ಬೊಗಳಿತೆಂದು ನಾಯಿ ಹಾಗೂ ಮಾಲೀಕನ ಮೇಲೆ ಅಮಾನುಷ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

By Anusha KbFirst Published Jul 5, 2022, 6:01 PM IST
Highlights

ನಾಯಿ ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದು ವ್ಯಕ್ತಿಯೊಬ್ಬ ನಾಯಿ ಹಾಗೂ ಮಾಲೀಕನಿಗೆ ಕಬ್ಬಿಣದ ರಾಡ್‌ನಿಂದ ಅಮಾನವೀಯವಾಗಿ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿ: ನಾಯಿ ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದು ವ್ಯಕ್ತಿಯೊಬ್ಬ ನಾಯಿ ಹಾಗೂ ಮಾಲೀಕನಿಗೆ ಕಬ್ಬಿಣದ ರಾಡ್‌ನಿಂದ ಅಮಾನವೀಯವಾಗಿ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಪಶ್ಚಿಮ್ ವಿಹಾರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಹೊಡೆದಾಟದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಘಟನೆಯಲ್ಲಿ ನಾಯಿ ಹಾಗೂ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಯಿ ಹಾಗೂ ನಾಯಿಯ ಮಾಲೀಕರಿಗೆ ಹೊಡೆದ ವ್ಯಕ್ತಿಯ ವಿರುದ್ಧ ತೀವ್ರ ಆಕ್ರೋಶ ಕೇಳಿ ಬಂದಿದೆ. ದೊಣ್ಣೆ ಹಾಗೂ ರಾಡ್‌ನಿಂದ ಹೊಡೆದ ಪರಿಣಾಮ ನಾಯಿಗೂ ಗಂಭೀರ ಗಾಯಗಳಾಗಿವೆ. 

ವೀಡಿಯೊದಲ್ಲಿ, ಧರ್ಮವೀರ್ ದಹಿಯಾ (Dharamvir Dahiy) ಎಂದು ಗುರುತಿಸಲಾದ ವ್ಯಕ್ತಿ ಮೊದಲು ನಾಯಿ ಬೊಗಳಿತು ಎಂದು ನಾಯಿಗೆ ಹೊಡೆಯಲು ಬಂದಿದ್ದಾನೆ. ಈ ವೇಳೆ ಮಹಿಳೆ ಆತನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಆತ ಮಹಿಳೆಗೆ ದೊಣ್ಣೆಯಲ್ಲಿ ಸರಿಯಾಗಿ ಬಾರಿಸಿ ಮುಂದೆ ಹೋಗಿದ್ದಾನೆ. ಇದಾದ ನಂತರ ಮನೆಯವರು ನೆರೆ ಮನೆಯವರು ಎಲ್ಲರೂ ಅಲ್ಲಿ ಸೇರಿದ್ದಾರೆ. ಮನೆಯವರು ಧರ್ಮವೀರ್‌ನನ್ನು ತಡೆಯಲು ಹೋದಾಗ ಅವರಿಗೂ ಆತ ಬಾರಿಸಿದ್ದಾನೆ. ಈತ ಹೊಡೆದ ರಭಸಕ್ಕೆ ನಾಯಿ ಕೆಳಗೆ ಬಿದ್ದು ಕೆಲ ಕಾಲ ಪ್ರಜ್ಞಾಶೂನ್ಯವಾಗಿದೆ. ಮತ್ತೆ ಮೇಲೆದ್ದ ಶ್ವಾನ ತನ್ನ ಮನೆಯವರ ರಕ್ಷಣೆಗೆ ಮುಂದಾಗಿದೆ. 

Delhi |A man injured 3 members of a family in his neighbourhood in Paschim Vihar by hitting them with an iron rod allegedly after their pet dog barked at him. He also hit the dog & injured it

Dog's owner says they filed complaint,FIR yet to be registered. Injured under treatment pic.twitter.com/Do0j4QmMVR

— ANI (@ANI)

 

ಈ ವೇಳೆ ಮನೆ ಮಂದಿ ಶ್ವಾನವನ್ನು ಹಿಡಿಯಲು ಯತ್ನಿಸಿದ್ದಾರೆ. ಅಲ್ಲದೇ ಪರಸ್ಪರ ಹೊಡೆದಾಟ ನಡೆದಿದ್ದು, ನಾಯಿಗೆ ಹೊಡೆದಾಟ ಮನೆ  ಮಂದಿಯೆಲ್ಲರನ್ನು ಹೊಡೆದು ಗಾಯಗೊಳಿಸಿದ್ದಾನೆ. ಈತನ ಹೊಡೆತಕ್ಕೆ ಸಿಲುಕಿದ ನಾಯಿಯ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಅದನ್ನು ಪಶುವೈದ್ಯರ ಬಳಿ ಕರೆದೊಯ್ಯಲಾಗುವುದು ಎಂದು ಮನೆಯವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ,  ಧರ್ಮವೀರ್ ದಹಿಯಾ ಅವರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಯಿ ಎದುರಾಗಿದ್ದು, ಅದು ದಹಿಯಾ ಅವರನ್ನು ನೋಡಿ ಬೊಗಳಿದೆ. ಇದಕ್ಕೆ ಅವರು ನಾಯಿಯ ಬಾಲ ಹಿಡಿದು ದೂರ ಎಸೆಯಲು ಯತ್ನಿಸಿದ್ದಾರೆ. ಈ ವೇಳೆ ನಾಯಿಯ ಮಾಲೀಕ ರಕ್ಷಿತ್ ಅಲ್ಲಿಗೆ ಆಗಮಿಸಿ ತನ್ನ ಸಾಕು ಪ್ರಾಣಿಯ ರಕ್ಷಣೆಗೆ ಮುಂದಾಗಿದ್ದಾರೆ. ಇದಾದ ಬಳಿಕ ದಹಿಯಾ ದೊಣ್ಣೆಯೊಂದಿಗೆ ಸೀದಾ ಹೋಗಿ ನಾಯಿಯ ಮಾಲೀಕನ ಮನೆಗೆ ಹೋಗಿದ್ದಾರೆ. ಇದಾದ ಬಳಿಕ ಇಷ್ಟೆಲ್ಲಾ ಹೊಡೆದಾಟ ಬಡಿದಾಟಗಳು ನಡೆದಿವೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ನಾಯಿಯ ಮನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. 

ಇದನ್ನು ಓದಿ: ತನ್ನನ್ನು ಕಂಡ ನಾಯಿ ಬೊಗಳಿತೆಂದು ರೊಚ್ಚಿಗೆದ್ದ ಯುವಕ ಮಾಡಿದ್ದೇನು ಗೊತ್ತಾ?

ರಕ್ಷಿತ್ (Rakshit) ಹೇಳಿಕೆಯ ಮೇಲೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 308 (ಅಪರಾಧೀಯ ನರಹತ್ಯೆಗೆ ಪ್ರಯತ್ನ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ), 341 (ತಪ್ಪಾದ ಸಂಯಮ), ಮತ್ತು 451 (ಅಪರಾಧ ಮಾಡಲು ಮನೆ-ಅತಿಕ್ರಮಣ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ (ಪ್ರಾಣಿಗಳ ಕ್ರೂರ ಚಿಕಿತ್ಸೆ) ಸೆಕ್ಷನ್ 11 ಅಡಿ ಆರೋಪಿ ದಹಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಮತ್ತು ಸತ್ಯಾಂಶಗಳನ್ನು ಪಡೆಯಲಾಗುತ್ತಿದೆ ಎಂದು ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಸಮೀರ್ ಶರ್ಮಾ (Sameer Sharma) ಹೇಳಿದ್ದಾರೆ.

ಇದನ್ನು ಓದಿ: ನಾಯಿ ಬೊಗಳಿತೆಂದು ನಾಯಿಯ ವಯೋವೃದ್ಧ ಮಾಲೀಕನನ್ನೇ ಕೊಂದ ಬಾಲಕ
 

click me!