Bengaluru Drugs Racket: ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಸೆರೆ

By Kannadaprabha News  |  First Published Feb 12, 2022, 6:44 AM IST

*  11 ಕೆ.ಜಿ.ಗಾಂಜಾ, 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ
*  ಖಚಿತ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ
*  ಮಾದಕವಸ್ತು ಸೇವನೆಯ ಚಟಕ್ಕೆ ಬಿದ್ದಿರುವ ವ್ಯಕ್ತಿಗಳಿಗೆ ಗಾಂಜಾ ಮಾರಾಟ 


ಬೆಂಗಳೂರು(ಫೆ.12):  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕವಸ್ತು(Drugs) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು(Police) 11 ಕೆ.ಜಿ. ಗಾಂಜಾ(Marijuana) ಹಾಗೂ 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಿದ್ದಾರೆ.

ಮಾಗಡಿ ರಸ್ತೆ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಜಾಜಿನಗರ 5ನೇ ಬ್ಲಾಕ್‌ನ 10ನೇ ಮುಖ್ಯರಸ್ತೆಯ ದಂಡಪಾಣಿ ದೇವಸ್ಥಾನದ ಹಿಂಭಾಗ ಫೆ.10ರಂದು ಮಧ್ಯಾಹ್ನ 1.15ರ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಚಾಮುಂಡಿನಗರದ ಶರತ್‌ಕುಮಾರ್‌ ಅಲಿಯಾಸ್‌ ವಾಸ್ನೆ(30) ಎಂಬಾತನನ್ನು ಬಂಧಿಸಲಾಗಿದೆ(Arrest). ಆರೋಪಿಯಿಂದ(Accused) 4 ಕೆ.ಜಿ. ಗಾಂಜಾ ಹಾಗೂ 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

Punjab: ಡ್ರೋನ್‌ನಲ್ಲಿ ಆರ್‌ಡಿಎಕ್ಸ್‌, ಬಾಂಬ್‌ ತಯಾರಿಕೆ ಸಾಧನ ಕಳಿಸಿದ ಪಾಕಿಸ್ತಾನ

ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು(Students) ಹಾಗೂ ಟೆಕ್ಕಿಗಳು ಮತ್ತು ಮಾದಕವಸ್ತು ಸೇವನೆಯ ಚಟಕ್ಕೆ ಬಿದ್ದಿರುವ ವ್ಯಕ್ತಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯು ಈ ಹಿಂದೆ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನು(Bail) ಪಡೆದು ಹೊರಬಂದ ಬಳಿಕವೂ ಹಳೇ ಚಾಳಿ ಮಂದುವರಿಸಿದ್ದ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಜ್ಞಾನಭಾರತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ 1ನೇ ಬ್ಲಾಕ್‌ನ ಡಾಬಾವೊಂದರ ಬಳಿ ಫೆ.10ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಪೊಲೀಸ್‌ ಸಿಬ್ಬಂದಿ ಮರುಗೇಶ್‌ ಪಾಳ್ಯದ ಹರೀಶ್‌(31) ಎಂಬಾತನನ್ನು ಬಂಧಿಸಿದ್ದರು. ಆರೋಪಿಯಿಂದ 7 ಕೆ.ಜಿ. ತೂಕದ ಗಾಂಜಾ, 400 ರು. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾದಚಾರಿಗಳ ಮೊಬೈಲ್‌ ಎಗರಿಸುತ್ತಿದ್ದ ಕಳ್ಳನ ಬೆನ್ನಟ್ಟಿಬಂಧಿಸಿದ ಪೊಲೀಸರು

ಬೆಂಗಳೂರು: ಪಾದಚಾರಿ ಮಾರ್ಗಗಳಲ್ಲಿ ಒಂಟಿಯಾಗಿ ಮೊಬೈಲ್‌ ಫೋನ್‌ನಲ್ಲಿ ಮಾತನಾಡುವವರನ್ನೇ ಗುರಿಯಾಗಿಸಿ ಕ್ಷಣ ಮಾತ್ರದಲ್ಲಿ ಮೊಬೈಲ್‌(Mobile) ಎಗರಿಸಿ ಪರಾರಿಯಾಗುತ್ತಿದ್ದ ಚಾಲಾಕಿ ಕಳ್ಳನನ್ನು ಜಯನಗರ ಠಾಣೆ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.

ಮೈಸೂರು ರಸ್ತೆ ಕುಂಬಳಗೂಡು ಬಳಿಯ ಕಂಬೀಪುರ ನಿವಾಸಿ ಸೈಯದ್‌ ಫವಾಜ್‌(25) ಬಂಧಿತ. ಆರೋಪಿ ನೀಡಿದ ಮಾಹಿತಿ ಮೇರೆಗೆ 15 ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ 65 ಮೊಬೈಲ್‌ ಫೋನ್‌ಗಳು ಮತ್ತು ಎರಡು ಬೈಕ್‌ಗಳನ್ನು ಜಪ್ತಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Drugs Racket in Bengaluru: ಆಫ್ರಿಕನ್‌ ಪ್ರಜೆಗಳ ನಿವಾಸದ ಮೇಲೆ ಸಿಸಿಬಿ ಪೊಲೀಸರ ದಾಳಿ

ಫೆ.3ರಂದು ಜಯನಗರ 4ನೇ ಹಂತದಲ್ಲಿ ಮನೋಜ್‌ ಎಂಬುವವರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬರುವಾಗ ಆರೋಪಿ ಸೈಯದ್‌ ಫವಾಜ್‌ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದು ಫೋನ್‌ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಮನೋಜ್‌ ಸಹಾಯಕ್ಕಾಗಿ ಕೂಗಿದಾಗ ಸಮೀಪದಲ್ಲೇ ಇದ್ದ ಗಸ್ತು ಪೊಲೀಸರು ಎಚ್ಚೆತ್ತುಕೊಂಡು ಬೆನ್ನಟ್ಟಿಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೋಜು-ಮಸ್ತಿಗೆ ಹಣ ಹೊಂದಿಸಲು ಕಳವು:

ದುಶ್ಚಟಗಳಿಗೆ ದಾಸನಾಗಿರುವ ಆರೋಪಿಯು ಸುಲಭವಾಗಿ ಹಣ ಸಂಪಾದಿಸಲು ಕಳವು ಕೃತ್ಯಕ್ಕೆ ಇಳಿದಿದ್ದ. ಆರೋಪಿಯು ದುಷ್ಕೃತ್ಯ ಎಸೆಗಲು ದ್ವಿಚಕ್ರ ವಾಹನ ಕಳವು ಮಾಡಿ ಅದರ ನೋಂದಣಿ ಸಂಖ್ಯೆ ಬದಲಿಸಿದ್ದ. ಬಳಿಕ ಆ ದ್ವಿಚಕ್ರ ವಾಹನದಲ್ಲೇ ಜಯನಗರ, ಬಸವನಗುಡಿ, ಮೈಕೋ ಲೇಔಟ್‌, ಸಿದ್ದಾಪುರ, ಬಿಟಿಎಂ ಲೇಔಟ್‌ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಸುತ್ತಾಡುತ್ತಿದ್ದ. ಪಾದಚಾರಿ ಮಾರ್ಗ ಹಾಗೂ ರಸ್ತೆಗಳಲ್ಲಿ ಒಂಟಿಯಾಗಿ ಮೊಬೈಲ್‌ ಫೋನ್‌ಗಳಲ್ಲಿ ಮಾತನಾಡುತ್ತಾ ಹೋಗುವವರನ್ನು ಗುರಿಯಾಗಿಸಿ ಕ್ಷಣ ಮಾತ್ರದಲ್ಲಿ ಮೊಬೈಲ್‌ ಎಗರಿಸಿ ಪರಾರಿಯಾಗುತ್ತಿದ್ದ.

ಆರೋಪಿಯು ಕದ್ದ ಮೊಬೈಲ್‌ಗಳನ್ನು ಮನೆಯಲ್ಲಿ ಇರಿಸಿಕೊಂಡು ಹಣದ ಅಗತ್ಯಬಿದ್ದಾಗ ತುರ್ತು ಕೆಲಸಕ್ಕೆ ಹಣದ ಅಗತ್ಯವಿದೆ ಎಂದು ಮೊಬೈಲ್‌ ಶಾಪ್‌ಗಳು, ಗಿರಾಕಿಗಳಿಗೆ ಒಂದೊಂದೇ ಮೊಬೈಲ್‌ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ. ಬಳಿಕ ಮೋಜು-ಮಸ್ತಿಗೆ ಆ ಹಣವನ್ನು ವ್ಯಯಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಅಧಿಕಾರಿಗಳು ತಿಳಿಸಿದ್ದಾರೆ.
 

click me!