
ಬೆಂಗಳೂರು (ಮಾ.8): ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ.. ಮಹಿಳೆಯರನ್ನ ಗೌರವಿಸುವ ದಿನ.. ಇಂಥಾ ದಿನವೇ ಮಹಿಳೆಯೊಬ್ಬಳು ತನ್ನ ಗಂಡನ ಕಿರುಕುಳ ಸಹಿಸಲಾಗದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಮದುವೆ ಮೊದಲು ಸುಂದರವಾಗಿದ್ದ ಹೆಂಡತಿ ಮದುವೆ ನಂತರ ದಪ್ಪ ಆಗಿದ್ದಾಳೆ ಅಂತ ಗಂಡ ಜಗಳಕ್ಕೆ ಬಿದ್ದಿದ್ದಾನೆ. ಪತ್ನಿ ಮತ್ತು ಮಾವನ ಮೇಲೆ ಕೂಡ ಖಾರದ ಪುಡಿ ಎರಚಿ ಹಲ್ಲೆ ಯತ್ನ ಮಾಡಿದ್ದಾನೆ. ಗಂಡನ ಕಿರುಕುಳಕ್ಕೆ ಕಂಗಾಲಾಗಿ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ನೆಲಗೆದರನಹಳ್ಳಿ ನಿವಾಸಿ ರಮ್ಯಾ, ತನ್ನ ಪತಿ ಸಾಯಿಕುಮಾರ್ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟು ಗಂಡನ ಕಿರುಕುಳವನ್ನು ವಿವರಿಸಿದ್ದಾಳೆ. ಮದುವೆ ಹೊತ್ತಲ್ಲಿ ಸಣ್ಣ ಇದ್ದೆ. ಈಗ ದಪ್ಪ ಆಗಿದ್ದೀಯಾ ಅಂತಾ ಹಿಂಸೆ ಮಾಡುತ್ತಿದ್ದರು. ಪದೇಪದೆ ಹಣಕ್ಕಾಗಿ ಪೀಡಿಸುತ್ತಿದ್ದಾನೆ. ಹಣ ಕೊಡದಿದ್ರೆ ಹೊಡೆಯೋದು-ಬಡಿಯೋದು ಮಾಡ್ತಿದ್ದಾನೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ರಮ್ಯಾಗೆ 2021ರಲ್ಲಿ ಮ್ಯಾಟ್ರಿಮೋನಿ ಸೈಟ್ನಲ್ಲಿ ಆಂಧ್ರ ಮೂಲದ ಸಾಯಿಕುಮಾರ್ ಪರಿಚಯವಾಗಿತ್ತು. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರೋ ಸಾಯಿಕುಮಾರ್ ಜೊತೆಗೆ ಹಿರಿಯರ ಸಮ್ಮತಿಯೊಂದಿಗೆ ರಮ್ಯಾ ಮದುವೆಯಾಗಿದ್ದಾರೆ. ಆದರೆ, ಮದುವೆಯಾದ ಕೆಲ ದಿನಗಳಲ್ಲೇ ಪುಲಿ ಸಾಯಿಕುಮಾರ್ ತನ್ನ ವರಸೆ ತೋರಿಸೋಕೆ ಶುರು ಮಾಡಿದ್ದ. ನೀನು ನೋಡೋಕೆ ಚೆನ್ನಾಗಿಲ್ಲ. ಹಣಕ್ಕಾಗಿ ನಿನ್ನನ್ನ ಮದುವೆಯಾಗಿದ್ದೇನೆ ಅಂತಾ ಹೇಳಿ ಲಕ್ಷ ಲಕ್ಷ ಹಣ ನೀಡುವಂತೆ ಟಾರ್ಚರ್ ಮಾಡುತ್ತಿದ್ದ. ಶುಕ್ರವಾರ ಕೂಡ ನನ್ನ ಹಾಗೂ ನನ್ನ ತಂದೆ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾನೆ ಅಂತಾ ರಮ್ಯಾ ಆರೋಪಿಸಿದ್ದಾರೆ.
ನನ್ನ ತಂದೆ-ತಾಯಿ ಇಬ್ಬರಿಗೂ ಆರೋಗ್ಯ ಸಮಸ್ಯೆಯಿದೆ. ಗಂಡ ನನ್ನ ಜತೆ ಸರಿಯಾಗಿ ಸಂಸಾರ ಕೂಡ ಮಾಡ್ತಿಲ್ಲ. ನನ್ನ ಹಾಗೂ ಮಗನನ್ನ ಕೊಲೆ ಮಾಡಿ ಜೈಲಿಗೆ ಹೋಗುವುದಾಗಿ ಬೆದರಿಸುತ್ತಿದ್ದಾನೆ ಅಂತಾ ರಮ್ಯಾ ನೋವು ತೋಡಿಕೊಂಡಿದ್ದಾರೆ. ಬಾಡಿ ಶೇಮಿಂಗ್ ಮಾಡುತ್ತಾ, ಹಣಕ್ಕಾಗಿ ಹಿಂಸಿಸುತ್ತಿರೋ ಸೈಕೋ ಪತಿ ವಿರುದ್ಧ ಪೀಣ್ಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪತ್ನಿ ದಪ್ಪ ಇದ್ದಾಳೆಂದು ಹೀಗಳೆಯುವ, ದೌರ್ಜನ್ಯ ಎಸಗುವ ವಿಕೃತ ಮನಸ್ಥಿತಿಯ ಪತಿ ಸಾಯಿಕುಮಾರ್ಗೆ ಪೊಲೀಸರು ತಕ್ಕ ಪಾಠ ಕಲಿಸಬೇಕಿದೆ.
ರೋಹಿತ್ ಶರ್ಮಾ ದಪ್ಪ, ಕ್ರಿಕೆಟ್‌ಗೆ ಫಿಟ್ ಅಲ್ಲವೆಂದು ವಿವಾದದಲ್ಲಿರುವ ಶಮಾಗೂ ಮಂಗಳೂರಿಗೂ ನಂಟೇನು?
ಕಳೆದ ತಿಂಗಳು ಕೂಡ ಬೆಂಗಳೂರಿನಲ್ಲಿ ಇಂಥದ್ದೇ ಕೇಸ್ ವರದಿಯಾಗಿತ್ತು. ಯುವಕ ದಪ್ಪಗಿರೋದಕ್ಕೆ ಮದುವೆಗೆ ಹುಡಿಗಿ ಸಿಗುತ್ತಿರಲಿಲ್ಲ. ಇದರಿಂದ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಶರಣಾಗಿದ್ದಾನೆ. ಮದುವೆಯಾಗಲು ಹುಡುಗಿ ಸಿಗದ ಹಿನ್ನೆಲೆಯಲ್ಲಿ 28 ವರ್ಷದ ಯುವಕ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಂಗಳಮ್ಮ ದಂಪತಿಗೆ ವೆಂಕಟೇಶ್ ಸೇರಿ ಇಬ್ಬರು ಗಂಡು ಮಕ್ಕಳಿದ್ದರು. ಇಬ್ಬರಿಗೂ ಮದುವೆಯಾಗಿರಲಿಲ್ಲ. ವೆಂಕಟೇಶ್ ತೀರಾ ದಪ್ಪಗಿದ್ದ ಕಾರಣಕ್ಕೆ ಹುಡಿಗಿ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ.
ರೋಹಿತ್ ಶರ್ಮಾ ಕಳಪೆ ನಾಯಕ, ದೇಹ ದಪ್ಪ, ಫಿಟ್‌ನೆಸ್ ಟೀಕಿಸಿದ ಕಾಂಗ್ರೆಸ್ ನಾಯಕಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ