆ. ಆದರೆ ಅಷ್ಟರಲ್ಲಿ ವಿದ್ಯಾ ಪ್ರಾಣ ಬಿಟ್ಟಿದ್ದಾಳೆ. ಆಕೆಗೆ ಬೇರೆಯವರೊಂದಿಗೆ ಸಂಬಂಧ ಇತ್ತು ಅದಕ್ಕಾಗಿ ಹೊಡೆದೇ ಎಂದು ಆತ ಪೊಲೀಸರೆದುರು ಹೇಳಿಕೊಂಡಿದ್ದಾನೆ. 

ಡ್ರೈವರ್ (Driver) ಆಗಿ ಕೆಲಸ ಮಾಡ್ತಿದ್ದ ಮೌನೇಶ ಅದೇ ಗ್ರಾಮದ ವಿದ್ಯಾಳನ್ನು ಪ್ರೀತಿಸಿದ್ದ. ಈ ಮಧ್ಯೆ ವಿದ್ಯಾಳ ಮನೆಯವರು ಅವರ ಸಂಬಂಧಿಯೊಬ್ಬರ ಜೊತೆ ವಿದ್ಯಾಳ ಮದ್ವೆ ನಿಶ್ಚಯಿಸಿದ್ದರು ಆದರೆ ಮದ್ವೆ ನಿಶ್ಚಯವಾಗಿದ್ರೂ ಅದನ್ನು ಮುರಿದು ವಿದ್ಯಾ ಮೌನೇಶ್ ಜೊತೆ ಬಂದಿದ್ದರು.  ಮೌನೇಶ ಇಲ್ದೆ ಜೀವನ ಇಲ್ಲ‌, ಅವನಿಲ್ಲದಿದ್ರೆ ಸತ್ತು ಹೋಗ್ತೀನಿ  ಅಂತಾ ತಂದೆಯ ಬಳಿ ವಿದ್ಯಾ ಹೇಳಿ ಬಂದಿದ್ದು, ಈ ಜೋಡಿ ತಮ್ಮ ಪಾಡಿಗೆ ಇರ್ಲಿ ಅಂತ ವಿದ್ಯಾ ತಂದೆ ತಾಯಿ ಸುಮ್ಮನಾಗಿದ್ದರು. 

ಒಂದೇ ಊರಿನಲ್ಲಿದ್ದರೂ‌ ವಿದ್ಯಾ, ತಂದೆ ಮನೆಗೆ ಹೋಗ್ತಿರಲಿಲ್ಲ, ತನ್ನ ಮಕ್ಕಳು ತನ್ನ ಕುಟುಂಬ ಅಂತಾ ಇರ್ತಿದ್ರು. ಆದ್ರೆ ಮೌನೇಶನ ತಲೆಯಲ್ಲಿ ಹೊಕ್ಕಿದ್ದ ಸಂಶಯದ ಹುಳು, ತನ್ನನ್ನೇ ನಂಬಿ ಬಂದ ಪತ್ನಿಯ ಬಲಿ ಪಡೆದಿದೆ.  ಕುಡಿತದ ದಾಸನಾಗಿದ್ದ ಮೌನೇಶ್ ಕಳೆದ ಕೆಲ ದಿನಗಳಿಂದ ಹೆಂಡತಿಯೊಂದಿಗೆ ಜಗಳ ಮಾಡಲು ಆರಂಭಿಸಿದ್ದ. ಈಗ ಆವೇಶದಲ್ಲಿ ಮಾಡಿದ ಕೆಲಸದಿಂದಾಗಿ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳು ತಂದೆ ತಾಯಿ ಇಲ್ಲದೇ ಅನಾಥರಾಗುವಂತಾಗಿದೆ.

click me!