ಒಂದು ದಿನದ ನವಜಾತ ಹೆಣ್ಣು ಶಿಶುವನ್ನು ಪೊದೆಯಲ್ಲಿ ಬಿಸಾಕಿ ಹೋದ ಪಾಪಿಗಳು!

By Ravi Janekal  |  First Published Sep 4, 2024, 9:26 PM IST

ಒಂದು ದಿನದ ನವಜಾತ ಶಿಶುವನ್ನು ದುಷ್ಕರ್ಮಿಗಳು ಪೊದೆಯಲ್ಲಿ ಬಿಸಾಕಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ವಿಜಯನಗರದಲ್ಲಿ ನಡೆದಿದೆ. 


ಕಾರವಾರ, ಉತ್ತರಕ‌ನ್ನಡ (ಸೆ.4): ಒಂದು ದಿನದ ನವಜಾತ ಶಿಶುವನ್ನು ದುಷ್ಕರ್ಮಿಗಳು ಪೊದೆಯಲ್ಲಿ ಬಿಸಾಕಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ವಿಜಯನಗರದಲ್ಲಿ ನಡೆದಿದೆ. 

ಜೋಪಡಿಯೊಂದರ ಟಾಯ್ಲೆಟ್ ಬಳಿ ಬಿಸಾಕಿ ಹೋಗಿರುವ ದುರುಳರು.  ಬೆಳಗ್ಗೆ 5 ಗಂಟೆ ಸುಮಾರಿಗೆ ನವಜಾತ ಶಿಶು ಅಳುತ್ತಿರುವ ಸದ್ದು ಕೇಳಿದೆ. ಪಕ್ಕದ ಮನೆಯವರದ್ದೆಂದು ಜೋಪಡಿ ನಿವಾಸಿಗಳು ಸುಮ್ಮನಾಗಿದ್ದಾರೆ. ಆದರೆ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋಗುವಾಗ ಪೊದೆಯಲ್ಲಿ ಮಗು ಬಿಸಾಕಿರುವುದು ಕಾಣಿಸಿದೆ. ಕರುಳು ಬಳ್ಳಿಯನ್ನು ಕೂಡಾ ಕತ್ತರಿಸದೇ ಪೊದೆಯಲ್ಲಿ ಬಿಸಾಕಿರುವ ಪಾಪಿಗಳು.  ಹೆಣ್ಣುಮಗುವಾಗಿದ್ದರಿಂದ ಬಿಸಾಡಿ ಹೋದ್ರ ಅಥವಾ ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗು ಬಿಟ್ಟು ಹೋಗಿರಬಹುದಾ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ದಾವಣಗೆರೆ: ಒಂದೇ ಗ್ರಾಮದಲ್ಲಿ, ಒಂದೇ ದಿನ 7 ಸಾವು, ಅಂತ್ಯಕ್ರಿಯೆಗೆ ಜಾಗ ಕೂಡ ಇಲ್ಲ..!

ಅದೃಷ್ಟವಶಾತ್ ಬೀದಿನಾಯಿಗಳು ಅತ್ತ ಸುಳಿದಿಲ್ಲ. ಅಳುತ್ತಿರುವ ಮಗುವನ್ನು ಕಂಡ ಕೂಡಲೇ ಸ್ಥಳೀಯರನ್ನು ಕರೆಯಿಸಿ ಮಗುವಿನ ರಕ್ಷಣೆ ಮಾಡಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಸ್ಥಳೀಯರು. ಆಶಾ ಕಾರ್ಯಕರ್ಯರು ಹಾಗೂ ಅಧಿಕಾರಿಗಳ ಸಹಾಯದಿಂದ ಆ್ಯಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ ಕಾರಣ ಅಪಾಯದಿಂದ ಪಾರಾಗಿರುವ ಮಗು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರವು ಮಗು ಆರೋಗ್ಯವಾಗಿದೆ.
ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!