ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

By Sathish Kumar KH  |  First Published Jul 13, 2023, 5:20 PM IST

ಮದ್ಯ ಸೇವನೆ ಮಾಡಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ದುರ್ಘಟನೆ ಕೊಡಗು ಜಿಲ್ಲೆಯ ಬುಡಕಟ್ಟು ಸಮುದಾಯದಲ್ಲಿ ನಡೆದಿದೆ.


ಕೊಡಗು (ಜು.13): ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸವಾಗಿದ್ದು, ನೀನು ಕುಡಿಯಬೇಡ ಎಂದು ಬುದ್ಧಿ ಹೇಳಿದ ತಾಯಿಯನ್ನೇ ಮಗನು ಹೊಡೆದು ಕೊಂದಿರುವ ದುರ್ಘಟನೆ ಕೊಡಗು ಜಿಲ್ಲೆಯ ಕಟ್ಟೆಪುರ ಹಾಡಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಲಲಿತಾ (45) ಎಂದು ಗುರುತಿಸಲಾಗಿದೆ. ಈ ಮಹಿಳೆ ಮಗನಿಂದಲೇ ಹತ್ಯೆಯಾಗಿದ್ದಾಳೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕಟ್ಟೆಪುರ ಹಾಡಿಯಲ್ಲಿ ಘಟನೆ ನಡೆದಿದೆ. ಜೇನುಕುರುಬ ಸಮುದಾಯದ ರಾಜಶೇಖರ ತಾಯಿಯನ್ನೆ ಕೊಂದ ಪಾಪಿ ಮಗನಾಗಿದ್ದಾರೆ. ನಿನ್ನೆ ರಾತ್ರಿ ವೇಳೆ ಕುಡಿದು ಬಂದು ತಾಯಿ ಜೊತೆಯಲ್ಲಿ ಊಟದ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಇನ್ನು ಕುಡಿಯಲು ಇನ್ನೂ ಹೆಚ್ಚಿನ ಹಣವನ್ನು ಕೇಳಿದ್ದಾನೆ. ಆಗ, ನೀನು ಮದ್ಯ ಸೇವನೆ ಮಾಡಬೇಡ ಎಂದು ಬೈದು ಬುದ್ಧಿ ಹೇಳಿದ್ದಕ್ಕೆ ತಾಯಿಯ ಮೇಲೆ ಕೋಪಗೊಂಡ ಪಾಪಿ ಮಗ ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ತಾಯಿಯ ತಲೆಗೆ ಹೊಡೆದಿದ್ದಾನೆ. ಇದಾದ ನಂತರ, ತೀವ್ರ ಗಾಯಗೊಂಡು ರಕ್ತಸ್ರಾವದಲ್ಲಿ ತಾಯಿ ಬಿದ್ದರೂ ಆಕೆಯನ್ನು ಆರೈಕೆ ಮಾಡದೇ ಹಾಗೂ ಆಸ್ಪತ್ರೆಗೆ ದಾಖಲಿಸದೇ ಬಿಟ್ಟಿದ್ದರಿಂದ ಮಹಿಳೆ ಲಲಿತಾ ಸ್ಥಳದಲ್ಲಿಯೇ ರಕ್ತಸ್ರಾವ ಉಂಟಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

Latest Videos

undefined

ರಸ್ತೆ ಇಲ್ಲದೇ ರೋಗಿಯನ್ನು 4 ಕಿ.ಮೀ ಜೋಲಿಯಲ್ಲೇ ಹೊತ್ತೊಯ್ದ ಕಳಸ ಗ್ರಾಮಸ್ಥರು!

ಇನ್ನು ಈ ಘಟನೆ ಕುರಿತಂತೆ ಸ್ಥಳೀಯ ಹಾಡಿ ಜನರು ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಶನಿವಾರಸಂತೆ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಪಶ್ಚತ್ತಾಪದಿಂದ ಅಳುತ್ತಿದ್ದ ಪಾಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆ ಕುರಿತಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಒಂಭತ್ತು ತಿಂಗಳು ಗಂರ್ಭದಲ್ಲಿ ಹೊತ್ತು, ಹೆತ್ತು ಸಾಕಿದ ಮಗನೇ ತಾಯಿ ಜೀವಕ್ಕೆ ಕಂಟಕವಾಗಿ ಕೊಲೆ ಮಾಡಿದ್ದಾನೆ. ಇದು ಇಡೀ ಮಾನವ ಕುಲವನ್ನೃ ನಾಚಿಸುವಂತಾಗಿದೆ.

ಗರ್ಭಿಣಿ- ಬಾಣಂತಿಯರಿಗೆ ಕೊಳೆತ ಮೊಟ್ಟೆ ವಿತರಣೆ: ಕೊಡಗು (ಜು.13): ಗರ್ಭಿಣಿ- ಬಾಣಂತಿಯರಿಗೆ ಕೊಳೆತ ಮೊಟ್ಟೆ  ವಿತರಣೆ ಮುಂದುವರಿದಿದ್ದು, ಸುವರ್ಣ ನ್ಯೂಸ್‌ನ ವರದಿ ಬಳಿಕವೂ ಮೊಟ್ಟೆ ಮಾಫಿಯಾ ನಡೆಯುತ್ತಿದೆ. ಈ ಬಗ್ಗೆ ಸುವರ್ಣ ನ್ಯೂಸ್ ತಂಡ ಎಕ್ಸ್‌ಕ್ಲೂಸಿವ್ ವರದಿಯನ್ನು ಪ್ರಸಾರ ಮಾಡಿತ್ತು. ಆದರೂ ಈ ಮೊಟ್ಟೆ ಮಾಫಿಯಾ ಮುಂದುವರೆದಿದ್ದು, ಕವರ್ ಸ್ಟೋರಿ ವರದಿ ಆದಾಗ ಭರವಸೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆಯನ್ನು ಕೊಟ್ಟಿದ್ದರು. ಆದರೆ ರಾಜ್ಯದಲ್ಲಿ ಇನ್ನೂ ಕೂಡಾ ಕೊಳೆತ ಮೊಟ್ಡೆ ಸರಬರಾಜು ಇನ್ನೂ ನಿಂತಿಲ್ಲ.

ಅಂಗನವಾಡಿಯಲ್ಲಿ ಗರ್ಭಿಣಿ- ಬಾಣಂತಿಯರಿಗೆ ಕೊಳೆತ ಮೊಟ್ಟೆ ಭಾಗ್ಯ: ಆಕ್ರೋಶ

ಈ ಘಟನೆ ಘಟನೆ ಕುಶಾಲನಗರ ತಾಲೂಕಿನ ಕೂಡಿಗೆಯ ಬಸವನತ್ತೂರಿನಲ್ಲಿ ನಡೆದಿದೆ. ಸ್ಥಳೀಯ ಅಂಗನವಾಡಿಯಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಣೆ ಮಾಡಲಾಗಿದ್ದು, ಕೊಳೆತು ದುರ್ವಾಸನೆ ಬರುತ್ತಿರುವ ಮೊಟ್ಟೆವಿತರಣೆ ಹಿನ್ನೆಲೆ ಅಧಿಕಾರಿಗಳು, ಸರ್ಕಾರದ ವಿರುದ್ಧ ಮಹಿಳೆಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಿಂಗಳಿಗೆ ಮಹಿಳೆಯರಿಗೆ 21 ಮೊಟ್ಟೆಯನ್ನು ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ. ‘ಇಷ್ಟು ಹಾಳಾದ ಮೊಟ್ಟೆಗಳನ್ನು ಏತಕ್ಕಾಗಿ ವಿತರಿಸುತ್ತೀರಿ, ನಿಮ್ಮ ಹೆಂಡತಿ ಮಕ್ಕಳಿಗೂ ಇಂತಹದ್ದೇ ಮೊಟ್ಟೆ ವಿತರಿಸುತ್ತೀರಾ’ ಎಂದು ಫಲಾನುಭವಿ ಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!