Koppal:ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್‌ ರೇಪ್‌, ಆರೋಪಿಗಳ ಬಂಧನ

Published : Mar 08, 2025, 08:02 PM ISTUpdated : Mar 08, 2025, 08:03 PM IST
Koppal:ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್‌ ರೇಪ್‌, ಆರೋಪಿಗಳ ಬಂಧನ

ಸಾರಾಂಶ

ಹಂಪಿಗೆ ಭೇಟಿ ನೀಡಿದ್ದ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೊಪ್ಪಳ  (ಮಾ.8): ವಿಶ್ವಪ್ರಸಿದ್ಧ ಹಂಪಿ ನೋಡಲು ಬಂದಿದ್ದ ಇಬ್ಬರು ಮಹಿಳೆಯರ ಮೇಲೆ ಕೊಪ್ಪಳದ ಗಂಗಾವತಿಯ ಸಾಣಾಪೂರದಲ್ಲಿ ನಡೆದ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಭರ್ಜರಿ ಯಶ ಸಂಪಾದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು 22 ವರ್ಷದ ಮಲ್ಲೇಶ್‌ ಅಲಿಯಾಸ್‌ ಹಂದಿ ಮಲ್ಲ ಹಾಗೂ 21 ವರ್ಷದ ಚೇತನಸಾಯಿ ಸಿಳ್ಳೇಕ್ಯಾತರ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಗಳನ್ನು ಕ್ರಮವಾಗಿ ಕೊಪ್ಪಳ ಹಾಗೂ ಹೊಸಪೇಟೆಯಿಂದ ಬಂಧಿಸಲಾಗಿದೆ. ಇಬ್ಬರೂ ಕೂಡ ಗಂಗಾವತಿ ನಗರದ ಸಾಯಿನಗರ ನಿವಾಸಿಗಳು ಎಂದು ಗುರುತಿಸಲಾಗಿದ್ದು,  ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಈ ಕಾಮಿಗಳನ್ನು ಬಂಧಿಸಿದ್ದಾರೆ.

ಇದರ ನಡುವೆ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.ಎಲ್ಲಾ ರೋಪಗಳು ಗಾರೆ ಕೆಲಸ ಮಾಡುತ್ತಿದ್ದವರು ಎನ್ನಲಾಗಿದ್ದು, ಕೃತ್ಯ ಮಾಡುವ ಮುನ್ನ ಬಾರ್ ನಲ್ಲಿ ಕುಡಿದು ಬಳಿಕ‌ ಬೈಕ್ ನಲ್ಲಿ ಸಾಣಾಪೂರಕ್ಕೆ‌ ಹೋಗಿದ್ದರು ಎನ್ನಲಾಗಿದೆ. ಪರಾರಿಯಾಗಿರೋ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಸಮೀಪ ಮಾರ್ಚ್ 6 ರಂದು ರಾತ್ರಿ ಹನ್ನೊಂದು  ಗಂಟೆ ಸಮಯದಲ್ಲಿ ಘಟನೆ ನಡೆದಿತ್ತು.

ವಿದೇಶಿ ಮೂಲದ ಮಹಿಳೆಯನ್ನು ಇಸ್ರೇಲ್‌ನವರು ಎಂದು ಗುರುತಿಸಲಾಗಿದ್ದರೆ, ಇನ್ನೊಬ್ಬ ಮಹಿಳೆ ರೆಸಾರ್ಟ್‌ ಮಾಲೀಕರು ಎನ್ನಲಾಗಿದೆ. ಇಬ್ಬರೂ ಕೂಡ ತಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದು ದೂರು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ‌ ಎಫ್ ಐ ಆರ್ ದಾಖಲು ಮಾಡಲಾಗಿದೆ ಎಂದು ಕೊಪ್ಪಳ ಎಸ್‌ಪಿ ಡಾ ರಾಮ್ ಎಲ್ ಅರಸಿದ್ದಿ ಹೇಳಿದ್ದಾರೆ.

ಗ್ಯಾಂಗ್ ರೇಪ್ ನಡೆದಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ದೂರು ಏನು ಕೊಟ್ಟಿದ್ದಾರೆ ಅದರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎನ್ನುವ ಮೂಲಕ ಗ್ಯಾಂಗ್ ರೇಪ್ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಇಸ್ರೇಲ್ ಪ್ರವಾಸಿಗಳು ಹಾಗೂ ರೆಸಾರ್ಟ್‌ ಮಾಲೀಕರಾಗಿರುವ ಮಹಿಳೆ ಅತ್ಯಾಚಾರದ ಬಗ್ಗೆ ದೂರು ನೀಡಿದ್ದಾರೆ. ಘಟನೆ ಕುರಿತು ಅತ್ಯಾಚಾರ, ರಾಬರಿ,ಕೊಲೆಗೆ ಯತ್ನ ಪ್ರಕರಣ ದಾಖಲಾಗಿದೆ. ಸೆಕ್ಷನ್ 309(6),311,64(2) ,70(1),109 ಅಡಿ ಪ್ರಕರಣ ದಾಖಲಾಗಿದೆ. ಸಂತ್ರಸ್ಥರು ಅತ್ಯಾಚಾರ ಆಗಿದೆ ಎಂದು ದೂರು ನೀಡಿದ್ದಾರೆ. ಈಗಾಗಲೇ ನಿನ್ನೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನೂ ವೈದ್ಯಕೀಯ ವರದಿ ಬಂದಿಲ್ಲ. ವರದಿ ಬಂದ ಬಳಿಕ ಅದರ ಬಗ್ಗೆ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ಖಂಡಿಸಿ‌ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದು, 'ಕೊಪ್ಪಳ‌ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರದಲ್ಲಿ ಇಸ್ರೆಲ್ ಪ್ರವಾಸಿಗಳು ಹಾಗೂ ರೆಸಾರ್ಟ್‌ ಒಡತಿಯ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ  ಹೇಯ ಕೃತ್ಯ. ಘಟನೆಯ ಕುರಿತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ಕಟ್ಟುನಿಟ್ಟಿನ ತನಿಖೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಸೂಚಿಸಿದ್ದೆ. ಈಗಾಗಲೇ ಇಬ್ಬರು ಆರೋಪಿಗಳನ್ನು‌ ಬಂಧಿಸಿದ್ದು ತನಿಖೆ ಮುಂದುವರೆದಿದೆ. ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ಸರಕಾರ ಬದ್ಧವಾಗಿದೆ. ಇಂತಹ ಘಟನೆಗಳು‌ ಮರುಕಳಿಸದಂತೆ ಕ್ರಮವಹಿಸಲಾಗುವುದು' ಎಂದು ಟ್ವೀಟ್‌ ಮಾಡಿದ್ದಾರೆ.

ಓರ್ವ ಪ್ರವಾಶಿಗ ಶವವಾಗಿ ಪತ್ತೆ: ದುಷ್ಕರ್ಮಿಗಳು ದೇಶ, ವಿದೇಶದ ಐವರು ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದರು.ಈ ಪೈಕಿ ಎರಡು ದಿನದ ಹಿಂದೆ  ತುಂಗಭಧ್ರಾ ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಪ್ರವಾಸಿಗ ಶವವಾಗಿ ಪತ್ತೆ ಆಗಿದ್ದಾರೆ. ಒರಿಸ್ಸಾ ಮೂಲದ ಬಿಬಾಸ್(33) ಶವವಾಗಿ ಪತ್ತೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿಬಾಸ್‌ ಶವ ಪತ್ತೆಯಾಗಿದೆ. ಎರಡು ದಿನದ ಹಿಂದೆ  ಪ್ರವಾಸಿಗ ನಾಪತ್ತೆಯಾಗಿದ್ದ . ದುಷ್ಕರ್ಮಿಗಳು ಹಣಕ್ಕಾಗಿ ಹಲ್ಲೆ ಮಾಡಿ ಎಡದಂಡೆ ಕಾಲುವೆಗೆ ದೂಡಿದ್ದರು. ಮಾರ್ಚ್ 6 ರಂದು ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಘಟನೆ ನಡೆದಿತ್ತು. ಬಿಬಾಸ್ ಸೇರಿ, ದೇಶ, ವಿದೇಶದ ಐವರ ಮೇಲೆ ಮಲ್ಲೇಶ್‌ ಹಾಗೂ ಚೇತನ್‌ ಗ್ಯಾಂಗ್‌ ಹಲ್ಲೆ ಮಾಡಿದ್ದರು. ಈ ವೇಳೆ‌ ಮೂವರನ್ನು ಇವರು ಕಾಲುವೆಗೆ ದೂಡಿದ್ದರು. ಇಬ್ಬರು ಸುರಕ್ಷಿತ ವಾಗಿ ದಡ ಸೇರಿದ್ದರೆ, ಬಿಬಾಸ್ ನಾಪತ್ತೆಯಾಗಿದ್ದ. ಮೊನ್ನೆ ರಾತ್ರಿಯಿಂದ ಬಿಬಾಸ್ ಗಾಗಿ ಹುಡುಕಾಟ ನಡೆಸಲಾಗಿತ್ತು. ಶನಿವಾರ ಮುಂಜಾನೆ ಬಿಬಾಸ್ ಶವವಾಗಿ ಪತ್ತೆಯಾಗಿದ್ದಾರೆ.

ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ

ಒಳ್ಳಾರಿ ವಲಯ ಐಜಿಪಿ ಲೋಕೇಶ್‌ ಕುಮಾರ್ ಮಾತನಾಡಿ, ಮಾ.6ರ ರಾತ್ರಿ ನಾಲ್ವರು ಪ್ರವಾಸಿಗರು ಹಾಗೂ ಹೋಮ್‌ ಸ್ಟೇ ಮಹಿಳೆ ಸ್ಥಳಕ್ಕೆ ಬಂದಿದ್ದರು. ಇಸ್ರೇಲ್‌ ಮಹಿಳೆ, ಅಮೆರಿಕದ ಪ್ರವಾಸಿಗ, ಮಹಾರಾಷ್ಟ್ರ ಹಾಗೂ ಒಡಿಸ್ಸಾದ ಪ್ರವಾಸಿಗರು ಸಾಣಾಪುರ ಬಳಿಯ ಎಡದಂಡೆ ಕಾಲುವೆಗೆ ಬಂದು ವಾಯುವಿಹಾರ ಮಾಡುತ್ತಿದ್ದರು. ರಾತ್ರಿಯ ನಕ್ಷತ್ರ ನೋಡುತ್ತಿದ್ದ ವೇಳೆ ಮೂವರು ಯುವಕರು ಅಲ್ಲಿಗೆ ಬಂದಿದ್ದರು. ಪೆಟ್ರೋಲ್‌ಗಾಗಿ ದುಡ್ಡು ಕೇಳಿದಾಗ, ಅವರು ಇಪ್ಪತ್ತು ರೂಪಾಯಿ ಕೊಟ್ಟಿದ್ದಾರೆ. ಆದರ, 100 ರೂಪಾಯಿ ಬೇಕು ಎಂದು ಕೇಳಿದ್ದರು. ಈ ಹಂತದಲ್ಲಿ ವಾದ-ವಿವಾದ ನಡೆದು ಕಲ್ಲಿನಿಂದ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಬಾಸ್‌, ಡೇನಿಯಲ್‌ ಹಾಗೂ ಪಂಕಜ್‌ನನ್ನು ಕಾಲುವೆಗೆ ದೂಡಿದಿದ್ದಾರೆ. ಡೇನಿಯಲ್‌ ಹಾಗೂ ಪಂಕಜ್‌ ಈಜಿ ದಡ ಸೇರಿದ್ದರು. ಇಸ್ರೇಲ್‌ ಮಹಿಳೆ ಹಾಗೂ ಹೋಮ್‌ ಸ್ಟೇ ಮಾಲೀಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಲಾಗಿದೆ ಎಂದಿದ್ದಾರೆ.

ಬೆಳ್ತಂಗಡಿ: ಬಾಲಕಿ ಮೇಲೆ ಗ್ಯಾಂಗ್ ರೇಪ್, ಮೂವರು ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!