ಒಂದಲ್ಲ, ಎರಡಲ್ಲ, ಬರೋಬ್ಬರಿ 5 ಮದುವೆ. ಒಂದೇ ತಿಂಗಳಿಗೆ ಹಣ ಒಡವೆ ಜೊತೆ ಎಸ್ಕೇಪ್. ಇದು ಚಾಲಾಕಿ ಸುಂದರಿಯ ಖಯಾಲಿ. ಹೀಗೆ 5ನೇ ಮದುವೆ ಬಳಿಕ ಹಣದೊಂದಿಗೆ ಪರಾರಿಯಾಗಿ 6ನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ 32ರ ಹರೆಯದ ಸುಂದರಿ ಅರೆಸ್ಟ್ ಆಗಿದ್ದಾಳೆ.
ಚೆನ್ನೈ(ಡಿ.03); ಮದುವೆ ಪವಿತ್ರ. ಮದುವೆಗೆ ಕಾಲ ಕೂಡಿ ಬರಬೇಕು ಅಂತಾರೆ. ಆದರೆ ಇಲ್ಲೊಬ್ಬಳಿಗೆ ಒಂದೊಂದು ತಿಂಗಳಿಗೆ ಮದುವೆ ಕಾಲ ಕೂಡಿ ಬರುತ್ತಿದೆ. ಹೀಗೆ 5 ಮದುವೆಯಾಗಿದೆ. ಐವರಿಗೂ ಪಂಗನಾಮ ಹಾಕಿ, ಇದ್ದ ಒಡವೆ ಹಣ ದೋಚಿ 6ನೇ ಮದುವೆಗೆ ಸಿದ್ಧತೆಯಲ್ಲಿದ್ದಳು. ಅದ್ಯಾಕೋ ಟೈಮ್ ಸರಿ ಇರಲಿಲ್ಲ, ಮದುವೆಗೆ ಕಾಲವೂ ಕೂಡಿ ಬರಲಿಲ್ಲ. 32ರ ಹರೆಯದ ಸುಂದರಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. 6ನೇ ಮದುವೆ ಮಾಡಿ ಫಸ್ಟ್‌ನೈಟ್, ಹನಿಮೂನ್ ಪ್ಲಾನ್‌ನಲ್ಲಿದ್ದ ಸುಂದರಿ ಇದೀಗ ಕಂಬಿ ಎಣಿಸುತ್ತಿದ್ದಾಳೆ. ತಮಿಳುನಾಡಿನ ಮಧುರೈನ ಅಭಿನಯಗೆ ಮದುವೆಯಾಗುವುದೇ ಖಯಾಲಿಯಾಗಿದೆ. ಬಳಿಕ ಹಣ, ಒಡವೆಯೊಂದಿಗೆ ಪರಾರಿಯಾಗಿ ಮತ್ತೊಬ್ಬರ ಬಲೆ ಬೀಳಿಸುವ ಈಕೆಯ ಮೋಸದಾಟಕ್ಕೆ ಬ್ರೇಕ್ ಬಿದ್ದಿದೆ.
ಈ ಅಭಿನಯ ತನ್ನ ಮದುವೆ ಮೋಸದಾಟಕ್ಕೆ ಬರೋಬ್ಬರಿ 32 ಸಿಮ್ ಖರೀದಿಸಿದ್ದಾಳೆ. ಒಂದೊಂದು ಸಿಮ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದಿದ್ದಾಳೆ. ಬಳಿಕ ಸಾಮಾಜಿಕ ಜಾಲತಾಣ, ಕೆಲಸ ಮಾಡುವ ಸ್ಥಳ, ಕಚೇರಿಗಳಲ್ಲಿ ಯುವಕರು, ಪುರಷರನ್ನು ಬಲೆಗೆ ಕೆಡವುತ್ತಿದ್ದಳು. ಆದರೆ 5ನೇ ಪತಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಈ ಚಾಲಕಿ ಅಭಿನಯನನ್ನು ಅರೆಸ್ಟ್ ಮಾಡಿದ್ದಾರೆ.
ಬೆಟ್ ಕಟ್ಟಿ ಕಿಸ್ ಕೊಟ್ಟ ವರ, ಸಿಟ್ಟಿಗೆದ್ದ ವಧು ಪೊಲೀಸರನ್ನು ಕರೆದಾಗ ಬೆಪ್ಪಾದ !
ಅಭಿನಯ ಆಗಸ್ಟ್ ತಿಂಗಳಲ್ಲಿ ನಟರಾಜನ್‌ನನ್ನು ಮದುವೆಯಾಗಿದ್ದಾಳೆ. ಇದು ಅಭಿನಯಗೆ 5ನೇ ಮದುವೆಯಾಗಿತ್ತು. 4 ಮದುವೆಯಾಗಿ ಹಣ ಒಡವೆ ಜೊತೆ ಎಸ್ಕೇಪ್ ಆಗಿ ರಂಗನಾಥಪುರಕ್ಕೆ ಆಗಮಿಸಿದ ಅಭಿನಯ, ಬೇಕರಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ತನಗೆ ಪೋಷಕರು, ಸಂಬಂಧಿಕರು ಯಾರೂ ಇಲ್ಲ ಎಂದು ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಇದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ನಟರಾಜನ್ ಜೊತೆಗಿನ ಪರಿಚಯ ಪ್ರೀತಿಯಾಗಿ ಪರಿವರ್ತಿಸಿ ಅಭಿಯನ, ಆಗಸ್ಟ್ ತಿಂಗಳಲ್ಲಿ ಮದುವೆಯಾಗಿದ್ದಾಳೆ.
ನಟರಾಜನ್ ಪೋಷಕರು ಮುಂದೆ ನಿಂತು ಮಗನ ಮದುವೆ ಮಾಡಿಸಿದ್ದಾರೆ. ಬಳಿಕ ನಟರಾಜನ್‌ಗೆ ಬೇರೆ ಮನೆ ಮಾಡಿಕೊಟ್ಟಿದ್ದಾರೆ. ಮದುವೆಯಾಗಿ ಒಂದು ತಿಂಗಳು ಪೂರೈಸಿಲ್ಲ. ಅಷ್ಟರಲ್ಲೇ ತನ್ನ ಅಸಲಿ ಮುಖ ತೋರಿಸಿದ ಅಭಿನಯ, ನಟರಾಜನ್ ಮಾಡಿಸಿದ್ದ ಒಡವೆ, ಆಭರಣ ಹಾಗೂ ಮನೆಯಲ್ಲಿದ್ದ 20,000 ರೂಪಾಯಿ ಜೊತೆ ಪರಾರಿಯಾಗಿದ್ದಾಳೆ. ಬರೋಬ್ಬರಿ 2 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಒಡವೆ ಜೊತೆ ಅಭಿಯನ ಪರಾರಿಯಾಗಿದ್ದಾಳೆ. ಈ ಕುರಿತು ನಟರಾಜನ್ ಪೊಲೀಸರಿಗೆ ದೂರು ನೀಡಿದ್ದ.
ಪಕ್ಕದ್ಮನೆ ಹುಡುಗನ ಜೊತೆ ವಿವಾಹಿತೆ ಎಸ್ಕೇಪ್, 2 ವಾರಗಳ ಬಳಿಕ ಇಬ್ಬರೂ ಶವವಾಗಿ ಪತ್ತೆ!
ನಟರಾಜನ್ ನೀಡಿದ ಮಾಹಿತಿ, ಫೋನ್ ನಂಬರ್ ಸೇರಿದಂತೆ ಇತರ ಮಾಹಿತಿಗಳ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಅಭಿನಯ ಬಂಧಿಸಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಶಾಕ್ ಆಗಿದೆ. ಈಗಾಗಲೇ 5 ಮದುವೆಯಾಗಿರುವುದಾಗಿ ಅಭನಯ ಹೇಳಿದ್ದಾರೆ. 20111ರಲ್ಲಿ ವಿಜಯ್ ಅನ್ನೋ ಜೊತೆ ಮದುವೆಯಾಗಿ ಮಗುವಿದೆ. ಆದರೆ ರಾತ್ರೋರಾತ್ರಿ ಪರಾರಿಯಾಗಿ ಸೆಂಥಿಲ್ ಕುಮಾರ್ ಜೊತೆ ವಿವಾಹವಾಗಿದ್ದಾಳೆ. 2020ರಲ್ಲಿ ಅಭಿನಯ ಕಾಯಲ್‌ವೇಲಿ ಎಂದು ಹೆಸರು ಬದಲಾಯಿಸಿ ಪನ್ನೀರ್ ಸೆಲ್ವಂ ಚಾಲಕನ ಮದುವೆಯಾಗಿ ವಂಚಿಸಿದ್ದಾಳೆ. ಪನ್ನೀರ್ ಸೆಲ್ವಂ ಬಳಿಕ 6 ತಿಂಗಳಲ್ಲಿ ಮತ್ತೊಬ್ಬನ ಮದುವೆಯಾಗಿ ವಂಚಿಸಿದ್ದಾಳೆ.
ಇದರಲ್ಲಿ ಎರಡನೇ ಪತಿ ಸೆಂಥಿಲ್ ಕುಮಾರ್ ಕೂಡ ಒರ್ವ ಚಾಲಕಿ. ಸೆಂಥಿಲ್ ಕುಮಾರ್ ಕೂಡ ಕಳ್ಳನಾಗಿದ್ದ ಕಾರಣ ಇವರಿಬ್ಬರು ಸೇರಿ ಮದುವೆ ಹಾಗೂ ಹಣ ದೋಚುವ ಮೋಸದಾಟಕ್ಕೆ ಪ್ಲಾನ್ ಮಾಡಿದ್ದರು. ಇದರಂತೆ 3 ಮದುವೆ ಮಾಡಿ ಹಣ ಒಡವೆಗಳನ್ನು ದೋಚಿದ್ದರು. ಇದೀಗ ಅಭಿನಯ ಜೊತೆಗೆ ಸೆಂಥಿಲ್ ಕುಮಾರ್ ಕೂಡ ಅರೆಸ್ಟ್ ಆಗಿದ್ದಾನೆ.