ಗರ್ಲ್‌ಫ್ರೆಂಡ್‌ನ ಗಂಡ, ತಂದೆಯನ್ನು ಕೊಲ್ಲಲು ಗ್ಯಾಂಗ್‌ಗೆ ಸುಪಾರಿ ಕೊಟ್ಟಿದ್ದ ವಕೀಲ, ಆದ್ರೆ ಕೊಲೆಯಾದವನೇ ಬೇರೆ!

By Santosh Naik  |  First Published Jan 13, 2025, 8:05 PM IST

ಲಕ್ನೋದಲ್ಲಿ ಟ್ಯಾಕ್ಸಿ ಚಾಲಕನ ಕೊಲೆಯ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ವಕೀಲನೊಬ್ಬ ತನ್ನ ಗೆಳತಿಯ ಪತಿ ಮತ್ತು ತಂದೆಯನ್ನು ಕೊಲ್ಲಲು ಸುಪಾರಿ ನೀಡಿದ್ದನು, ಆದರೆ ಗ್ಯಾಂಗ್ ತಪ್ಪು ವ್ಯಕ್ತಿಯನ್ನು ಕೊಂದಿದೆ.


ನವದೆಹಲಿ (ಜ.13): ಹಣೆಬರಹ ಕೆಟ್ಟರೆ ಸಾವು ಹೇಗೆಲ್ಲಾ ಆಗಬಹುದು ಅನ್ನೋದಕ್ಕೆ ಉದಾಹರಣೆ ಇದು. ಉತ್ತರ ಪ್ರದೇಶದ ಲಕ್ನೋನಲ್ಲಿ ಡಿಸೆಂಬರ್‌ 30 ರಂದು ಟ್ಯಾಕ್ಸಿ ಡ್ರೈವರ್‌ ಮೊಹಮದ್‌ ರಿಜ್ವಾನ್‌ ಅನುಮಾನಾಸ್ಪದವಾಗಿ ಸಾವು ಕಂಡಿದ್ದ. ಈ ಸಾವಿನ ತನಿಖೆ ನಡೆಸಿದಾಗ ಗೊತ್ತಾಗಿದ್ದು ಏನೆಂದರೆ, ವಕೀಲನೊಬ್ಬ ತನ್ನ ಗರ್ಲ್‌ಫ್ರೆಂಡ್‌ನ ಗಂಡ ಹಾಗೂ ಆಕೆಯ ತಂದೆಯನ್ನು ಕೊಲ್ಲಲು ಗ್ಯಾಂಗ್‌ಗೆ ಸುಪಾರಿ ನೀಡಿದ್ದ. ಆದರೆ, ಈ ಗ್ಯಾಂಗ್‌ನ ಸದಸ್ಯರು ಮೊಹಮದ್‌ ರಿಜ್ವಾನ್‌ನನ್ನೇ ತಮಗೆ ಸುಪಾರಿ ಕೊಟ್ಟ ವ್ಯಕ್ತಿಯ ಗರ್ಲ್‌ಫ್ರೆಂಡ್‌ನ ಗಂಡ ಎಂದು ಭಾವಿಸಿ ಕೊಂದಿದ್ದಾರೆ. ಆದರೆ, ಈತ ಆ ವ್ಯಕ್ತಿ ಆಗಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಫ್ತಾಬ್‌ ಅಹ್ಮದ್‌ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ವಕೀಲನಾಗಿರುವ ಈತ ತನ್ನ ಗರ್ಲ್‌ಫ್ರೆಂಡ್‌ನ ಕುಟುಂಬದವರನ್ನು ಸಾಯಿಸಲು ಸುಪಾರಿ ಕೊಟ್ಟಿದ್ದ. ಆದರೆ, ಗ್ಯಾಂಗ್‌ನ ಸದಸ್ಯರು ರಿಜ್ವಾನ್‌ನನ್ನು ಕೊಂದಿದ್ದರು.

ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಅಪರಾಧಕ್ಕೆ ಬಳಸಲಾದ ಆಯುಧ, ಬೈಕ್ ಮತ್ತು ಆರೋಪಿಗಳಿಂದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. "ಆಫ್ತಾಬ್ ಅಹ್ಮದ್ ಪ್ರಮುಖ ಆರೋಪಿ. ಅವನು ಸಂಬಂಧ ಹೊಂದಿದ್ದ ಮಹಿಳೆಯ ಪತಿ ಮತ್ತು ತಂದೆಯನ್ನು ಕೊಲ್ಲಲು ಬಯಸಿದ್ದ. ಆರೋಪಿ ಡಿಸೆಂಬರ್ 30 ರಂದು ಮದೇಹಗಂಜ್ ತಲುಪಿ ಕೊಲೆ ಮಾಡಿದ್ದ. ಆದರೆ, ಆತ ಕೊಲೆ ಮಾಡಿದ ವ್ಯಕ್ತಿ ಬೇರೆಯವನಾಗಿದ್ದ. ಅಪರಾಧಕ್ಕೆ ಬಳಸಲಾದ ಆಯುಧ, ಬೈಕ್ ಮತ್ತು ಆರೋಪಿಗಳ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಡಿಸಿಪಿ (ಕೇಂದ್ರ) ರವೀನಾ ತ್ಯಾಗಿ ಹೇಳಿದ್ದಾರೆ.

ಪ್ರಕರಣದ ತನಿಖೆಯಿಂದ ಆಫ್ತಾಬ್ ಕೊಲೆಗಳನ್ನು ನಡೆಸಲು ಕೊಲೆಗಾರರಲ್ಲಿ ಒಬ್ಬನಾದ ಯಾಸಿರ್ ಜೊತೆ ಸಂಪರ್ಕ ಸಾಧಿಸಿದ್ದ ಮತ್ತು ಅವನ ಸಹಚರ ಕೃಷ್ಣಕಾಂತ್ ನನ್ನು ಯೋಜನೆಯಲ್ಲಿ ಸೇರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಅಪರಾಧದ ನಂತರ, ನಿಯೋಜಿಸಲಾದ ಕೆಲಸವನ್ನು ನಿರ್ವಹಿಸುವಲ್ಲಿ ವಿಫಲರಾದ ಮತ್ತು ತಪ್ಪು ವ್ಯಕ್ತಿಯನ್ನು ಕೊಂದ ಕಾರಣಕ್ಕೆ ಇಬ್ಬರು ಮತ್ತು ಆಫ್ತಾಬ್ ನಡುವೆ ಘರ್ಷಣೆ ಉಂಟಾಗಿತ್ತು.

Tap to resize

Latest Videos

Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್‌ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ!

ಅಪರಾಧವನ್ನು ಮಾಡಲು ಮುಂಗಡವಾಗಿ 2 ಲಕ್ಷ ರೂ.ಗಳನ್ನು ಪಾವತಿಸಿದ್ದ ಆಫ್ತಾಬ್, ನಂತರ ಬಾಕಿ ಇರುವ ಮೊತ್ತವನ್ನು ಪಾವತಿಸಲು ನಿರಾಕರಿಸಿದ್ದ, ಇದು ಅವನ ಮತ್ತು ಹಂತಕರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸರು ಅಕ್ರಮ ಆಯುಧ, 14 ಲೈವ್‌ ಕಾರ್ಟ್ರಿಡ್ಜ್‌ಗಳು, ಅಪರಾಧಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು ಮೂವರು ಆರೋಪಿಗಳಿಂದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತ್ಯಾಗಿ ತಿಳಿಸಿದ್ದಾರೆ.

Kolar: ಚೀಲದಲ್ಲಿ ಪತ್ತೆಯಾಯ್ತು ಅಪರಿಚಿತ ಮಹಿಳೆ ಶವ, ಮೃತದೇಹದ ಮುಖ ಕಚ್ಚಿ ತಿಂದ ನಾಯಿಗಳು!

click me!