ಮದುವೆಯಾಗುವುದಾಗಿ ನಂಬಿಸಿ ಪ್ರೇಮಿ ಕೈಕೊಟ್ಟಿದ್ದಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ಪಿಜಿಯೊಂದರಲ್ಲಿ ನಡೆದಿದೆ. ಕಲ್ಪನಾ ಹೊಸಮನಿ (23) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಮೈಲಾರಿ,
ಧಾರವಾಡ (ಜು.4): ಮದುವೆಯಾಗುವುದಾಗಿ ನಂಬಿಸಿ ಪ್ರೇಮಿ ಕೈಕೊಟ್ಟಿದ್ದಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡ ಪಿಜಿಯೊಂದರಲ್ಲಿ ನಡೆದಿದೆ.
ಕಲ್ಪನಾ ಹೊಸಮನಿ (23) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಮೈಲಾರಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ. ಸದ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಹಿನ್ನೆಲೆ:
ಯುವಕ ಮೈಲಾರಿ ಪರಿಚಯವಾಗಿದ್ದಾನೆ. ಮೂಲತಃ ಧಾರವಾಡದ ಮೂಲದವನೇ ಆಗಿರುವ ಯುವಕ ಮೈಲಾರಿ. ಯುವತಿಗೆ ಪರಿಚಯ ಆಗಿದ್ದಾನೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಒಪ್ಪಿಗೆ ಪ್ರೀತಿಸಿದ್ದಾರೆ. ಈ ವೇಳೆ ಯುವಕ ಮೈಲಾರಿ ಯುವತಿಗೆ ಮದುವೆಯಾಗೋದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆಂದು ಆರೋಪಿಸಿರುವ ಯುವತಿ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಊರಿಗೆ ತೆರಳಿದ್ದಾನೆ. ಯುವಕನ ವಂಚನೆ ಬಗ್ಗೆ ಮಹಿಳೆ ಸಂಘಟನೆ ಸದಸ್ಯೆಯೊಂದಿಗೆ ಯುವಕನ ಮನೆಗೆ ತೆರಳಿರುವ ಯುವತಿ. ಆ ಸಂದರ್ಭದಲ್ಲಿ ಹಲ್ಲೆ ಮಾಡಲು ಮುಂದಾಗಿರುವ ಯುವಕನ ಕಡೆಯವರು.
ಮನೆ ಮೇಲೆ ಗುಡ್ಡದ ಮಣ್ಣು ಕುಸಿದು ಕೂಲಿ ಕಾರ್ಮಿಕ ಮಹಿಳೆ ದುರ್ಮರಣ!
ಸದ್ಯ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಯುವತಿ ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.