Belagavi: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಪ್ರಾಣಬಿಟ್ಟ ತಾಯಿ: ಕಾರಣ?

Kannadaprabha News   | Asianet News
Published : Feb 12, 2022, 10:28 AM IST
Belagavi: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಪ್ರಾಣಬಿಟ್ಟ ತಾಯಿ: ಕಾರಣ?

ಸಾರಾಂಶ

*  ಬೆಳಗಾವಿ ನಗರದ ಹಿಂಡಲಗಾ ಗಣಪತಿ ದೇಗುಲ ಬಳಿಯ ಕೆರೆಯಲ್ಲಿ ಶವ ಪತ್ತೆ *  ದಂಪತಿ ಮಧ್ಯೆ ಮೇಲಿಂದ ಮೇಲೆ ನಡೆಯುತ್ತಿದ್ದ ಜಗಳ *  ಈ ಕುರಿತು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು   

ಬೆಳಗಾವಿ(ಫೆ.12):  ಕುಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಾಯೊಯೋರ್ವಳು(Mother) ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹಿಂಡಲಗಾ ರಸ್ತೆಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ನಗರದ ಸಹ್ಯಾದ್ರಿ ನಗರದ ಕೃಷಾ ಮನಿಷ್‌ ಕೇಶ್ವಾನಿ(36), ಪುತ್ರರಾದ ಭಾವೀರ(4), ವೀರೇನ್‌(17) ಆತ್ಮಹತ್ಯೆ ಮಾಡಿಕೊಂಡವರು. ನಗರದ ಹಿಂಡಲಗಾ ಗಣಪತಿ ದೇಗುಲ ಬಳಿಯ ಕೆರೆಯಲ್ಲಿ ತಾಯಿ, ಮಕ್ಕಳ ಶವ(Deadbody) ಪತ್ತೆಯಾಗಿದೆ.

ಸಾಲದ ಶೂಲ... ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ ಕುಟುಂಬ, ಪತ್ನಿ ಸಾವು

ಮಿರಜ್‌ ಮೂಲದ ಕೃಷಾ ಅವರನ್ನು ಬೆಳಗಾವಿ(Belagavi) ಸಹ್ಯಾದ್ರಿ ನಗರದಲ್ಲಿರುವ ಮನಿಷ್‌ ಎಂಬುವರೊಂದಿಗೆ 8 ವರ್ಷಗಳ ಹಿಂದೆ ಮದುವೆ(Marriage) ಮಾಡಿಕೊಡಲಾಗಿತ್ತು. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮನಿಷ್‌ ಕೇಶ್ವಾನಿ ಅತ್ಯಂತ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ನಂತರದ ದಿನಗಳಲ್ಲಿ ದಂಪತಿ ಮಧ್ಯೆ ಮೇಲಿಂದ ಮೇಲೆ ಮನಸ್ತಾಪ ಹಾಗೂ ಜಗಳ ನಡೆಯುತ್ತಿರುವುದರಿಂದ ಎರಡೂ ಕುಟುಂಬದ ಹಿರಿಯರು ತಿಳಿ ಹೇಳಿ ಎಂದಿನಂತೆ ಜೀವನ ಸಾಗಿಸುವಂತೆ ಮಾಡಿದ್ದರು. 

ಆದರೆ, ನಗರದ ಹಿಂಡಲಗಾ ರಸ್ತೆಯಲ್ಲಿರುವ ಕೆರೆಯಲ್ಲಿ ಶುಕ್ರವಾರ ಶವಗಳು ಕಂಡು ಬಂದಿವೆ. ಈ ಕುರಿತು ಮಾಹಿತಿ ಪಡೆದ ಕ್ಯಾಂಪ್‌ ಠಾಣೆಯ ಪೊಲೀಸ್‌(Police) ಇನ್ಸ್‌ಪೆಕ್ಟರ್‌ ಪ್ರಭಾಕರ ಧರ್ಮಟಿ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಕೃಷಾ ಹಾಗೂ ಭಾವೀರ ಎಂಬುವರ ಮೃತದೇಹವನ್ನ ಹೊರತೆಗೆಯಲಾಗಿದೆ. ಇನ್ನೂ ವೀರೇನ್‌ ಶವಕ್ಕಾಗಿ ಶೋಧ ಮುಂದುವರೆಸಿದ್ದಾರೆ. ಈ ಕುರಿತು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.   

ಕಳ್ಳತನ ಆರೋಪ: ಮನನೊಂದು ಮನೆ ಕೆಲಸದಾಕೆ ಆತ್ಮಹತ್ಯೆ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳ್ಳತನದ(Theft) ಸುಳ್ಳು ಆರೋಪ ಮಾಡಿದರು ಎಂದು ಆರೋಪಿಸಿ ಮಹಿಳೆಯೊಬ್ಬರು(Woman) ವಿಡಿಯೋ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಕೆ.ಆರ್‌.ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರ ನಿವಾಸಿ ಉಮಾ(40) ಮೃತ ಮಹಿಳೆ. ಇವರು ಕಳೆದ ಮೂರು ತಿಂಗಳಿಂದ ಭಟ್ಟರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ರೋಹಿತ್‌ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ರೋಹಿತ್‌ ಮನೆಯಲ್ಲಿ 12 ಲಕ್ಷ ರು. ಮೌಲ್ಯದ ಒಡವೆ ಕಳವಾಗಿದ್ದರಿಂದ ರೋಹಿತ್‌, ಮನೆ ಕೆಲಸದಾಕೆ ಉಮಾ ಮತ್ತು ಅಂಜಿನಮ್ಮ ಎಂಬುವರ ಮೇಲೆ ಅನುಮಾನಗೊಂಡು ದೂರು(Complaint) ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು(Police) ಫೆ.10ರಂದು ಎಫ್‌ಐಆರ್‌(FIR) ದಾಖಲಿಸಿ ಮನೆಗೆಲಸ ಮಾಡುವವರನ್ನು ಕರೆದು ವಿಚಾರಣೆ ಮಾಡಿದ್ದರು.

Suicide Cases: ತೊಕ್ಕೊಟ್ಟಿನ ಪ್ರಸಿದ್ಧ ಆರ್ಕಿಟೆಕ್ಟ್ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಈ ಮೊದಲು ಆತ್ಮಹತ್ಯೆಗೆ ಯತ್ನ:

ಇದರಿಂದ ಮಾನಸಿಕವಾಗಿ ನೊಂದಿದ್ದ ಉಮಾ ವಿಷ(Poison) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಘಟನೆ ಬಳಿಕವೂ ಪೊಲೀಸರು ಗುರುವಾರ ಮತ್ತೊಮ್ಮೆ ಠಾಣೆಗೆ ಕರೆಸಿ ಉಮಾ ಅವರನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದರು. ಇದರಿಂದ ಉಮಾ ಮತ್ತಷ್ಟು ಬೇಸರಗೊಂಡಿದ್ದರು. ಮನೆ ಮಾಲೀಕ ರೋಹಿತ್‌ ಮತ್ತು ಪೊಲೀಸರು ನನ್ನ ಮೇಲೆ ಸುಳ್ಳು ಆರೋಪ(Allegation) ಮಾಡಿದರೂ ಎಂದು ಶುಕ್ರವಾರ ವಿಡಿಯೋ ಮಾಡಿ ಉಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಲ ಮರುಪಾವತಿಸಲಾಗದೆ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ(Karkala): ಸಾಲ ಮರುಪಾವತಿಸಲಾಗದೆ ಯುವಕನೊಬ್ಬ ಓಮ್ನಿ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿ ತಾಲೂಕಿನ ಸೋಮೇಶ್ವರ ಘಾಟಿಯ ಎರಡನೇ ತಿರುವಿನಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ಗಿಣಿಕಲ್‌ ನಿವಾಸಿ ಜಿ.ಎನ್‌. ಲೋಕಣ್ಣ (54) ಆತ್ಮಹತ್ಯೆಗೆ ಶರಣಾದವರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು