ಮದ್ಯ ಖರೀದಿಸಲು ಸರ್ಕಾರಿ ಕಚೇರಿಯ ಪೀಠೋಪಕರಣಗಳನ್ನೇ ಮಾರಿದ ಪ್ಯೂನ್

By Suvarna NewsFirst Published Sep 26, 2022, 7:54 PM IST
Highlights

Crime News: ಮದ್ಯ ವ್ಯಸನಿ ನೌಕರನೊಬ್ಬ  ಸಾರಾಯಿ ಖರೀದಿಗಾಗಿ ತಾನು ಕೆಲಸ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪೀಠೋಪಕರಣಗಳು ಮತ್ತು ಫೈಲ್‌ಗಳನ್ನು ಮಾರಾಟ ಮಾಡಿದ್ದಾನೆ. 

ಓಡಿಶಾ (ಸೆ. 26): ಮದ್ಯ ವ್ಯಸನಿ ನೌಕರನೊಬ್ಬ  ಸಾರಾಯಿ (Alcohol) ಖರೀದಿಗಾಗಿ ತಾನು ಕೆಲಸ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ (DEO) ಪೀಠೋಪಕರಣಗಳು ಮತ್ತು ಫೈಲ್‌ಗಳನ್ನು ಮಾರಾಟ ಮಾಡಿರುವ ಘಟನೆ ಓಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಈ ಬೆನ್ನಲ್ಲೇ ಡಿಇಓ ಕಚೇರಿಯ ನೌಕರ ಎಂ ಪಿತಾಂಬರನ್ನು ಕೆಲಸದಿಂದ ಅಮಾನತು (Suspend) ಮಾಡಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆರೋಪಿಯು ಕಳೆದ ಎರಡು ವರ್ಷಗಳಿಂದ ಈ ರೀತಿ ಕಚೇರಿಯ ವಸ್ತುಗಳ ಮಾರಾಟ ಮಾಡುತ್ತಿದ್ದಾನೆ ಎಂದು ವರದಿಗಳು ತಿಳಿಸಿವೆ. ಕಚೇರಿಯು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರಿಂದ  ಅಧಿಕಾರಿಗಳು ಕಚೇರಿಯ ಹಳೆ ಕಟ್ಟಡದ ಬಳಿ ಹೆಚ್ಚಾಗಿ ಗಮನಹರಿಸಿಲ್ಲ.ಇದನ್ನೇ ಬಂಡವಾಳ ಮಾಡಿಕೊಂಡ ಮದ್ಯವ್ಯಸನಿ ನೌಕರ ಕಚೇರಿಯ ಪೀಠೋಪಕರಣಗಳು ಮಾರಾಟ ಮಾಡಿದ್ದಾನೆ. 

ಇನ್ನು ಕಚೇರಿ ಸ್ಥಳಾಂತಗೊಂಡ ಬಳಿಕ ಹಳೆಯ ಕಟ್ಟಡದ ಜವಾಬ್ದಾರಿಯನ್ನು ಪೀತಾಂಬರನಿಗೆ ನೀಡಲಾಗಿತ್ತು. ಹೀಗಾಗಿ ತನ್ನ ಅಗತ್ಯಗಳನ್ನು ಪೂರೈಸಲು ಕಟ್ಟಡದ ಎಲ್ಲಾ ವಸ್ತುಗಳನ್ನು ಸ್ಕ್ರ್ಯಾಪ್ ವಿತರಕರಿಗೆ ಮಾರಾಟ ಮಾಡಿದ್ದಾನೆ. ಕುತೂಹಲಕಾರಿಯಾಗಿ ಕಟ್ಟಡವು ನಗರದ ಟೌನ್ ಪೊಲೀಸ್ ಠಾಣೆಯ (Police Station) ಪಕ್ಕದಲ್ಲಿದೆ.

ಸರ್ಕಾರಿ ಕಟ್ಟಡ ಸಂಪೂರ್ಣ ಖಾಲಿ: ಇನ್ನು ಸಾಕಷ್ಟು ಸಂಖ್ಯೆಯ ದಾಖಲೆಗಳು ಮತ್ತು ಪೀಠೋಪಕರಣಗಳು ಈ ಕಚೇರಿಯಲ್ಲಿದ್ದವು ಎನ್ನಲಾಗಿದೆ. ಆದರೂ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಯಾರೂ ಈ ಕಟ್ಟಡಕ್ಕೆ ಭೇಟಿ ನೀಡಿಲ್ಲ. ಇನ್ನು ಹಿರಿಯ ಅಧಿಕಾರಿಯೊಬ್ಬರು ಕೆಲವು ಹಳೆಯ ಕಡತಗಳನ್ನು (Documents) ಪರಿಶೀಲಿಸಲು ಕಚೇರಿಗೆ ಹೋದ ನಂತರ ಘಟನೆ ಬೆಳಕಿಗೆ ಬಂದಿದೆ. 

ಕಳ್ಳನ ಜತೆ ಬಂದ ಪೊಲೀಸರ ಕೂಡಿ ಹಾಕಿದ ಚಿನ್ನದಂಗಡಿ ಮಾಲೀಕರು!

ಕಟ್ಟಡವು ಸಂಪೂರ್ಣವಾಗಿ ಖಾಲಿಯಾಗಿರುವುದನ್ನು ಕಂಡು ಅಧಿಕಾರಿ ದಿಗ್ಭ್ರಮೆಗೊಂಡಿದ್ದಾರೆ. ಕಡತಗಳು ಮತ್ತು ಪೀಠೋಪಕರಣಗಳು ಮಾತ್ರವಲ್ಲದೆ ಕೆಲವು ಬಾಗಿಲುಗಳು ಮತ್ತು ಕಿಟಕಿಗಳು ಸಹ ಕಾಣೆಯಾಗಿದೆ. ಈ ಬಗ್ಗೆ ಅಧಿಕಾರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಚ್ಚಿದ ಕಚೇರಿ ಕಟ್ಟಡಕ್ಕೆ ಯಾರೂ ಭೇಟಿ ನೀಡದ ಕಾರಣ ಕಳೆದ ಎರಡು ವರ್ಷಗಳಿಂದ ಮದ್ಯ ಖರೀದಿಸಲು  ಎರಡು ಬಾಗಿಲು, 35 ಅಲ್ಮೇರಾಗಳು, 10 ಸೆಟ್ ಕುರ್ಚಿಗಳು ಮತ್ತು ಟೇಬಲ್‌ಗಳು ಸೇರಿದಂತೆ ಎಲ್ಲಾ ಫೈಲ್‌ಗಳು, ಪೀಠೋಪಕರಣಗಳನ್ನು ನೌಕರ ಸ್ಕ್ರ್ಯಾಪ್‌ ಡೀಲರ್‌ಗೆ ಮಾರಾಟ ಮಾಡಿರುವುದು ವಿಚಾರಣೆಯ ವೇಳೆ ತಿಳಿದುಬಂದಿದೆ.

click me!