₹ 2 ಕೋಟಿ ಹೂಡಿಕೆ ಮಾಡಿದ್ರೆ ಡಬಲ್ ಕೊಡುವುದಾಗಿ ನಂಬಿಸಿ ವಂಚನೆ : ಏಳು ಮಂದಿ ಕೇರಳ ಮೂಲದ ಆರೋಪಿಗಳ ಬಂಧನ

By Kannadaprabha News  |  First Published Jan 13, 2025, 8:21 AM IST

ಮಲೇಷಿಯಾದ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ₹3.50 ಕೋಟಿ ಕೊಡುವುದಾಗಿ ನಂಬಿಸಿ ₹2 ಕೋಟಿ ವಂಚಿಸಿದ ಏಳು ಮಂದಿಯನ್ನು ಬಂಧಿಸಲಾಗಿದೆ. ಹವಾಲ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದ್ದು, ನಕಲಿ ಆಧಾರ್ ಕಾರ್ಡ್ ಬಳಸಿ ಕಚೇರಿ ಬಾಡಿಗೆ ಪಡೆದಿದ್ದರು.


ಬೆಂಗಳೂರು (ಜ.13): ಮಲೇಷಿಯಾದ ಕಂಪನಿಯಲ್ಲಿ ₹2 ಕೋಟಿ ಹೂಡಿಕೆ ಮಾಡಿದರೆ ಒಂದೇ ದಿನದಲ್ಲಿ ಲಾಭಾಂಶ ಸೇರಿಸಿ ₹3.50 ಕೋಟಿ ಕೊಡುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ₹2 ಕೋಟಿ ಪಡೆದು ವಂಚಿಸಿದ್ದ ಏಳು ಮಂದಿ ಆರೋಪಿಗಳನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಶ್ಯಾಮ್ ಥಾಮಸ್ (59), ಜೋಶ್ ಎಂ. ಕುರುವಿಲ್ಲಾ (62), ಜೆ.ಪಿ.ನಗರದ ಜೀನ್ ಕಮಲ್ (45), ಊರ್ವಶಿ ಗೋಸ್ವಾಮಿ ಅಲಿಯಾಸ್ ಸೋನು (34), ಕೋರಮಂಗಲದ ಜಾಫರ್ ಸಾದಿಕ್ (39), ವಿದ್ಯಾರಣ್ಯಪುರದ ಅಮಿತ್ ಮಹೇಶ್ ಗಿಡ್ವಾನಿ (40) ಮತ್ತು ಮಹಾರಾಷ್ಟ್ರದ ವಿಜಯ್ ವಾಮನ್ ಚಿಪ್ಲೂಂಕರ್ (45) ಬಂಧಿತರು. ಆರೋಪಿಗಳಿಂದ 5 ಮೊಬೈಲ್, ₹44 ಲಕ್ಷ ಜಪ್ತಿ ಮಾಡಲಾಗಿದೆ.

Tap to resize

Latest Videos

 ತಲೆಮರೆಸಿಕೊಂಡಿರುವ ದೆಹಲಿ, ಗುಜರಾತ್ ಮೂಲದ ಐವರು ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಲ ದಂಧೆ ಬಯಲು: ಬಂಧಿತ ಆರೋಪಿಗಳು ಹವಾಲ ದಂಧೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಹವಾಲ ದಂಧೆಗೆ ಬಳಸಿದ್ದ 10 ರು. ಮುಖ ಬೆಲೆಯ ಎರಡು ನೋಟುಗಳು ಹಾಗೂ ಹವಾಲ ವ್ಯವಹಾರಕ್ಕೆ ಬಳಸಿದ್ದ ಒಂದು ಡೈರಿ ಜಪ್ತಿ ಮಾಡಲಾಗಿದೆ. 

ಆರೋಪಿಗಳು ವಂಚನೆ ಸಲುವಾಗಿಯೇ ಕಬ್ಬನ್‌ ಪೇಟೆಯಲ್ಲಿ ಕಚೇರಿ ತೆರೆದಿದ್ದರು. ಕಟ್ಟಡದ ಮಾಲೀಕರಿಗೆ ನಕಲಿ ಆಧಾರ್‌ ಕಾರ್ಡ್‌ ಕೊಟ್ಟು ಕಚೇರಿ ಬಾಡಿಗೆಗೆ ಪಡೆದಿದ್ದರು. ಮುಂಗಡವಾಗಿ 1 ಲಕ್ಷ ರು. ನೀಡಿದ್ದರು. ಕಚೇರಿ ಪರಿಶೀಲನೆ ವೇಳೆ ಕೆಲವು ದಾಖಲೆಗಳು ಹಾಗೂ ನೋಟು ಎಣಿಸುವ ಯಂತ್ರ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಣ್ಣಪುಟ್ಟ ಅಂಗಡಿ ಮಾಲೀಕರೇ ಎಚ್ಚರ, ನಿಮ್ಮದೇ QR code ಬದಲಿಸಿ ಖದೀಮರು ಹೇಗೆ ವಂಚಿಸುತ್ತಾರೆ ಗೊತ್ತಾ?

ಪ್ರಕರಣದ ವಿವರ: ಸುಂಕದಕಟ್ಟೆಯ ಶ್ರೀನಿವಾಸನಗರದ ನಿವಾಸಿಯಾದ ದೂರುದಾರನಿಗೆ ಕಳೆದ ಡಿಸೆಂಬರ್‌ನಲ್ಲಿ ಪರಿಚಿತರಾಗಿದ್ದ ಆರೋಪಿಗಳು ಮಲೇಷಿಯಾದ ‘ಮೇದಾ ಕ್ಯಾಪಿಟಲ್‌ ಬರ್‌ಹ್ಯಾಡ್‌’ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದರು. ದೂರುದಾರ ಎರಡು ಕೋಟಿ ರು. ಹಣವನ್ನು ಕಬ್ಬನ್‌ ಪೇಟೆಯ ಆರೋಪಿಗಳ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಕಂಪನಿಯ ಖಾತೆಯಿಂದ ದೂರುದಾರರ ಖಾತೆಗೆ 9,780 ರು. ಹಣವನ್ನು ವರ್ಗಾವಣೆ ಮಾಡಿ ಉಳಿದ ಹಣವನ್ನು ಶೀಘ್ರ ಖಾತೆಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಎರಡು ಕೋಟಿ ರು. ಹಣವನ್ನು ಬೇರೆ ಕಚೇರಿಯ ಲಾಕರ್‌ನಲ್ಲಿ ಸುರಕ್ಷಿತವಾಗಿ ಇರಿಸುವುದಾಗಿ ತೆರಳಿದ್ದಾರೆ. ಬಳಿಕ ಆರೋಪಿಗಳು ಯಾವುದೇ ಹಣ ಅಥವಾ ಲಾಭಾಂಶವನ್ನು ವಾಪಾಸ್‌ ನೀಡದೆ ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಮೂರು, ನಂತರ ನಾಲ್ವರ ಬಂಧನ:

ತನಿಖೆ ವೇಳೆ ಪೊಲೀಸರು ಮೂವರು ಆರೋಪಿಗಳನ್ನು ಮೆಜೆಸ್ಟಿಕ್‌ನ ಬಸ್‌ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡು ಇನ್ನೂ ಏಳು ಜನ ವಂಚನೆಯಲ್ಲಿ ಪಾಲ್ಗೊಂಡಿರುವ ವಿಚಾರ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 44 ಲಕ್ಷ ರು. ನಗದು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ! ಅಪ್ರಾಪ್ತ ಬಾಲಕಿ ಮೇಲೆ ಎರಗಿದ ಕಾಮುಕ ಪರ್ವೇಜ್ ಪಠಣ್ ಅರೆಸ್ಟ್

ಹವಾಲ ದಂಧೆ ಬಯಲು:

ಬಂಧಿತ ಆರೋಪಿಗಳು ಹವಾಲ ದಂಧೆಯಲ್ಲಿ ತೊಡಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಹವಾಲ ದಂಧೆಗೆ ಬಳಸಿದ್ದ 10 ರು. ಮುಖ ಬೆಲೆಯ ಎರಡು ನೋಟುಗಳು ಹಾಗೂ ಹವಾಲ ವ್ಯವಹಾರಕ್ಕೆ ಬಳಸಿದ್ದ ಒಂದು ಡೈರಿ ಜಪ್ತಿ ಮಾಡಲಾಗಿದೆ. ಆರೋಪಿಗಳು ವಂಚನೆ ಸಲುವಾಗಿಯೇ ಕಬ್ಬನ್‌ ಪೇಟೆಯಲ್ಲಿ ಕಚೇರಿ ತೆರೆದಿದ್ದರು. ಕಟ್ಟಡದ ಮಾಲೀಕರಿಗೆ ನಕಲಿ ಆಧಾರ್‌ ಕಾರ್ಡ್‌ ಕೊಟ್ಟು ಕಚೇರಿ ಬಾಡಿಗೆಗೆ ಪಡೆದಿದ್ದರು. ಮುಂಗಡವಾಗಿ 1 ಲಕ್ಷ ರು. ನೀಡಿದ್ದರು. ಕಚೇರಿ ಪರಿಶೀಲನೆ ವೇಳೆ ಕೆಲವು ದಾಖಲೆಗಳು ಹಾಗೂ ನೋಟು ಎಣಿಸುವ ಯಂತ್ರ ಪತ್ತೆಯಾಗಿದ್ದು, ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!