ಕಳೆದ 6 ತಿಂಗಳ ಹಿಂದೆ ಮದುವೆಯಾಗಿದ್ದ ಮುದ್ದಾದ ಮಡದಿಯ ಮೇಲೆ ಸಂಶಯಪಟ್ಟು, ಗರ್ಭಿಣಿ ಎನ್ನುವುದನ್ನೂ ಮರೆತು ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿ. ಹೆಂಡತಿ ಮೃತದೇಹವನ್ನು ಅರಣ್ಯದಲ್ಲಿ ಹೂತು ಹಾಕಿ, ಪತ್ನಿ ಹುಡುಕಿಕೊಡುವಂತೆ ಪೊಲೀಸರ ಮುಂದೆ ನಾಟಕ ಮಾಡಿದ.
ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ ( ನ.21 ): ಆರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿ ಕಾಡಿನಲ್ಲಿ ಮೃತದೇಹ ಹೂತು ಹಾಕಿದ ಬರ್ಬರ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಚಂದ್ರಕಲಾ ಅಲಿಯಾಸ್ ರಶ್ಮಿ (20) ಕಳೆದ 43 ದಿನದ ಹಿಂದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದಾಗ ಗಂಡ ಮೋಹನ್ ಕುಮಾರ್ ಅಲಿಯಾಸ್ ಮನು (24) ನೇ ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವ ಸತ್ಯ ಬಾಯ್ಬಿಟ್ಟಿದ್ದಾನೆ.
ದಾವಣಗೆರೆ ಜಿಲ್ಲೆ ಐಗೂರು ಗ್ರಾಮದ ಯುವತಿ ಚಂದ್ರಕಲಾ ಆಲಿಯಾಸ್ ರಶ್ಮಿಯನ್ನು (Rashmi) ಚನ್ನಗಿರಿ ತಾಲ್ಲೂಕಿನ ಗಂಗಗೊಂಡನಹಳ್ಳಿಯ ಮನು ಆಲಿಯಾಸ್ ಮೋಹನ್ (Mohan) ಅವರಿಗೆ ಕೊಟ್ಟು ಇದೇ ವರ್ಷ ಏಪ್ರೀಲ್ 13ರಂದು ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದ ಹೊಸದರಲ್ಲಿ ಎಲ್ಲವು ಚೆನ್ನಾಗಿತ್ತು. ಆ ನಂತರ ಒಂದು ತಿಂಗಳಿಗೆ ರಶ್ಮಿ ಗರ್ಭಿಣಿಯಾಗಿದ್ದಳು. ನಂತರ ಐದು ತಿಂಗಳಿಗೆ ಮನೆಯವರು ಹಬ್ಬದ ಊಟ ಮಾಡಿ ಬೀಳ್ಕೊಟ್ಟಿದ್ದಾರೆ. ಗರ್ಭಣಿಯಾದ ನಂತರ ಅವಳಿಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾ ಹಿಂಸೆ (torture) ನೀಡಿದ್ದಾರೆ. ನಂತರ 43 ದಿನಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.
ಬೆಂಗಳೂರು: ಪತ್ನಿ ಕೊಲೆಗೈದು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾದ ಪತಿ?
ಸುಳಿವು ನೀಡಿದ ಹುಡುಗಿಯ ಆಡಿಯೋ: ಮೋಹನ್ ಹಾಗೂ ಹುಡುಗಿಯ ಅಕ್ಕನ ಮನೆಯವರು ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಗೆ (Channagiri Police Station) ಬಂದು ಕಾಣೆಯಾದ ಪ್ರಕರಣ ದಾಖಲಿಸಿದ್ದಾರೆ. ಮಿಸ್ಸಿಂಗ್ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಮೋಹನ್ ಕುಮಾರ್ ಕೂಡ ಪೊಲೀಸ್ ಠಾಣೆಗೂ ಬಂದಿದ್ದ. ಆದಾದ ನಂತರ ಹುಡುಗಿ ಮನೆ ಪೋಷಕರ ಜೊತೆ ಹುಡುಕಾಟ (Search) ನಡೆಸಿದ್ದಾನೆ. ಆದರೂ ರಶ್ಮಿ ಎಲ್ಲಿದ್ದಾಳೆ ಎಂಬ ಸುಳಿವು ಪತ್ತೆಯಾಗಿಲ್ಲ. ನಂತರ ಮನೆಯವರು ಹುಡುಗಿ ಕಾಣೆಯಾಗುವುದಕ್ಕು ಮುನ್ನ ಮಾತನಾಡಿದ ಆಡಿಯೋ ಕೇಳಿ ಗಂಡನ ಮೇಲೆ ಅನುಮಾನ (Doubt) ಬಂದು ಹುಡುಗಿಯ ಪಾಲಕರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮೋಹನ್ ನಾಪತ್ತೆಯಾಗಿದ್ದನು.
ಪತ್ನಿ ಮೇಲಿನ ಸಂಶಯ ಕೊಲೆಯಲ್ಲಿ ಅಂತ್ಯ: ಮೋಹನ್ ಕುಮಾರ್ ಮದುವೆಯಾದ ನಂತರ ಕೆಲ ದಿನಗಳಷ್ಟೇ ಹೆಂಡತಿಯೊಂದಿಗೆ ಸಂತೋಷವಾಗಿದ್ದ. ರಾತ್ರಿಯೆಲ್ಲಾ ಚೆನ್ನಾಗಿರುತ್ತಿದ್ದ ಗಂಡ ಬೆಳಿಗ್ಗೆ ಆದ ತಕ್ಷಣ ವ್ಯಾಘ್ರನಾಗುತ್ತಿದ್ದ. ಅತ್ತೆ, ಮಾವ , ಪತಿ ಸೇರಿ ಎಲ್ಲರೂ ರಶ್ಮಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಊಟ, ತಿಂಡಿ, ಕೆಲಸ ಬಟ್ಟೆ ಹೀಗೆ ಮನೆಯಲ್ಲಿ ಪ್ರತಿಯೊಂದಕ್ಕೂ ಹಿಂಸೆ ಕೊಡುತ್ತಿದ್ದರು. ಇವರ ಹಿಂಸೆ ತಾಳಲಾರದೇ ತನ್ನ ಅಕ್ಕಂದಿರಿಗೆ (Sister) ಪೋನ್ ಮಾಡಿ, ತನಗಾದ ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಕೊನೆಗೆ ಮನೆಯವರು ಸಮಾಧಾನ ಮಾಡಿ ಕಷ್ಟ ಸಹಿಸಿಕೊಳ್ಳುವಂತೆ ಬುದ್ದಿ ಹೇಳಿದ್ದಾರೆ. ಪತ್ನಿ ಪೋನ್ ಮಾಡುವುದನ್ನು ಪ್ರಶ್ನಿಸಿ ಮತ್ತಷ್ಟು ಹಿಂಸೆ ನೀಡಿದ್ದಾನೆ. ತದನಂತರ ಅ.9 ರಂದು ಉಸಿರುಗಟ್ಟಿಸಿ (Suffocate) ಸಾಯಿಸಿ ಮನೆಯಿಂದ 15 ಕಿ ಮೀ ದೂರದ ಶಿರಗಲಿಪುರದ ಕಣಿವೆ ಭದ್ರಾ ಅಭಯಾರಣ್ಯದ (Bhadra Forest) ಹಳ್ಳದಲ್ಲಿ ಮೃತದೇಹ ಹೂತುಹಾಕಿ ಬಂದಿದ್ದಾನೆ.
Punjab Crime: ಮನೆಗೆ ಬರಲಿಲ್ಲ ಎಂದು ಪತ್ನಿ, ಮಕ್ಕಳು ಸೇರಿ ಐವರನ್ನು ಕೊಂದ ಪತಿ
ಬೇಲ್‌ಗೆ ಸಹಿಹಾಕಲು ಬಂದು ಸಿಕ್ಕಿಕೊಂಡ: ನಂತರ ಸಂಬಂಧಿಕರ ಜೊತೆ ಸೇರಿ ಅ.10 ರಂದು ಪೊಲೀಸರಿಗೆ ದೂರು ಕೊಟ್ಟು ಹುಡುಕುವ ನಾಟಕ (Drama) ಆಡಿದ್ದಾನೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹುಡುಗಿಯ ಅಪ್ಪ, ಅಮ್ಮ ಸೇರಿಕೊಂಡು ಗಂಡನ ಮೇಲೆ ದೂರು ಕೊಟ್ಟಾಗ 25 ದಿನಗಳು ಮೋಹನ್ ಕುಮಾರ್ ತಲೆಮರೆಸಿಕೊಂಡಿದ್ದನು. ನಂತರ ಮೋಹನ್ ಅವರ ತಂದೆ ಬಂಧನವಾಗದಂತೆ ಬೇಲ್ (Bail) ಪಡೆಯಲು ಅರ್ಜಿ ಹಾಕಿದ್ದಾರೆ. ಈ ಬೇಲ್‌ಗೆ ಸಹಿಹಾಕಲು ಬಂದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೊಲೆ ಆರೋಪಿ ಮೋಹನ್ ಕುಮಾರ್‍ನನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿದ್ದು, ರಶ್ಮಿ ದೇಹ ಕೊಳೆತ ಸ್ಥಿತಿಯಲ್ಲಿತ್ತು. ಮೃತ ದೇಹವನ್ನು ಹೊರತೆಗೆದು ಮರಣೋತ್ತರ (Postmortem) ಪರೀಕ್ಷೆ ನಡೆಸಿದ್ದಾರೆ. ಸ್ಥಳದಲ್ಲಿ ಮೃತರ ಸಂಬಂಧಿಕರ ತೀವ್ರ ದುಃಖ ವ್ಯಕ್ತಪಡಿಸಿದ್ದು ಆರೋಪಿ ವಿರುದ್ಧ ಕಿಡಿಕಾರಿದ್ದಾರೆ. ತಾಯಿ, ಮಗುವನ್ನು ಕೊಂದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಗಂಡನ ಊರಲ್ಲಿಯೇ ಶವಸಂಸ್ಕಾರ:
ರಶ್ಮಿಯ ಮೃತದೇಹವನ್ನು ದಾವಣಗೆರೆ ಐಗೂರಿಗೆ ಒಯ್ಯುವುದಿಲ್ಲವೆಂದು ಹೇಳಿ ಆಕೆಯ ಗಂಡನ ಮನೆಯ ಅಡಿಕೆ ತೋಟದಲ್ಲಿ ಶವಸಂಸ್ಕಾರ ಮಾಡಿದ್ದಾರೆ. ಮೋಹನ್ ಅವರನ್ನು ಬಂಧಿಸಲಾಗಿದ್ದು, ಆತನ ತಂದೆ, ತಾಯಿ ತಲೆಮರೆಸಿಕೊಂಡಿದ್ದಾರೆ. ಮೃತರ ಸಂಬಂಧಿಕರು ಗಂಗಗೊಂಡನಹಳ್ಳಿ ಗ್ರಾಮದ ಮನೆ ಮುಂದೆ ಪ್ರತಿಭಟನೆ (Protest) ನಡೆಸಿ ಆರೋಪಿ ಮನೆಯವರಿಗೆ ಹಿಡಿಶಾಪ ಹಾಕಿ, ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.