ವರದಿ :ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮೇ 17): ಅಪ್ರಾಪ್ತ ಬಾಲಕಿಯ ಹಿಂದೆ ಬಿದ್ದ ಯುವಕ ಲವ್ ಮಾಡುವಂತೆ ಪೀಡಿಸಿದ ನಂತರ ಮದುವೆಯಾಗಬೇಕೆಂದು ಹಿಂದೆ ಬಿದ್ದ ಅದೇನಾಯಿತೋ ಏನೋ ಹುಡುಗಿ ಹಾಡು ಹಗಲೇ ಮನೆಯಲ್ಲಿ ನೇಣಿಗೆ ಶರಣಾದಳು. ಆ ಹುಡುಗಿ ಸಾವಿನ ಕಾರಣ ಮಾತ್ರ ನಿಗೂಢವಾಗಿದ್ದು ಪ್ರಕರಣದ ತನಿಖೆ ಬೆನ್ನು ಹತ್ತಿದ್ದಾರೆ.
ದಾವಣಗೆರೆ ಎಸ್ ಎ ರವೀಂದ್ರನಾಥ ಬಡಾವಣೆಯಲ್ಲಿ ಕಳೆದ 13 ದಿನಗಳ ಹಿಂದೆ 17 ವರ್ಷದ ಅಪ್ರಾಪ್ತ ಬಾಲಕಿ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಸಾವನ್ನಪ್ಪಿದಳು. ಆ ಸಾವು ಹುಡುಗಿಯ ತಂದೆ ಅವರ ಸಂಬಂಧಿಕರಿಗೆ ಶಾಕ್ ನೀಡಿತು. ಬೆಳಿಗ್ಗೆ ಅವರ ಅಪ್ಪ ನಾನು ತಿಂಡಿ ತಗೊಂಡು ಬರ್ತಿನಿ ಬಸವಜಯಂತಿ ಹಬ್ಬಕ್ಕೆ ಏನಾದ್ರು ಸ್ವೀಟ್ ಮಾಡೋಣ ಎಂದು ಹೇಳಿ ಮನೆ ಬಾಗಿಲಿಗೆ ಬಂದು ಬಾಗಿಲು ಬಡಿಯುವಷ್ಟರಲ್ಲಿ ಅಪ್ರಾಪ್ತ ಯುವತಿ ನೇಣು ಬಿಗಿದುಕೊಂಡಿದ್ದಳು. ಗಾಬರಿಯಾದ ತಂದೆ ಹಾಗು ಸಂಬಂಧಿಗಳು ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಲು ಯತ್ನಿಸಿದ್ರು ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದ್ದಕ್ಕಿದ್ದಂತೆ ಯುವತಿ ಸಾವನ್ನಪ್ಪಲು ಏನು ಕಾರಣ ಎಂದು ಹುಡುಕ ಹೊರಟ ಪೋಷಕರಿಗೆ ತಟ್ಟನೆ ನೆನಪಾಗಿದ್ದು ಆ ಮೂವರು. ಅವರೇ ವಿರೇಶ್ ಆನಂದ್ ಹಾಗು ಸಾಥ್ ನೀಡಿದ್ದ ವೀಣಾ.
ನಿನಗೆ ನಾನು ನನಗೆ ನೀನು ಎನ್ನುತ್ತಿದ್ದ ತಂದೆ -ಮಗಳು: ಎಸ್ ಎ ರವೀಂದ್ರನಾಥ್ ಬಡಾವಣೆಯಲ್ಲಿ ವಾಸವಾಗಿದ್ದ ಶಿವಕುಮಾರ್ ಗೆ ಕಳೆದ ವರ್ಷವಷ್ಟೇ ಶಿವಕುಮಾರ್ ಹೆಂಡತಿ ಕ್ಯಾನ್ಸರ್ ನಿಂದ ತೀರಿಕೊಂಡು ಇನ್ನು ಪತ್ನಿಯ ಸಾವನ್ನೇ ಅರಗಿಸಿಕೊಳ್ಳಲು ಶಿವಕುಮಾರ್ ಹೆಣಗಾಡುತ್ತಿದ್ದರು. ಪತ್ನಿಯನ್ನು ಕಳೆದುಕೊಂಡ ಶಿವಕುಮಾರ್ ಇರುವ ಒಬ್ಬಳೇ ಮಗಳು ಅನುಷಾಳನ್ನು ಮುದ್ದಿನಿಂದ ನೋಡಿಕೊಳ್ಳೊತ್ತಿದ್ದ. ಅಡುಗೆ ಮನೆಕೆಲಸವನ್ನು ತಾನೇ ಮಾಡಿ ಕೋಳಿ ಫಾರಂವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಶಿವಕುಮಾರ್ ಗೆ ತನ್ನ ಮಗಳ ಹಿಂದೆ ಒಬ್ಬ ಬಿದ್ದು ಪ್ರೀತಿಗೆ ಒತ್ತಾಯಿಸುತ್ತಿದ್ದಾನೆ ಎಂಬ ಸತ್ಯ ತಡವಾಗಿ ಗೊತ್ತಾಯಿತು. ಅದೇ ಬಡಾವಣೆಯಲ್ಲಿ ವೀರೇಶ್ ಎಂಬ ಯುವಕ ಅನುಷಾ ಗೆ ಪರಿಚರವಾಗಿದ್ದ. ಪರಿಚಯ ಪ್ರೇಮವಾಗಿ ತಿರುಗಿ ಅನುಷಾ ಅವನ ಕಡೆ ಕದ್ದುಮುಚ್ಚಿ ಮಾತನಾಡುತ್ತಿದ್ದಳು.
TUNGABHADRA DAM ಬೇಸಿಗೆಯಲ್ಲೂ ಭತ್ತದೆ ವಿಶೇಷತೆ ಉಳಿಸಿಕೊಂಡ ತುಂಗಭದ್ರಾ
ಕಳೆದ ಎರಡು ವರ್ಷಗಳಿಂದ ಈ ಪ್ರೀತಿ ಬೇಕು ಬೇಡ ಎಂಬ ಗೊಂದಲ ಮಧ್ಯೆ ಪೋನ್ ಸಂಭಾಷಣೆ ನಡೆದಿದೆ. ಇವರಿಬ್ಬರ ಪ್ರೀತಿ ಯುವತಿಯ ಮನೆಯಲ್ಲಿ ಗೊತ್ತಾದ ನಂತರ ಈ ರೀತಿ ಪ್ರೀತಿ ಪ್ರೇಮ ಬೇಡ ಎಂದು ಅನುಷಾ ತಂದೆ ಶಿವಕುಮಾರ್ ಬುದ್ದಿವಾದ ಹೇಳಿದ್ದಾರೆ. ಕೆಲ ತಿಂಗಳುಗಳ ಕಾಲ ಇಬ್ಬರ ಪ್ರೀತಿ ಕಟ್ ಆಗಿದ್ದು, ನಂತರ ಅನುಷಾ ಗೆ ಬೇರೆ ಯುವಕನನ್ನು ನೋಡಿ ಮದುವೆ ಮಾಡಬೇಕು ಎಂದು ಮನೆಯಲ್ಲಿ ಚಿಂತಿಸಿದಾಗ ವೀರೇಶ್ ಯುವತಿ ಅನುಷಾಗೆ ತಾನು ನನಗೆ ಮದುವೆ ಆಗ್ಬೇಕೆಂದು ಕಾಟ ಕೊಟ್ಟಿದ್ದಾನೆ. ಕಾಟ ತಾಳಲಾರದೆ ಅಪ್ರಾಪ್ತ ಬಾಲಕಿ ಅನುಷಾ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ತಂದೆ ಶಿವಕುಮಾರ್ ತಿಳಿಸಿದ್ದಾರೆ.
ಇಬ್ಬರ ಮಧ್ಯೆ ಸೇತುವೆಯಾಗಿದ್ದು ಲೇಡಿನಾ?
ಇನ್ನು ವೀರೇಶ್ ಜೊತೆ ಅವರ ಮನೆ ಪಕ್ಕದಲ್ಲಿದ್ದ ವೀಣಾ ಎನ್ನುವ ಮಹಿಳೆ, ಸ್ನೇಹಿತ ಆನಂದ್ ಕೂಡ ವೀರೇಶ್ ನಿಗೆ ಬೆಂಬಲ ನೀಡಿದ್ದರು ಎಂದು ಪೋಷಕರು ದೂರು ನೀಡಿದ್ದಾರೆ. ತಂದೆ ಶಿವಕುಮಾರ್ ಕೆಲಸಕ್ಕೆ ಹೋಗಿದ್ದಾಗ ವೀಣಾ ಎಂಬ ಮಹಿಳೆ ಮನೆಯಲ್ಲಿ ಅನುಷಾ ವೀರೇಶ್ ಪರಸ್ಪರ ಸಂಪರ್ಕಿಸುತ್ತಿದ್ದರು. ಶಿವಕುಮಾರ್ ಜೊತೆ ಕೆಲಸ ಮಾಡುತ್ತಿದ್ದ ಆನಂದ್ ತಂದೆಯ ಚಲನವಲನಗಳ ಬಗ್ಗೆ ವೀರೇಶ್ ಗೆ ಮಾಹಿತಿ ಕೊಡುತ್ತಿದ್ದ. ಇಬ್ಬರ ಪರಸ್ಪರ ಪ್ರೀತಿಗೆ ವೀಣಾ ಮತ್ತು ಆನಂದ್ ಸಾಥ್ ಕೊಟ್ಟಿದ್ದು ಹುಡುಗಿ ತಲೆಕೆಡಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಇವರು ಕಾರಣ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
Mining Effect ಬಂಟ್ವಾಳ ಕಾರಿಂಜೇಶ್ವರನಿಗೆ ಆಪತ್ತು, ಉರುಳಿಬಿದ್ದ ಬೃಹತ್ ಬಂಡೆ!
ಬೇರೆ ಹುಡುಗನ ಜೊತೆ ಮದುವೆಗೆ ಪ್ಲಾನ್ ಮಾಡಿದ್ದು ಸುಸೈಡ್‌ಗೆ ಕಾರಣವಾಯ್ತಾ?
ಪ್ರೀತಿ ಪ್ರೇಮದ ವಿಚಾರ ಮನೆಯಲ್ಲಿ ಗೊತ್ತಾದ ನಂತರ ಬೇರೆ ಯುವಕನ ಜೊತೆ ಮದುವೆ ಮಾಡಲು ಅನುಷಾ ತಂದೆ ಅತ್ತೆ ನೀಲಮ್ಮ ಪ್ಲಾನ್ ಮಾಡಿದ್ದರು. ಅದಕ್ಕೆ ಗೊತ್ತಿರುವ ಸಂಬಂಧದಲ್ಲೇ ಒಬ್ಬ ಹುಡುಗನನ್ನು ಹುಡುಕಿದ್ದರು. ಇತ್ತ ವಿರೇಶ್ ನ ಪ್ರೀತಿ ಇನ್ನೊಂದು ಕಡೆ ಮದುವೆ ಈ ಟಾರ್ಚರ್ ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಮಾತು ಬಡಾವಣೆಯಲ್ಲಿ ಕೇಳಿಬಂದಿದೆ. ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ದಾವಣಗೆರೆ ವಿಧ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಡುಗಿ ಹಿಂದೆ ಬಿದ್ದಿದ್ದ ವಿರೇಶ್ ನನ್ನು ಬಂಧಿಸಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆನಂದ್ ವೀಣಾ ಸಿಕ್ಕ ನಂತರ ಅನುಷಾ ಸಾವಿನ ನಿಗೂಢತೆ ಬಯಲಾಗುವ ಸಾಧ್ಯತೆ ಇದೆ.