ಬಾಯ್‌ಫ್ರೆಂಡ್‌ ಜತೆಗಿದ್ದ ಯುವತಿಯ ವಿಡಿಯೋ ರೆಕಾರ್ಡ್‌: ಪೊಲೀಸ್‌ ಎಂದು ಬ್ಲ್ಯಾಕ್‌ಮೇಲ್‌ ಮಾಡಿ, ರೇಪ್‌ ಮಾಡಿದ ಪಾಪಿ!

By BK Ashwin  |  First Published Jul 13, 2023, 3:47 PM IST

ಜುಲೈ 7 ರಂದು ಸಂಜೆ ಮಹಿಳೆ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಆ ಕ್ಷಣದಲ್ಲಿ ಆರೋಪಿ ರವಿ ಸೋಲಂಕಿ ತನ್ನ ಮೊಬೈಲ್ ಬಳಸಿ ರಹಸ್ಯವಾಗಿ ರೆಕಾರ್ಡ್ ಮಾಡಿ ದಂಪತಿಯ ಫೋಟೋ, ವಿಡಿಯೋ ತೆಗೆಯುತ್ತಿದ್ದ. ನಂತರ, ಯುವತಿಗೆ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. 


ನವದೆಹಲಿ (ಜುಲೈ 13, 2023): ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗಷ್ಟೇ ಮಹಿಳೆಯ ಬರ್ಬರ ಹತ್ಯೆಯಾಗಿತ್ತು. ಮಹಿಳೆಯನ್ನು ಪೀಸ್‌ ಪೀಸ್‌ ಮಾಡಿ ಪಾಲಿಥಿನ್‌ ಕವರ್‌ನಲ್ಲಿ ಬಿಸಾಡಲಾಗಿತ್ತು. ಈಗ ಯುವತಿಯೊಬ್ಬರನ್ನು ರೇಪ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ (ಜುಲೈ 7) ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಮಹಿಳೆಯೊಬ್ಬರ ಅಪಾರ್ಟ್‌ಮೆಂಟ್ ಬಳಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗುರುವಾರ ಬಂಧಿಸಲಾಗಿದೆ. ಮಹಿಳೆಗೆ ಬೆದರಿಕೆ ಹಾಕಲು ಪೊಲೀಸ್ ಅಧಿಕಾರಿಯಂತೆ ನಟಿಸಿದ್ದ ಆರೋಪಿ ಘಟನೆಯ ನಂತರ ಪರಾರಿಯಾಗಿದ್ದು, ಗುರುವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಜುಲೈ 7 ರಂದು ಸಂಜೆ ಮಹಿಳೆ ತನ್ನ ಪ್ರಿಯಕರನೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಆ ಕ್ಷಣದಲ್ಲಿ ಆರೋಪಿ ರವಿ ಸೋಲಂಕಿ ತನ್ನ ಮೊಬೈಲ್ ಬಳಸಿ ರಹಸ್ಯವಾಗಿ ರೆಕಾರ್ಡ್ ಮಾಡಿ ದಂಪತಿಯ ಫೋಟೋ, ವಿಡಿಯೋ ತೆಗೆಯುತ್ತಿದ್ದ. ಕಾರಿನ ಸೈಡ್ ಮಿರರ್‌ನಲ್ಲಿ ಕಾಣಿಸುತ್ತಿದ್ದ ದೃಶ್ಯವನ್ನು ತೆಗೆದಿದ್ದಾನೆ. ಸ್ವಲ್ಪ ಸಮಯದ ನಂತರ, ಗೆಳೆಯ ತನ್ನ ಅಪಾರ್ಟ್ಮೆಂಟ್ ಹೊರಗೆ ಮಹಿಳೆಯನ್ನು ಡ್ರಾಪ್ ಮಾಡಿದ್ದಾನೆ. ಬಳಿಕ, ಆರೋಪಿ ತನ್ನ ಬೈಕ್‌ನಲ್ಲಿ ಹೊರಗೆ ಉಳಿದುಕೊಂಡು ಕಟ್ಟಡದೊಳಗೆ ಮಹಿಳೆಯನ್ನು ಹಿಂಬಾಲಿಸಿದ್ದಾನೆ.

Tap to resize

Latest Videos

ಇದನ್ನು ಓದಿ: ಬರೋಬ್ಬರಿ 17 ವರ್ಷಗಳ ಬಳಿಕ ಮಹಿಳೆಯ ಕೊಲೆ ಪ್ರಕರಣದ ಹಂತಕನ ಪತ್ತೆ ಹಚ್ಚಿದ ಪೊಲೀಸರು!

ನಂತರ, ಮೆಟ್ಟಿಲುಗಳ ಮೇಲೆ ಒಬ್ಬಳೇ ಇದ್ದುದನ್ನು ಕಂಡು ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಆತ ರೆಕಾರ್ಡ್ ಮಾಡಿದ ವಿಡಿಯೋವನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ವಿಡಿಯೋ ವೈರಲ್ ಮಾಡುವುದಾಗಿ ಹೇಳಿ ಮಹಿಳೆಗೆ ಮೆಟ್ಟಿಲುಗಳ ಮೇಲೇ ಅತ್ಯಾಚಾರ ಎಸಗಿದ್ದಾನೆ. ಯುವತಿ ತಕ್ಷಣ ತನ್ನ ಪ್ರಿಯಕರನಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾಳೆ. ಅಲ್ಲದೆ, ಕುಟುಂಬ ಸಮೇತ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು.

ನಂತರ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮಹಿಳೆಯ ವಿವರಣೆಯ ಆಧಾರದ ಮೇಲೆ ಆರೋಪಿಯ ರೇಖಾಚಿತ್ರವನ್ನು ಸಹ ಪೊಲೀಸರು ತಯಾರಿಸಿದ್ದರು. ಈಗ, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ: ದೇಹ ಪೀಸ್‌ ಪೀಸ್‌ ಮಾಡಿ ಫ್ಲೈಓವರ್‌ ಬಳಿ ಎಸೆದ ಪಾಪಿ!

ದೆಹಲಿಯಲ್ಲಿ ಮಹಿಳೆಯ ಬರ್ಬರ ಕೊಲೆ
ದೆಹಲಿ ಪೊಲೀಸರು ಬುಧವಾರ ಯಮುನಾ ಖಾದರ್ ಪ್ರದೇಶದ ಗೀತಾ ಕಾಲೋನಿ ಫ್ಲೈಓವರ್ ಬಳಿ ಕತ್ತರಿಸಿದ ದೇಹದ ಭಾಗಗಳನ್ನು ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನು ಪೀಸ್‌ ಪೀಸ್‌ ಮಾಡಲಾಗಿದ್ದು, ಮೃತದೇಹದ ಕೆಲ ಭಾಗಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಮೃತದೇಹ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂಬುದು ಆರಂಭದಲ್ಲಿ ತಿಳಿದುಬರಲಿಲ್ಲವಾದರೂ, ನಂತರ ಇದು ಮಹಿಳೆಯದ್ದೇ ಮೃತದೇಹ ಎಂದು ಕಂಡುಕೊಳ್ಳಲಾಗಿತ್ತು.

ಅಲ್ಲದೆ, ಈ ಸಂಬಂಧ ಕೇಂದ್ರ ಶ್ರೇಣಿಯ ಜಂಟಿ ಪೊಲೀಸ್ ಕಮಿಷನರ್ ಪರಮಾದಿತ್ಯ ಅವರು ಬುಧವಾರ ಮಾತನಾಡಿದ್ದು “ನಮಗೆ ಎರಡು ಕಪ್ಪು ಪಾಲಿಥಿನ್ ಕವರ್‌ಗಳು ಸಿಕ್ಕಿವೆ. ಒಂದು ಕವರ್‌ ದೇಹದ ತಲೆಯನ್ನು ಹೊಂದಿರುತ್ತದೆ ಮತ್ತು ಇನ್ನೊಂದು ದೇಹದ ಭಾಗಗಳನ್ನು ಹೊಂದಿರುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಉದ್ದ ಕೂದಲು ಪತ್ತೆಯಾಗಿದ್ದು, ದೇಹ ಕೊಳೆತಿರುವುದರಿಂದ ಕೂದಲಿನ ಕಾರಣ ಮಹಿಳೆ ಎಂದು ಭಾವಿಸುತ್ತಿದ್ದೇವೆ’’ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮುಂಬೈನಲ್ಲಿ ಆಟೋದಲ್ಲೇ ಮಹಿಳೆಗೆ ರೇಪ್‌, ಬೆದರಿಕೆ: ಪಾಪಿ ಆಟೋರಿಕ್ಷಾ ಚಾಲಕ ಅಂದರ್‌

click me!