ಪಕ್ಕದ ಮನೆ ಸ್ನೇಹಿತನೊಂದಿಗೆ ಲವ್ವಿಡವ್ವಿ, ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಹೆಂಡ್ತಿ

By Suvarna News  |  First Published May 17, 2022, 6:21 PM IST

* ಆಪ್ತ ಸ್ನೇಹಿತನ ಪತ್ನಿಯ ಜೊತೆಯೇ ಅಕ್ರಮ ಸಂಬಂಧ
* ಪತಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಪತ್ನಿ-ಪ್ರಿಯಕರ
* ಮದುವೆಯಾಗಿ ಮಕ್ಕಳಿದ್ರು ಪಕ್ಕದ ಮನೆಯವನ ಜೊತೆ ಲವ್ವಿಡವ್ವಿ
* ಗಂಡನನ್ನ ಕೊಲೆ ಮಾಡಿಸಲು ಪತ್ನಿ ಪ್ಲಾನ್


ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ವಿಜಯನಗರ, (ಮೇ.17):
ಇದು ಉಂಡ ಮನೆಗೆ ಕನ್ನ ಹಾಕೋ ಸ್ನೇಹಿತನೊಬ್ಬನ ಕತರ್ನಾಕ್ ಕಥೆ.. ಹೌದು, ಅವರಿಬ್ಬರು ಹಲವು ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ರು. ಒಂದೇ ಊರಿನಲ್ಲಿ ಅಕ್ಕ ಪಕ್ಕದ ಮನೆಯಲ್ಲೆ ವಾಸವಾಗಿದ್ರು. ಕಷ್ಟಕಾಲದಲ್ಲಿ ಆ ಗೆಳೆಯ , ಆಪ್ತ ಸ್ನೇಹಿತನಿಗೆ ತನ್ನ ಮನೆ ಬಾಡಿಗೆ ಸಹ ಕೊಟ್ಟಿದ್ದ.

ಆದ್ರೆ ಸ್ನೇಹಿತ ಮಾಡಿರೋ ಕೆಲಸ ನೋಡಿದ್ರೇ ನಾಗರೀಕ ಸಮುದಾಯವೇ ತಲೆ ತಗ್ಗಿಸಬೇಕಿದೆ. ಯಾಕಂದ್ರೇ, ಆಪ್ತ ಸ್ನೇಹಿತನ ಪತ್ನಿಯನ್ನೆ ಪಟಾಯಿಸಿ ಲವ್ವಿಡವ್ವಿ ಶುರುವಿಟ್ಟ ಕೊಂಡ ಅವನು, ಅಕ್ರಮ ಸಂಬಂಧಕ್ಕಾಗಿ ಆಪ್ತ ಸ್ನೇಹಿತನ ಕೊಲೆಗೆ ಸೆಚ್ಕ್ ಹಾಕಿದ್ದಾನೆ. ಉಂಡ ಮನೆಗೆ ದ್ರೋಹ ಬಗೆದ ಆ ಮನೆಹಾಳ ಸ್ನೇಹಿತನ ವಿರುದ್ದ ಈಗ ದೂರು ದಾಖಲಾಗಿದೆ..

Tap to resize

Latest Videos

undefined

ಅನೈತಿಕ ಸಂಬಂಧಕ್ಕೆ ಅಡ್ಡಿ, ಪ್ರಿಯಕರನ ಜತೆ ಸೇರಿ ತಮ್ಮನನ್ನೇ ಕೊಂದ ಅಕ್ಕ
 
ಗೆಳೆಯನ ಪತ್ನಿತನ್ನೇ ಬುಟ್ಟಿಗೆ ಹಾಕಿಕೊಂಡ
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಪ್ಪರದಹಳ್ಳಿ ನಿವಾಸಿಯಾದ ಸಿದ್ದೇಶ ಕಳೆದ 15 ವರ್ಷಗಳ ಹಿಂದೆಯೇ ಮಾವನ ಮಗಳಾದ ಕಲ್ಪನಾಳನ್ನು ಮದುವೆಯಾಗಿದ್ದರು. ಅಡುಗೆ ಕೆಲಸ ಮಾಡಿಕೊಂಡು ತಕ್ಕಮಟ್ಟಿಗೆ ಸಂಪಾದನೆ ಮಾಡ್ತಿದ್ದನು. ಸಿದ್ದೇಶ ಹಾಗೂ ಕಲ್ಪನಾಳ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡು ಜನಿಸಿದ್ದಾರೆ. ಆದ್ರೇ, ಸಿದ್ದೇಶನ ಸುಖ ಸಂಸಾರದಲ್ಲಿ ಹುಳಿಹಿಂಡಿದ್ದು ಮಾತ್ರ ಆಪ್ತ ಸ್ನೇಹಿತ ಕೊಟ್ರೇಶ.. ಕಷ್ಟದಲ್ಲಿದ್ದ ಸ್ನೇಹಿತ ಕೊಟ್ರೇಶನಿಗೆ ಮನೆ ಬಾಡಿಗೆ ಕೊಟ್ರೆ ಆ ಪುಣ್ಯಾತ್ಮ ಸ್ನೇಹಿತ ಸಿದ್ದೇಶ ಪತ್ನಿಯನ್ನೆ ಪಟಾಯಿಸಿ  ಮೋಸ ಮಾಡಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ಸ್ನೇಹಿತನ ಮನೆಯಲ್ಲಿ ಬಾಡಿಗೆಗಿದ್ದ ಕೊಟ್ರೇಶ ಸ್ನೇಹಿತನ ಪತ್ನಿಯ ಜೊತೆಯೇ ಲವ್ವಿಡವ್ವಿ ಶುರುವಿಟ್ಟುಕೊಂಡು ಇದೀಗ ಸ್ನೇಹಿತನನ್ನೆ ಕೊಲೆ ಮಾಡಲು ಕೊಟ್ರೇಶ್ ಸ್ಜೆಚ್ ಹಾಕಿದ್ದಾನೆ.. ಅದೃಷ್ಟವಾಶಾತ್ ಕೊಲೆ ನಡೆಯದೇ ಇದ್ರೂ ತಲೆಯ ಮೇಲೆ ಬಲವಾದ ಪೆಟ್ಟು ಬಿದ್ದಿದೆ.  ಈ ಕುರಿತು ಮೋಸಕ್ಕೊಳಗಾದ ಪತಿ ಸಿದ್ದೇಶ್  ತನ್ನ ಪತ್ನಿ ಕಲ್ಪನಾ ಮತ್ತು ಮೋಸ ಮಾಡಿ ಹಲ್ಲೆ ಮಾಡಿದ ಕೊಟ್ರೇಶ ವಿರುದ್ಧ ಕೊಟ್ಟೂರು ಠಾಣೆಯಲ್ಲಿ ದೂರು ನೀಡಿದ್ದಾರೆ..   

ಮೂರುನಾಲ್ಕು ಬಾರಿ ಕೊಲೆ ಯತ್ನ ನಡೆದಿತ್ತು
ಸ್ನೇಹಿತನ ಪತ್ನಿ ಕಲ್ಪನಾಳನ್ನ ಪಟಾಯಿಸಿದ್ದ ಕೊಟ್ರೇಶ ಒಂದು ಭಾರಿ ಮನೆಯಲ್ಲೆ ಸಿದ್ದೇಶಗೆ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ರು. ಆಗ ನನ್ನ ಮೇಲೆ ಅನುಮಾನ ಪಡ್ತೀಯಾ ಅಂತಾ ಪತ್ನಿ ಜಗಳ ಮಾಡಿದ್ದಳಂತೆ. ಹೀಗಾಗಿ ಇದೆಲ್ಲ ಸುಳ್ಳು ಎಂದುಕೊಂಡಿದ್ದ ಪತಿ ಸಿದ್ದೇಶನಿಗೆ ಕೆಲವೇ ದಿನಗಳಲ್ಲಿ ಇಬ್ಬರ ಅಕ್ರಮ ಸಂಬಂಧದ ಅರಿವಾಗಿತ್ತು .. ಹೀಗಾಗಿ ಪತಿ ಸಿದ್ದೇಶ ಪತ್ನಿಯನ್ನ ತವರು ಮನೆಗೆ ಕಳುಹಿಸಿದ್ದನು. ಇದರಿಂದಾಗಿ ಪತ್ನಿ ಕಲ್ಪನಾ ಮತ್ತು  ಕೊಟ್ರೇಶ ಇಬ್ಬರು ಸೇರಿಕೊಂಡು ಪತಿ ಸಿದ್ದೇಶನನ್ನ ಕೊಲೆ ಮಾಡಲು ಯತ್ನಿಸಿದ್ದಾರೆ.. ಒಂದೇರಡು ಬಾರಿ ಪ್ರಯತ್ನಿಸಿದ್ರು ಫಲ ಸಿಕ್ಕಿರಲಿಲ್ಲ ಆದ್ರೇ ನಿನ್ನೆ ಮತ್ತೊಮ್ಮೆ ಹಲ್ಕೆ ಮಾಡಿದ್ದು, ಅದೃಷ್ಟವಾಶಾತ್  ತಲೆಗೆ ಮಾತ್ರ ಗಾಯವಾಗಿದ್ದು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.  ಇನ್ನೂ ಕುರಿತು ಸ್ಥಳೀಯರು ರಾಜಿ ಪಂಚಾಯತಿ ಮಾಡಿದ್ರು, ಯಾವುದೇ ಪ್ರಯೋಜನವಾಗಿರಲಿಲ್ಲ..
 
ಪತ್ನಿ ತವರು ಮನೆಯಲ್ಲಿ ‌ಮಕ್ಕಳೊಂದಿಗೆ ತಂದೆ ಅನಾಥ
 ಇನ್ನೂ ದೂರು ದಾಖಲಾಗುತ್ತಿದ್ದಂತೆ ಪ್ರಿಯಕರ ಕೊಟ್ರೇಶ್ ಪರಾರಿಯಾಗಿದ್ದಾನೆ. ಪತ್ನಿ ತವರು ಮನೆಯಲ್ಲಿಯೇ ಇದ್ದು, ಎರಡು ಕಡೆ ಆಟವಾಡೋ ಮೂಲಕ ತನ್ನದೇನು ತಪ್ಪಿಲ್ಲವೆಂದು ಬಿಂಬಸ ತೋಡಗಿದ್ದಾಳೆ. ಆದ್ರೇ, ಇಷ್ಟೇಲ್ಲ ಆದ ಮೇಲೆ ತನ್ನ ಸಂಸಾರ ಹಾಳು ಮಾಡಿದ ಗೆಳೆಯನಿಗೆ ತಕ್ಕ ಶಿಕ್ಷೆಯಾಗಬೇಕು ಪತಿ ಹೋರಾಟಕ್ಕಿಳಿದಿದ್ದಾನೆ.  ಆದ್ರೇ ಇದೆಲ್ಲದರ ಮಧ್ಯೆ ಮಕ್ಕಳು ಮಾತ್ರ ಅನಾಥವಾಗಿವೆ..

click me!