Hijab Controversy: 'ಮುಸ್ಲಿಂರ ವಿರುದ್ಧ ಮೆರೆದಾಡಿದ್ರೆ ಮಟ್ಟ ಹಾಕ್ತೇವೆ': ರಘುಪತಿ ಭಟ್‌ಗೆ ಜೀವ ಬೆದರಿಕೆ

By Suvarna News  |  First Published Feb 12, 2022, 12:27 PM IST

*  ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮೌಖಿಕ ದೂರು ನೀಡಿದ ರಘುಪತಿ ಭಟ್‌
*  ಇಂಟರ್ನೆಟ್ ಮೂಲಕ ಜೀವ ಬೆದರಿಕೆ
*  ರಘುಪತಿ ಭಟ್‌ಗೆ ಗನ್ ಮ್ಯಾನ್ ನೀಡಲು ಪೋಲಿಸ್ ಇಲಾಖೆ ನಿರ್ಧಾರ
 


ಉಡುಪಿ(ಫೆ.12):  ಹಿಜಾಬ್(Hijab) ವಿವಾದದ ಹಿನ್ನೆಲೆಯಲ್ಲಿ ಉಡುಪಿ(Udupi) ಬಿಜೆಪಿ ಶಾಸಕ ರಘುಪತಿ ಭಟ್ ಅವರಿಗೆ ಜೀವಬೆದರಿಕೆ ಬಂದಿದೆ ಅಂತ ಸ್ವತಃ ಶಾಸಕ ರಘುಪತಿ ಭಟ್(Raghupathi Bhat) ಅವರೇ ಗೃಹ ಸಚಿವರಿಗೆ ಮೌಖಿಕ ದೂರು ನೀಡಿದ್ದಾರೆ. ಇಂಟರ್ನೆಟ್ ಮೂಲಕ ಜೀವ ಬೆದರಿಕೆ(Life Threatening), ಮುಸ್ಲಿಂರ(Muslim) ವಿರುದ್ಧ ಮೆರೆದಾಡಬೇಡ, ನಿನ್ನನ್ನು ಹೇಗೆ ಮಟ್ಟ ಹಾಕಬೇಕು ಅಂತ ಗೊತ್ತಿದೆ. ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದೆಲ್ಲಾ ಬೆದರಿಕೆ ಹಾಕಲಾಗಿದೆ ಎಂದು ಭಟ್ ಹೇಳಿಕೊಂಡಿದ್ದಾರೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರಿಗೆ ಮೌಖಿಕ ದೂರು ನೀಡಿದ್ದಾರೆ. 

ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಶಾಸಕ ರಘುಪತಿ ಭಟ್ ಅವರಿಗೆ ಗನ್ ಮ್ಯಾನ್(Gun Man) ನೀಡಲು ಪೋಲಿಸ್ ಇಲಾಖೆ(Police Department) ನಿರ್ಧರಿಸಿದೆ ಅಂತ ತಿಳಿದು ಬಂದಿದೆ. ಆದರೇ ಗನ್ ಮ್ಯಾನ್ ಬೇಡ, ಜನರು ನನ್ನ ಜೊತೆ ಇರುವಾಗ ಹೆದರಿಕೆ ಇಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. 

Tap to resize

Latest Videos

Hijab Row: 1 ವಾರ ಹಿಜಾಬ್ ತೆಗೆದಿಟ್ಟು ಬಂದ್ರೆ ಲೋಕ ಮುಳುಗಲ್ಲ: ರಘುಪತಿ ಭಟ್

ಬಿಜೆಪಿ ಶಾಸಕ ರಘುಪತಿ ಭಟ್ ಆರೋಪಕ್ಕೆ SDPI ತಿರುಗೇಟು

ಉಡುಪಿ: ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಹಿಜಾಬ್ ರಾಜ್ಯದೆಲ್ಲೆಡೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ಇದರ ಹಿಂದೆ SDPI ಕೈವಾಡ ಇದೆ ಎಂದು ಬಿಜೆಪಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದರು. ಇದೀಗ ಇದಕ್ಕೆ ಉಡುಪಿ SDPI ಜಿಲ್ಲಾಧ್ಯಕ್ಷ ನಜೀ ಪ್ರತಿಕ್ರಿಯಿಸಿದ್ದು, ಹತಾಶೆಯಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಮತಗಳ ಧ್ರುವೀಕರಣಕ್ಕೆ ನಮ್ಮ ಹೆಸರು ಬಳಸ್ತಿದ್ದಾರೆ ಅಂತೆಲ್ಲಾ ತಿರುಗೇಟು ನೀಡಿದ್ದರು. 

ಹಿಜಾಬ್ ಹಾಕದೇ ಬರಲಾಗುವುದಿಲ್ಲ ಅಂದ್ರೆ ಕಾಲೇಜಿಗೆ ಬರಬೇಡಿ ಎಂದ ಬಿಜೆಪಿ ಶಾಸಕ

ಉಡುಪಿ:  ಸರ್ಕಾರಿ ಮಹಿಳಾ ಕಾಲೇಜು ಹಿಜಾಬ್ (Hijab ) ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಜ.31 ರಂದು ನಡೆದ ಸಭೆಯಲ್ಲಿ ಹಿಜಾಬ್ ಧರಿಸಿ ಪಾಠ ಕೇಳುವ ಅವಕಾಶ ಇಲ್ಲ ಎಂದು ಸಭೆಯಲ್ಲಿ ತೀರ್ಮಾನವಾಗಿತ್ತು. 

ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ಪೋಷಕರು, ಉಪನ್ಯಾಸಕರ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಕಾಲೇಜಿನ ತರಗತಿಗೆ ಹಿಜಾಬ್ ತೆಗೆದು ಹಾಜರಾಗುತ್ತೇನೆ ಎನ್ನುವ ನಿರ್ಧಾರ ತೆಗೆದುಕೊಂಡರಷ್ಟೇ ಕಾಲೇಜಿಗೆ ಬನ್ನಿ. ಹಿಜಾಬ್ ಹಾಕದೇ ಬರಲು ಸಿದ್ಧವಿಲ್ಲ ಎಂದಾದರೆ ಕಾಲೇಜು ಆವರಣದೊಳಗೂ ಬರಬೇಡಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದ್ದರು. 

Hijab Row: ಶಾಸಕ ರಘುಪತಿ ಭಟ್ ಆರೋಪಕ್ಕೆ ಸಿಎಂ ಬೆಂಬಲ.?

ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿಷಯಕ್ಕೆ ಸಂಬಂಧಿಸಿ ಮೊನ್ನೆ ಕಾಲೇಜು ಅಭಿವೃದ್ಧಿ ಸಮಿತಿ, ಪೋಷಕರನ್ನೊಳಗೊಂಡಿರುವ ಸಮಿತಿ, ಉಪನ್ಯಾಾಸಕರ ಸಭೆ ಮಾಡಿದ್ದೇವೆ. ಹಿಜಾಬ್ ಬೇಕೆನ್ನುವ ನಾಲ್ವರು ವಿದ್ಯಾಾರ್ಥಿನಿಯರು, ಅವರ ಪೋಷಕರನ್ನು ಕರೆದಿದ್ದೇವೆ. ನಾವು ವಿವರವಾಗಿ ಮನವಿ ಮಾಡಿದ್ದೇವೆ. ಈ ಹಂತದಲ್ಲಿ ಹಿಜಾಬ್‌ಗೆ ಅವಕಾಶ ಕೊಡುವುದಕ್ಕೆ ಆಗಲ್ಲ. ಸರಕಾರ ಯಾವ ನಿರ್ಧಾರ ಮಾಡುತ್ತದೋ ಸಮಿತಿ ನಿರ್ಧಾರ ತನಕವೂ ಕಾಯಬೇಕು. ಕಾಂಪೌಂಡ್ ಆವರಣದವರೆಗೆ ಹಿಜಾಬ್ ಹಾಕಿಕೊಂಡು ಬಂದು ಕ್ಲಾಸ್‌ರೂಮ್‌ನಲ್ಲಿ ಹಿಜಾಬ್ ತೆಗೆದು ಹಾಜರಾಗಬೇಕು ಎಂದು ತಿಳಿಸಿದ್ದರು. 

ಕಾಲೇಜು ಆವರಣದೊಳಗೆ ನಿಮ್ಮ ನಿರ್ಧಾರ ಮಾಡುವಂತಿಲ್ಲ. ನಮ್ಮ ನಿರ್ಧಾರ ಆಗಿದೆ. ಇಲ್ಲಿಗೆ ಬಂದು ಕಾಲೇಜಿನ ಶೈಕ್ಷಣಿಕ ವಾತಾವರಣ ಹಾಳು ಮಾಡಬಾರದೆಂದು ಹೇಳಿದ್ದೇವೆ. ಪೊಲೀಸ್ ಇಲಾಖೆಗೂ ತಿಳಿಸಿದ್ದೇವೆ. ಬೇರೆ ಬೇರೆ ಸಂಘ-ಸಂಸ್ಥೆಗಳು, ಮಾಧ್ಯಮದವರು, ಯಾರನ್ನು ನಾಳೆಯಿಂದ ಅವಕಾಶ ಬೇಡ. ಇನ್ನೆರಡು ತಿಂಗಳಲ್ಲಿ ಪರೀಕ್ಷೆ ಬರುತ್ತದೆ. ಉಳಿದ ಮಕ್ಕಳ ಪೋಷಕರು ದೂರುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಿ. ಉಳಿದ ಮಕ್ಕಳಿಗೆ ಓದುವುದಕ್ಕೆ ಸಮಸ್ಯೆಯಗುತ್ತಿದೆ ಎಂದು ಶಾಸಕರು ಹೇಳಿದ್ದರು. 

click me!