Maharaja Trophy: ಶಿವಮೊಗ್ಗ, ಗುಲ್ಬರ್ಗ ಸೆಮೀಸ್‌ಗೆ ಲಗ್ಗೆ..! ಇಂದೇ ಸೆಮೀಸ್ ಫೈಟ್

Published : Aug 28, 2023, 09:35 AM IST
Maharaja Trophy: ಶಿವಮೊಗ್ಗ, ಗುಲ್ಬರ್ಗ ಸೆಮೀಸ್‌ಗೆ ಲಗ್ಗೆ..! ಇಂದೇ ಸೆಮೀಸ್ ಫೈಟ್

ಸಾರಾಂಶ

ಭಾನುವಾರ ನಡೆದ ಕೊನೆ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಶಿವಮೊಗ್ಗ ತಂಡ 11 ರನ್‌ ಗೆಲುವು ಸಾಧಿಸಿತು. ಇದರೊಂದಿಗೆ ತಂಡ 10 ಪಂದ್ಯಗಳಲ್ಲಿ 10 ಅಂಕ ಸಂಪಾದಿಸಿ, 4ನೇ ತಂಡವಾಗಿ ಸೆಮೀಸ್‌ಗೇರಿತು.

ಬೆಂಗಳೂರು(ಆ.28): ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಅಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಸೆಮಿಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಭಾನುವಾರ ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಕೊನೆ ದಿನ ಶಿವಮೊಗ್ಗ ಲಯನ್ಸ್‌ ಹಾಗೂ ಕಳೆದ ಬಾರಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ ತಂಡಗಳು ಅಂತಿಮ 4ರ ಘಟ್ಟ ಪ್ರವೇಶಿಸಿದವು. ಹುಬ್ಬಳ್ಳಿ ಟೈಗರ್ಸ್‌ ಹಾಗೂ ಮೈಸೂರು ವಾರಿಯರ್ಸ್‌ ತಂಡಗಳು ಈಗಾಗಲೇ ಸೆಮೀಸ್‌ ಸ್ಥಾನ ಖಚಿತಪಡಿಸಿಕೊಂಡಿತ್ತು.

ಭಾನುವಾರ ನಡೆದ ಕೊನೆ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಶಿವಮೊಗ್ಗ ತಂಡ 11 ರನ್‌ ಗೆಲುವು ಸಾಧಿಸಿತು. ಇದರೊಂದಿಗೆ ತಂಡ 10 ಪಂದ್ಯಗಳಲ್ಲಿ 10 ಅಂಕ ಸಂಪಾದಿಸಿ, 4ನೇ ತಂಡವಾಗಿ ಸೆಮೀಸ್‌ಗೇರಿತು. ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ 5 ವಿಕೆಟ್‌ಗೆ 192 ರನ್‌ ಕಲೆ ಹಾಕಿತು. 12 ಓವರ್‌ಗಳಲ್ಲಿ 86ಕ್ಕೆ 4 ವಿಕೆಟ್‌ ಕಳೆದುಕೊಂಡ ಬಳಿಕ ಅಭಿನಬ್‌ ಮನೋಹರ್‌ ಹಾಗೂ ನಾಯಕ ಶ್ರೇಯಸ್‌ ಗೋಪಾಲ್‌ 102 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಅಭಿನವ್‌ 25 ಎಸೆತಗಳಲ್ಲಿ ಔಟಾಗದೆ 58, ಶ್ರೇಯಸ್‌ 23 ಎಸೆತಗಳಲ್ಲಿ 43 ರನ್‌ ಸಿಡಿಸಿದರು.

IBSA World Games 2023 ಅಂಧ ಪುರುಷ ಕ್ರಿಕೆಟ್‌: ಭಾರತಕ್ಕೆ ಬೆಳ್ಳಿ ಪದಕ

ಬೃಹತ್‌ ಗುರಿ ಬೆನ್ನತ್ತಿದ ಬೆಂಗಳೂರು 8 ವಿಕೆಟ್‌ಗೆ 181 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ನಿಶ್ಚಲ್‌(40 ಎಸೆತಗಳಲ್ಲಿ 68) ಏಕಾಂಗಿ ಹೋರಾಟ ತಂಡದ ಗೆಲುವಿಗೆ ಸಾಕಾಗಲಿಲ್ಲ. ಸೂರಜ್‌ ಅಹುಜಾ 29, ಜಾಸ್ಪೆರ್‌ 22, ಮಯಾಂಗ್‌ ಅಗರ್‌ವಾಲ್‌ 14 ರನ್‌ ಗಳಿಸಿದರು. 10 ಪಂದ್ಯಗಳಲ್ಲಿ ಕೇವಲ 1 ಜಯ ಸಾಧಿಸಿದ ತಂಡ ಕೊನೆ ಸ್ಥಾನಿಯಾಗಿಯೇ ಅಭಿಯಾನ ಕೊನೆಗೊಳಿಸಿತು.

ಮಂಗಳೂರಿಗೆ 6ನೇ ಸೋಲು

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್‌ ವಿರುದ್ಧ 8 ವಿಕೆಟ್‌ ಸೋಲನುಭವಿಸಿದ ಮಂಗಳೂರು ಡ್ರ್ಯಾಗನ್ಸ್‌ ಟೂರ್ನಿಯಿಂದಲೇ ಹೊರಬಿತ್ತು. 10 ಪಂದ್ಯಗಳಲ್ಲಿ 4 ಜಯದೊಂದಿಗೆ 8 ಅಂಕ ಸಂಪಾದಿಸಿ 5ನೇ ಸ್ಥಾನಿಯಾಯಿತು.

ಮೊದಲು ಬ್ಯಾಟ್‌ ಮಾಡಿದ ಮಂಗಳೂರು 19.1 ಓವರ್‌ಗಳಲ್ಲಿ 144 ರನ್‌ಗೆ ಆಲೌಟಯಿತು. ಪವರ್‌ಪ್ಲೇ ಮುಕ್ತಾಯಕ್ಕೆ 61 ರನ್‌ ಸಿಡಿಸಿದರೂ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ ಒಂದು ಹಂತದಲ್ಲಿ 7 ವಿಕೆಟ್‌ಗೆ 86 ರನ್‌ ಗಳಿಸಿತ್ತು. ಆದರೆ ಅನಿರುದ್ಧ ಜೋಶಿ 46 ರನ್‌ ಸಿಡಿಸಿ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಉಳಿದಂತೆ ಬಿ.ಆರ್‌.ಶರತ್‌ 38, ತಿಪ್ಪಾ ರೆಡ್ಡಿ 27 ರನ್‌ ಸಿಡಿಸಿದರು. ಸುಲಭ ಗುರಿ ಬೆನ್ನತ್ತಿದ ಗುಲ್ಬರ್ಗ 15.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಜಯಗಳಿಸಿತು. ಎಲ್‌.ಆರ್.ಚೇತನ್‌ 58, ಅನೀಶ್‌ ಕೆ.ವಿ. ಔಟಾಗದೆ 72 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.

ODI World Cup: ವಿಶ್ವಕಪ್‌ ಟಿಕೆಟ್‌ ಖರೀದಿಗೆ ಅಭಿಮಾನಿಗಳ ಹರಸಾಹಸ!

ಇಂದೇ ಸೆಮಿಫೈನಲ್ ಕದನ:

ಮಹಾರಾಜ ಟ್ರೋಫಿ ಟೂರ್ನಿಯ ಸೆಮಿಫೈನಲ್ ಕದನಕ್ಕೆ ಇಂದು ವೇದಿಕೆ ಸಜ್ಜಾಗಿದೆ. ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳು ಕಾದಾಡಲಿವೆ. ಮಧ್ಯಾಹ್ನ 1 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ. ಇನ್ನು ಇಂದೇ ನಡೆಯಲಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ಹಾಗೂ ಹಾಲಿ ಚಾಂಪಿಯನ್‌ ಗುಲ್ಬರ್ಗ ಮಿಸ್ಟಿಕ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಸೆಮಿಫೈನಲ್ ಪಂದ್ಯವು ಇಂದು ಸಂಜೆ 5.30ಕ್ಕೆ ಆರಂಭವಾಗಲಿದೆ.

ಸೆಮಿಫೈನಲ್‌ ವೇಳಾಪಟ್ಟಿ

ಹುಬ್ಬಳ್ಳಿ-ಶಿವಮೊಗ್ಗ ಮಧ್ಯಾಹ್ನ 1.00ಕ್ಕೆ

ಮೈಸೂರು-ಗುಲ್ಬರ್ಗ ಸಂಜೆ 5.30ಕ್ಕೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!