ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ನ.21) : ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಕೇಳಿಬಂದಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ನೊಂದ ಯುವತಿ, ಮಹಮದ್ ರೌಫ್ ಸೇರಿದಂತೆ ಮೂವರ ವಿರುದ್ಧ ಹರಿಹರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಬಲವಂತವಾಗಿ ಅಮಲು ಪದಾರ್ಥಗಳ ಜ್ಯೂಸ್ ಕುಡಿಸಿ ತಳಿ ಕಟ್ಟಿ ಬ್ಲಾಕ್ ಮೇಲ್
ಚಿಕ್ಕಮಗಳೂರಿನ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಕಳೆದ 18 ರಂದು ಎಫ್ ಐ ಅರ್ ದಾಖಲಾಗುತ್ತೆ. ಅದ್ರಲ್ಲಿದ್ದ ಆರೋಪವೇ 'ಲವ್ ಜಿಹಾದ್' ಪಿತೂರಿ ಅನ್ನೋದು. ಸಹೋದರಿಯ ಖಾಸಗಿ ಪೋಟೋವನ್ನು ಕೊಪ್ಪದ ಮೊಹಮ್ಮದ್ ರೋಫ್ ಎಂಬಾತ ವೈರಲ್ ಮಾಡಿದ್ದಾನೆಂದು ಅರೋಪಿಸಿ ಯುವತಿಯ ಅಣ್ಣ ದೂರು ಸಲ್ಲಿಸಿದ್ದರು. ಆದರೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಮೊದಲು ನಿರ್ಲಕ್ಷ್ಯ ವಹಿಸಿದ್ದರು. ಬೇಸತ್ತ ಸಹೋದರ ತನಿಖೆ ಮಾಡದ ಪೊಲೀಸರ ವಿರುದ್ಧ ಎಸ್‌ಪಿಗೆ ದೂರು ಸಲ್ಲಿಸಿದ್ದರು. ತನಿಖೆ ಶುರು ಮಾಡ್ತಾ ಇದ್ದಂತೆ ಮತ್ತೊಂದು ದೂರು ಹರಿಹರಪುರ ಪೊಲೀಸ್ ಠಾಣೆಗೆ ನೀಡಲಾಗಿದೆ. ಸ್ವತಃ ಮೋಸಕ್ಕೆ ಒಳಗಾದ ಯುವತಿಯೇ ದೂರು ನೀಡಿದ್ದಾಳೆ.
ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಆರೋಪ, ತಂಗಿಯ ಫೋಟೋ ಜಾಲತಾಣದಲ್ಲಿ ಹಾಕಿದವನ ವಿರುದ್ಧ ಅಣ್ಣನ ದೂರು
ಹರಿಹರಪುರ ಪೊಲೀಸ್ ಠಾಣೆಗೆ ದೂರು ನೀಡಿದ ಯುವತಿ ಮಾನಸ
ದೂರಿನಲ್ಲಿ ಯುವತಿ ಗಂಭೀರ ಅರೋಪ ಮಾಡಿದ್ದು ಮೊಹಮ್ಮದ್ ರೌಫ್ ಸೇರಿ ಇಬ್ಬರು ಸ್ನೇಹಿತರು ಕಳೆದ ಮೂರು ವರ್ಷಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ತಂಪು ಪಾನೀಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಬಲವಂತವಾಗಿ ಕುಡಿಸಿ ನನ್ನ ಫೋಟೋ ಹಾಗೂ ವಿಡಿಯೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ತಾಳಿ ಕಟ್ಟುವ ರೀತಿಯೂ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ದೂರಿದ್ದಾಳೆ.
ಈಗ ಮಹಮದ್ ರೌಫ್ ವಿದೇಶದಲ್ಲಿ ಕೂತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುತ್ತಿದ್ದಾನೆ. ಇದರಿಂದ ನನ್ನ ಹಾಗೂ ಮನೆಯವರ ಮಾನಸಿಕ ನೆಮ್ಮದಿ ಹಾಳಾಗಿದೆ. ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳನ್ನ ಡಿಲೀಟ್ ಮಾಡಬೇಕು. ಮಹಮದ್ ರೌಫ್, ಇರ್ಫಾನ್ ಹಾಗೂ ಸೈಫ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾಳೆ.
Love jihad: ಲವ್ ಜಿಹಾದ್‌ಗೆ ಸಿಲುಕಿದ ಹಿಂದೂ ಮಹಿಳೆಯ ನರಳಾಟ
ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಸಹೋದರ ಲವ್ ಜಿಹಾದ್ ಪಿತೂರಿ ಆರೋಪದ ಪ್ರಕರಣದ ತನಿಖೆ ನಡೆಯುವಾಗ್ಲೇ ಯುವತಿ ಮತ್ತೊಂದು ದೂರು ನೀಡಿದ್ದಾಳೆ. ಅದ್ರೆ ಮೊಹಮ್ಮದ್ ರೌಫ್ ಈಗ ವಿದೇಶದಲ್ಲಿದ್ದಾನೆ. ಲವ್ ಜಿಹಾದ್ ಪ್ರಕರಣಗಳು ದಿನೇದಿನೆ ನಡೆಯುತ್ತಿವೆ. ಇದೀಗ ಈ ಪ್ರಕರಣದಲ್ಲಿ ಹೊಸ ತಿರುವು ಪಡೆದಿದ್ದು, ಕಾಫಿನಾಡು ಬೂದಿಮುಚ್ಚಿದ ಕೆಂಡವಾಗಿದೆ. ಯಾವಾಗ ಸ್ಫೋಟಗೊಳ್ಳುತ್ತದೆಂಬುದು ತಿಳಿದಿಲ್ಲ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಫಿನಾಡಲ್ಲಿ ಲವ್ ಜಿಹಾದ್ ಮರುಕಳಿಸದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.