ವಿಧವೆ ಮಹಿಳೆಯ ಸಹವಾಸ ಮಾಡಿದ ವ್ಯಕ್ಯಿಯೊಬ್ಬ ವಿಡಿಯೋ ಮಾಡಿ ತನ್ನ ಸಾವಿಗೆ ನಗರಸಭೆ ಸದಸ್ಯ ಅಂಬರೀಷ್ ಕಾರಣ ಎಂದು ಹೇಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್‌ನ ನಂದಿ ರಸ್ತೆಯಲ್ಲಿ ನಡೆದಿದೆ.
ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ (ಸೆ.26): ವಿಧವೆ ಮಹಿಳೆಯ ಸಹವಾಸ ಮಾಡಿದ ವ್ಯಕ್ಯಿಯೊಬ್ಬ ವಿಡಿಯೋ ಮಾಡಿ ತನ್ನ ಸಾವಿಗೆ ನಗರಸಭೆ ಸದಸ್ಯ ಅಂಬರೀಷ್ ಕಾರಣ ಎಂದು ಹೇಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್‌ನ ನಂದಿ ರಸ್ತೆಯಲ್ಲಿ ನಡೆದಿದೆ. ಹೌದು! ಪ್ರಶಾಂತ್ ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿ.
ಪ್ರಶಾಂತ್ ಸುಮಾ ಎಂಬಾಕೆ ಜೊತೆ ಗೆಳೆತನ ಬೆಳಸಿ ಆಕೆಯ ಜೊತೆ ಪ್ರೀತಿ ಪ್ರೇಮ ಅಂತಾ ಸುತ್ತಾಡಿ ಈಗ ಸುಮಾ ಪತಿಯ ಸ್ನೇಹಿತ ಹಾಗೂ ನಗರಸಭೆ ಸದಸ್ಯ ಅಂಬರೀಶ್ ನನ್ನ ಸಾವಿಗೆ ಕಾರಣ ಎಂದು ವಿಡಿಯೋ ಮಾಡಿ ಅದನ್ನ ತನ್ನ ವಾಟ್ಸಫ್ ಸ್ಟೇಟಸ್‌ಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ನಗರಸಭೆ ಸದಸ್ಯ ಅಂಬರೀಶ್ ಹಾಗೂ ಸುಮಾ ಮೇಲೆ ಎಫ್‌ಐಆರ್ ದಾಖಲಾಗಿದೆ.
Chikkaballapur: ಜಾತಿಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಸುಮಾ ಮನೆಯಲ್ಲಿ ಬಾಡಿಗೆಗೆ ಇದ್ದ ಪ್ರಶಾಂತ್: ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡ್‌ನಲ್ಲಿ ವಾಸವಾಗಿದ್ದ ಸುಮಾ ತನ್ನ ಮನೆಯಲ್ಲೆ ಪ್ರಶಾಂತ್‌ಗೆ ರೂಂ ಬಾಡಿಗೆಗೆ ನೀಡಿದ್ದಳು. ಕಳೆದ 2 ವರ್ಷಗಳ ಹಿಂದೆಯಷ್ಟೆ ಸುಮಾ ಪತಿ ರಮೇಶ್ ಕೋವಿಡ್‌ನಿಂದ ಮೃತಪಟ್ಟಿದ್ದ, ಇದಾದ ಬಳಿಕ ನಗರದಲ್ಲಿ ಸ್ಟಿಕ್ಕರ್ ಕಟ್ಟಿಂಗ್ ಅಂಗಡಿ ಇಟ್ಟುಕೊಂಡಿದ್ದ ಪ್ರಶಾಂತ್ ಸುಮಾ ಮನೆಗೆ ಬಂದು ರೂಂ ಬಾಡಿಗೆ ಪಡೆದು ವಾಸವಾಗಿದ್ದ, ಹೀಗೆ ಸುಮಾ ಹಾಗೂ ಪ್ರಶಾಂತ್ ನಡುವೆ ಪ್ರೀತಿ, ಪ್ರೇಮ ಏರ್ಪಟ್ಟಿತ್ತು. ಇನ್ನೇನು ಮದುವೆ ಆಗೋ ಬಗ್ಗೆಯು ಯೋಚನೆ ಮಾಡಿದ್ದರು, ಆದ್ರೆ ನಿನ್ನೆ (ಭಾನುವಾರ) ರಾತ್ರಿ ಪ್ರಶಾಂತ್ ನನ್ನ ಸಾವಿಗೆ ಅಂಬರೀಶ್ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸುಮಾಗೆ ಪತಿಯ ಸ್ನೇಹಿತರಿಂದ ಬಂದ ಸಂಕಷ್ಟ: ಹೌದು! ಸುಮಾ ಅವರ ಪತಿ ರಮೇಶ್ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ವಾಟರ್ ಮಾನ್ ಆಗಿ ಕೆಲಸ ಮಾಡಿಕೊಂಡು ಲೇವಾದೇವಿ ಮಾಡಿಕೊಂಡಿದ್ದ, ಮೃತ ಪ್ರಶಾಂತ್, ನಗರಸಭೆ ಸದಸ್ಯ ಅಂಬರೀಶ್ ಮೂವರು ಕೂಡ ಸ್ನೇಹಿತರೇ ಆದ್ರೆ ರಮೇಶ್ ಸಾವಿನ ಬಳಿಕ ಈತನ ಬಡ್ಡಿ, ಹಣಕಾಸಿನ ವ್ಯವಹಾರ ಹೆಚ್ಚಾಗಿ ಅಂಬರೀಶ್ ನೋಡಿಕೊಳ್ಳುತ್ತಿದ್ದ, ಪ್ರಶಾಂತ್ ಕೂಡ ಸುಮಾ ಅವರ ಜೊತೆ ಪ್ರೀತಿ, ಪ್ರೇಮ ಅಂತಾ ಭಾಂಧವ್ಯ ಬೆಳಸಿಕೊಂಡಿದ್ದು, ಸಲುಗೆಯಿಂದಲೇ ಎಲ್ಲಾ ಕಡೆ ಟ್ರಿಪ್, ಸುತ್ತಾಟ ನಡೆಸಿದ್ದರು. ಆದ್ರೆ ಇದೀಗ ಸುಮಾಗೆ ಪತಿಯ ಸ್ನೇಹಿತರಿಂದಲೇ ಸಂಕಷ್ಟ ಬಂದಿದ್ದು, ಪೊಲೀಸ್ ಠಾಣೆಯ ಮೆಟ್ಟಿಲು ಏರುವ ಮಟ್ಟಕ್ಕೆ ಬಂದಿದೆ.
ಮದುವೆ ಆಗೋಣ ಬಾ ಅಂತಾ ಕರೆದಿದ್ದಳು: ಪ್ರಶಾಂತ್ ಹಾಗೂ ಸುಮಾ ನಡುವೆ ಪ್ರೀತಿ ಆಗಿದ್ದು, ಅದು ಮದುವೆಯಾಗೋ ಮಟ್ಟಕ್ಕೆ ಬೆಳೆದಿತ್ತು ಎಂದು ಸ್ವತಃ ಪ್ರಶಾಂತ್ ಸಹೋದರಿ ವೀಣಾ ಹೇಳಿದ್ದಾರೆ. ಪ್ರಶಾಂತ್ ಹಾಗೂ ಸುಮಾ ಇಬ್ಬರು ಸಾಕಷ್ಟು ಕಡೆ ಟ್ರಿಪ್ ಹೋಗಿದ್ದು,ಕೆಲವು ದಿನಗಳ ಬಳಿಕ ಅಧಿಕೃತವಾಗಿ ಮದುವೆಯಾಗಲು ತಯಾರಿ ಮಾಡಿದ್ದರು. ಬೇರೆ ಕಡೆ ಮನೆ ಮಾಡಿಕೊಂಡಿದ್ದ ಪ್ರಶಾಂತ್‌ನನ್ನು ಸುಮಾ ಅವರೇ ಖುದ್ದು, ನಮ್ಮ ಮನೆಗೆ ಬಂದು ಇರು ಅಂತಾ ಬಾಡಿಗೆ ನೆಪದಲ್ಲಿ ಇಲ್ಲಿಗೆ ತಂದು ಇರಿಸಿಕೊಂಡಿದ್ದಳು ಎಂದು ವೀಣಾ ಆರೋಪಿಸಿದ್ದಾಳೆ.
ನಾನು ಲಾ ಓದಿದ್ದೇನೆ, ಬೊಮ್ಮಾಯಿ ಲಾ ಓದಿಲ್ಲ, ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ
ಅಲ್ಲದೇ ನನ್ನ ತಮ್ಮನ ಸಾವಿಗೆ ಅಂಬರೀಶ್ ಹಾಗೂ ಸುಮಾ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾ ಅಂಬರೀಶ್ ಜೊತೆಗೆ ಸಲುಗೆಯಿಂದ ಮಾತನಾಡುತ್ತಿದ್ದಳು. ಈ ವಿಚಾರದಲ್ಲಿ ಅಂಬರೀಶ್, ಸುಮಾ, ಪ್ರಶಾಂತ್ ಮಧ್ಯೆ ಗಲಾಟೆ ಆಗಿದೆ ಎನ್ನಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆಯೂ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಬಯಲಿಗೆ ಬರಲಿದೆ.