ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ, ಆರೋಪಿಗಳನ್ನ ಬಂಧಿಸಿದ ಪೊಲೀಸರು
ಹಾಸನ(ಡಿ.03): ಸೊಸೆ ಮೇಲೆ ಕಣ್ಣು ಹಾಕಿದ್ದ ಮಾವನನ್ನ ಸುಪಾರಿ ಕೊಟ್ಟು ಬೀಗರು ಕೊಲೆ ಮಾಡಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವನನ್ನ ತಮ್ಮಣ್ಣಗೌಡ (54) ಎಂದು ಗುರುತಿಸಲಾಗಿದೆ.
ನ.13 ರಂದು ರಾಗಿಕಾವಲು ಗ್ರಾಮದ ಹೊಸಕೆರೆಯಲ್ಲಿ ತಮ್ಮಣ್ಣ ಗೌಡನ ಶವ ಪತ್ತೆಯಾಗಿತ್ತು. ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಶವವನ್ನ ಕೆರೆಗೆ ಎಸೆಯಲಾಗಿತ್ತು. ಮೃತನ ಮಗ ಕುಮಾರ್ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ಕೊಲೆಯ ರಹಸ್ಯ ಬಯಲಾಗಿದೆ.
ಪ್ರೇಯಸಿ ಮಗಳನ್ನು ಕೊಂದು ಮೃತದೇಹದೊಂದಿಗೆ ಸಂಭೋಗ ನಡೆಸಿದ ಪಾಪಿ ಅಂದರ್..!
ಸೊಸೆ ನಾಗರತ್ನಳಿಗೆ ಮಾವ ತಮ್ಮಣ್ಣಗೌಡ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ. ಮಗ ಕುಮಾರ ಬೌದ್ಧಿಕವಾಗಿ ಅಷ್ಟೇನು ಚುರುಕಾಗಿರಲಿಲ್ಲ. ಈತನಿಂದ ಮಕ್ಕಳಾಗುವುದು ಅನುಮಾನ ಅಂತ ನನ್ನಿಂದಲೇ ವಂಶ ಬೆಳೆಯಲಿ ಎಂದು ಸೊಸೆಗೆ ನೀಚ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದನು.
ಮಾವನ ನೀಚ ಬುದ್ದಿಯನ್ನು ನಾಗರತ್ನ ತನ್ನ ಮನೆಯವರ ಬಳಿ ಹೇಳಿದ್ದಳು. ಹೀಗಾಗೊ ನಾಗರತ್ನ ಪೋಷಕರಾದ ಮೈಲಾರಿಗೌಡ ಹಾಗೂ ತಾಯಮ್ಮ ಅವರು ತಮ್ಮಣ್ಣಗೌಡನ ಕೊಲೆಗೆ 50 ಸಾವಿರ ರೂ.ಕೊಟ್ಟಿದ್ದರು. ತಮ್ಮಣ್ಣಗೌಡನಿಗೆ ಮನೆಯಲ್ಲಿ ಮದ್ಯಪಾನ ಮಾಡಿಸಿ ರಾಡ್‌ನಿಂದ ಹೊಡೆದು ಕುತ್ತಿಗೆ ಹಿಸುಕಿ ಆರೋಪಿಗಳು ಕೊಲೆ ಮಾಡಿದ್ದರು. ನಂತರ ಶವವನ್ನು ಕೆರೆಗೆ ಬಿಸಾಡಿ ಕೊಲೆಗಡುಕರು ಎಸ್ಕೇಪ್ ಆಗಿದ್ದರು.
ದೂರಿನ ಮೇರೆಗೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಸುಪಾರಿ ಪಡೆದಿದ್ದ ಯೋಗೇಶ್, ಚಂದ್ರೇಗೌಡ ಮತ್ತು ಮೈಲಾರಿಗೌಡ, ತಾಯಮ್ಮರನ್ನ ಬಂಧಿಸಲಾಗಿದೆ. ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.