ಎರಡು ಮಕ್ಕಳ ತಂದೆ ಮೇಲೆ ಪ್ರೇಮಾಂಕುರ, ಮನೆಯಲ್ಲಿದ್ದ 1 ಕೆ.ಜಿ ಚಿನ್ನ ಕದ್ದು ಲವರ್​ಗೆ ಕೊಟ್ಟ ಪ್ರಿಯತಮೆ

Published : May 17, 2022, 01:31 PM IST
ಎರಡು ಮಕ್ಕಳ ತಂದೆ ಮೇಲೆ ಪ್ರೇಮಾಂಕುರ, ಮನೆಯಲ್ಲಿದ್ದ 1 ಕೆ.ಜಿ ಚಿನ್ನ ಕದ್ದು ಲವರ್​ಗೆ ಕೊಟ್ಟ ಪ್ರಿಯತಮೆ

ಸಾರಾಂಶ

* ಎರಡು ಮಕ್ಕಳ ತಂದೆ ಮೇಲೆ ಪ್ರೇಮಾಂಕುರ * ಮನೆಯಲ್ಲಿದ್ದ 1 ಕೆ.ಜಿ ಚಿನ್ನ ಕದ್ದು ಲವರ್​ಗೆ ಕೊಟ್ಟ ಪ್ರಿಯತಮೆ * ಪುತ್ರಿಯ ಖತರ್ನಾಕ್​ ಕೆಲಸವನ್ನು ಪತ್ತೆಹಚ್ಚಿದ ತಾಯಿ 

ಬೆಂಗಳೂರು, (ಮೇ.17): ಮನೆಯಲ್ಲಿದ್ದ ಚಿನ್ನವನ್ನು ಕದ್ದು ಪ್ರಿಯಕರನಿಗೆ ನೀಡಿದ್ದ ಚಾಲಾಕಿ ಮಗಳ ವಿರುದ್ಧ ಇದೀಗ ತಾಯಿ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಜಕ್ಕೂರು ಲೇಔಟ್​​ನಲ್ಲಿ ನಡೆದಿದೆ.

ದೀಪ್ತಿ (24) ಹಾಗೂ ಮದನ್(27) ಬಂಧಿತ ಜೋಡಿ. ಆರೋಪಿ ದೀಪ್ತಿ ತನ್ನ ಮನೆಯಲ್ಲಿದ್ದ ಚಿನ್ನವನ್ನು ಒಂದೊಂದಾಗೇ ಕದ್ದು ಬರೋಬ್ಬರಿ 1 ಕೆಜಿ ಚಿನ್ನವನ್ನು ಪ್ರಿಯಕರ ಮದನ್ ಗೆ ನೀಡಿದ್ದಳು. ಇದಾದ ಬಳಿಕ ಕದ್ದ ಚಿನ್ನವನ್ನು ಪ್ರಿಯಕರನ ಜತೆ ಸೇರಿ ಅಡಮಾನ ಇಟ್ಟು ಹಣ ಪಡೆದುಕೊಂಡಿದ್ದರು. ಇದೀಗ ಪ್ರೇಮಿಗಳಿಬ್ಬರ ಖತರ್ನಾಕ್​ ಕೆಲಸ ಬಯಲಾಗಿದ್ದು, ಅಮೃತಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅಂಟಿಯ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ : ವಿಡಿಯೋ ವೈರಲ್

ಆರೋಪಿ ದೀಪ್ತಿಗೆ ಮದುವೆಯಾಗಿ ಡಿವೋರ್ಸ್ ಆಗಿದೆ. ಮನೆಯಲ್ಲಿ ಅಮ್ಮ ಮತ್ತು ಮಗಳು ಮಾತ್ರ ವಾಸಿಸುತ್ತಿದ್ದಾರೆ. ಆರೋಪಿ ಮದನ್​ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮದನ್ ಡ್ರೈವಿಂಗ್ ಶಾಲೆಯೊಂದರಲ್ಲಿ‌ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಶಾಲೆಗೆ ದೀಪ್ತಿ ಡ್ರೈವಿಂಗ್ ಕಲಿಯಲು ಹೋಗಿದ್ದಳು. ಈ ವೇಳೆ ಮದನ್​ ಜತೆ ದೀಪ್ತಿಗೆ ಪ್ರೇಮಾಂಕುರವಾಗಿದೆ.

ಪ್ರಿಯತಮನಿಗಾಗಿ ಮನೆಯಲ್ಲಿದ್ದ ತಾಯಿಯ ಒಡವೆ ಎಲ್ಲವನ್ನು ದೀಪ್ತಿ ನೀಡಿದ್ದಳು. ಅದೇ ಜಾಗಕ್ಕೆ ರೋಲ್ಡ್ ಗೋಲ್ಡ್ ಚಿನ್ನ ತಂದು ಇಟ್ಟಿದ್ದಳು. ಚಿನ್ನದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತಾಯಿ ಮಗಳನ್ನು ಪ್ರಶ್ನಿಸಿದ್ದಳು. ಇದ್ದ ಇಬ್ಬರಲ್ಲಿ ಕದ್ದವರ್ಯಾರು ಅನ್ನೋ ಅನುಮಾನ ತಾಯಿಗೆ ಮೂಡಿತ್ತು. ಮಗಳ ಮೇಲೆಯೇ ಅನುಮಾನಗೊಂಡಿದ್ದ ತಾಯಿ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಬಳಿಕ ವಿಚಾರಣೆ ವೇಳೆ ದೀಪ್ತಿಯ ಅಮರ ಮಧುರ ಪ್ರೇಮ ಬೆಳಕಿಗೆ ಬಂದಿದೆ.

ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್​ನಲ್ಲಿ ಅಡಮಾನ ಇಟ್ಟಿದ್ದರು. ಅಡಮಾನ ಇಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದರು. ಸದ್ಯ ಕಳುವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮೃತಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಸ್ನೇಹಿತರ ಬೈಕ್‌ ಪಡೆದು ಮೊಬೈಲ್‌ ದೋಚುತ್ತಿದ್ದ ಬಾಲ್ಯದ ಗೆಳೆಯರು!
ಬೆಂಗಳೂರು(ಮೇ.17): 
 ಸ್ನೇಹಿತರ ದ್ವಿಚಕ್ರ ವಾಹನ ಬಳಸಿಕೊಂಡು ಸಾರ್ವನಿಕರ ಮೊಬೈಲ್‌(Mobile) ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಮೂವರು ಬಾಲ್ಯದ ಗೆಳೆಯರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ದರ್ಶನ್‌(21), ಜಾಜ್‌ರ್‍(20) ಹಾಗೂ ದಿನೇಶ್‌ ಅಲಿಯಾಸ್‌ ಅಪ್ಪು(23) ಬಂಧಿತರು. ಇವರಿಂದ .1.5 ಲಕ್ಷ ಮೌಲ್ಯದ 9 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಮಾ.29ರಂದು ನಾಗೇನಹಳ್ಳಿ ರೈಲ್ವೆ ಗೇಟ್‌ ಬಳಿ ಸಂಜೆ ಐದು ಗಂಟೆ ಸುಮಾರಿಗೆ ವಿದ್ಯಾರ್ಥಿನಿಯೊಬ್ಬಳು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವಾಗ, ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದಿರುವ ಇಬ್ಬರು ಅಪರಿಚಿತರು ಏಕಾಏಕಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು(Accused) ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂವರು ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದಾರೆ. ಆರೋಪಿ ದರ್ಶನ್‌ನ ತಂದೆ-ತಾಯಿ ಮೃತಪಟ್ಟಿದ್ದಾರೆ. ಹೀಗಾಗಿ ಸ್ನೇಹಿತರ ಜತೆ ಕಳ್ಳತನ ಮಾಡಿಕೊಂಡು ಮೋಜು-ಮಸ್ತಿ ಜೀವನ ನಡೆಸುತ್ತಿದ್ದ. 2019ರಲ್ಲಿ ತನ್ನ ಸ್ನೇಹಿತ ಲಕ್ಷ್ಮಣ ಎಂಬಾತನ ಜತೆ ಸೇರಿಕೊಂಡು ದ್ವಿಚಕ್ರ ವಾಹನ ಕಳವು ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದ್ದ. ಬಳಿಕ ಜೈಲಿನಿಂದ ಹೊರಬಂದು ಬಾಲ್ಯ ಸ್ನೇಹಿತರಾದ ಜಾಚ್‌ರ್‍ ಹಾಗೂ ದಿನೇಶ್‌ ಜತೆ ಸೇರಿಕೊಂಡು ಸಾರ್ವಜನಿಕರ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!