ನಾಯಿ ಬೊಗಳಿತೆಂದು ನಾಯಿಯ ವಯೋವೃದ್ಧ ಮಾಲೀಕನನ್ನೇ ಕೊಂದ ಬಾಲಕ
- ನಾಯಿ ಬೊಗಳಿದ್ದಕ್ಕೆ ಸಿಟ್ಟಿಗೆದ್ದ ಬಾಲಕ
- ವಯೋವೃದ್ಧ ಮಾಲೀಕನನ್ನೇ ಕೊಂದ
- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಘಟನೆ
ನವದೆಹಲಿ(ಮಾ.24): 17 ವರ್ಷದ ತರುಣನೋರ್ವ ನಾಯಿ ಬೊಗಳಿತೆಂದು ನಾಯಿಯ ಮಾಲೀಕನೂ ಆದ 85 ವರ್ಷದ ವಯೋವೃದ್ಧನನ್ನು ಹತ್ಯೆ ಮಾಡಿದ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ದ್ವಾರಕಾ (Dwarka) ಪೊಲೀಸರು ಈ ವಿಚಾರ ತಿಳಿಸಿದ್ದಾರೆ. ಮಾರ್ಚ್ 18 ರಂದು ಸಂಜೆ ನಜಾಫ್‌ಗರ್ (Najafgarh) ಪ್ರದೇಶದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಪೊಲೀಸ್ ಠಾಣೆಗೆ ದೂರವಾಣಿ ಕರೆ ಬಂದಿದ್ದು, ಪೊಲೀಸರು ನಂತರ ಆ ಪ್ರದೇಶಕ್ಕೆ ತೆರಳಿದ್ದಾರೆ. ಆದರೆ ಈ ವೇಳೆ ಅಲ್ಲಿ ಅವರಿಗೆ ಯಾವುದೇ ಗಲಾಟೆ ನಡೆಯುತ್ತಿರುವ ದೃಶ್ಯ ಕಾಣಲು ಸಿಕ್ಕಿಲ್ಲ. ನಂತರ ಪೊಲೀಸರು 85 ವರ್ಷದ ವೃದ್ಧನ ಪತ್ನಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಕಾರು ಅಪಘಾತ: ಅಪಾಯದಲ್ಲಿದ್ದ ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನ
ಈ ವೇಳೆ ಅವರು 17 ವರ್ಷದ ನೆರೆ ಮನೆಯ ಹುಡುಗನೋರ್ವ ನಮ್ಮ ಮನೆಗೆ ನುಗ್ಗಿ ನನ್ನ ಪತಿ ಅಶೋಕ್ ಅವರನ್ನು ರಾಡ್‌ನಿಂದ ಥಳಿಸಿದ್ದಾನೆ ಎಂದು ಹೇಳಿದ್ದಾರೆ. ನಂತರ ತನಿಖೆ ವೇಳೆ ವೃದ್ಧನ ನಾಯಿ ಆ ತರುಣನಿಗೆ ಬೊಗಳಿದೆ ಎಂಬುದು ಗೊತ್ತಾಗಿದೆ. ವೃದ್ಧನ ಮನೆಗೆ ಬಂದ ತರುಣನಿಗೆ ನಾಯಿ ಜೋರಾಗಿ ಬೊಗಳಲು ಶುರು ಮಾಡಿದೆ. ಈ ವೇಳೆ ಆತ ನಾಯಿಗೆ ಹೊಡೆಯಲು ಶುರು ಮಾಡಿದ್ದಾನೆ. ಆಗ ತಡೆಯಲು ಹೋದ ವೃದ್ಧ ಮಾಲೀಕನ ಮೇಲೂ ಆತ ರಾಡ್‌ನಿಂದ ಸರಿಯಾಗಿ ಬಾರಿಸಿದ್ದು, ಥಳಿತಕ್ಕೊಳಗಾದ ಅವರು ಗಂಭೀರವಾಗಿ ಗಾಯಗೊಂಡಿದ್ದು ಮಾರ್ಚ್ 20 ರಂದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃದ್ಧನ ಸಾವಿಗೂ ಮೊದಲು ಹಲ್ಲೆ ಮಾಡಿದ ಕಾರಣಕ್ಕೆ ಈ ತರುಣನನ್ನು ಬಂಧಿಸಲಾಗಿತ್ತು. ಆದರೆ ನಂತರ ಬಾಲ ನ್ಯಾಯ ಮಂಡಳಿ ಆತನನ್ನು ಬಿಡುಗಡೆಗೊಳಿಸಿತ್ತು. ಇದಾದ ಬಳಿಕ ಮಾರ್ಚ್ 20 ರಂದು ಅಶೋಕ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಶೋಕ್ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಪೊಲೀಸರು ಇದೀಗ ಮತ್ತೆ ಮೃತ ಆಶೋಕ್ (Ashok) ಪತ್ನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಬಾಲಾಪರಾಧಿಯನ್ನು ಮತ್ತೆ ಬಂಧಿಸಲು ಅರ್ಜಿ ಸಲ್ಲಿಸಿದ್ದಾರೆ.
ಪ್ರೀತಿಯ ಶ್ವಾನದ ಬರ್ತ್‌ಡೇಗೆ ಅದ್ದೂರಿ ಪಾರ್ಟಿ... ಯುವಕ ಖರ್ಚು ಮಾಡಿದ್ದು ಎಷ್ಟು ಲಕ್ಷ...?
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಯಿ ವಿಚಾರವಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ನಡೆದು ಮಹಿಳೆಯೊಬ್ಬರು ನಾಯಿಯ ಮಾಲಕಿಗೆ ಕಚ್ಚಿದ ವಿಚಿತ್ರ ಘಟನೆ ಜರ್ಮನಿಯಲ್ಲಿ ನಡೆದಿತ್ತು. ಪೂರ್ವ ಜರ್ಮನಿ (eastern Germany) ಯಲ್ಲಿ ಸಾಕು ನಾಯಿಗೆ ಶಿಸ್ತು ಕಲಿಸುವ ಬಗ್ಗೆ ಇಬ್ಬರು ಮಹಿಳೆಯ ಮಧ್ಯೆ ಕಲಹ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ತನ್ನ ನಾಯಿಗೆ ಹೊಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ 51 ವರ್ಷದ ಮಹಿಳೆಯೊಬ್ಬಳು ಆಕೆಗೆ ಕಚ್ಚಿದ್ದಾಳೆ. ಮೊಣಕಾಲಿನ ಕೆಳಗೆ ಕಾಲಿನ ಹಿಂಭಾಗ ಮಹಿಳೆ ಕಚ್ಚಿದ್ದು ಪರಿಣಾಮ 27 ವರ್ಷದ ಮಹಿಳೆ ಇದರಿಂದ ತೀವ್ರ ನೋವಿಗೊಳಗಾಗಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಈ ಇಬ್ಬರು ಮಹಿಳೆಯರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಜರ್ಮನ್ ಪೊಲೀಸರ ಹೇಳಿಕೆ ಪ್ರಕಾರ ಈ ಇಬ್ಬರು ಮಹಿಳೆಯರ ಜಗಳದ ವೇಳೆ ನಾಯಿ ಮಾತ್ರ ಯಾರಿಗೂ ಕಚ್ಚದೇ ಸುಮ್ಮನೇ ನೋಡುತ್ತಾ ನಿಂತಿತ್ತು ಎಂದು ಹೇಳಿದ್ದಾರೆ. ಜರ್ಮನ್‌ನ ಕಾನೂನಿನ ಪ್ರಕಾರ, ನಾಯಿ ಸಾಕುವವರು ತಮ್ಮ ನಾಯಿಗಳನ್ನು ಗಾರ್ಡನ್‌ಗಳಲ್ಲಿ ದಿನಕ್ಕೆ ಎರಡು ಬಾರಿ ಒಟ್ಟು ಒಂದು ಗಂಟೆ ವಾಕ್ ಕರೆದುಕೊಂಡು ಹೋಗುಬೇಕು ಅಥವಾ ರನ್ನಿಂಗ್ ಮಾಡಿಸಬೇಕು ಎಂಬ ನಿಯಮವಿದೆ.