ಕೊಪ್ಪಳದಲ್ಲಿ ಮತ್ತೊಂದು ಭೀಕರ ಅಪಘಾತ, ತಾಯಿ-ಮಗ ಸ್ಥಳದಲ್ಲೇ ಸಾವು, 9 ಮಂದಿಗೆ ಗಾಯ

By Gowthami K  |  First Published May 31, 2023, 2:58 PM IST

ಡಿವೈಡರಿಗೆ ಮಿನಿ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ತಾಯಿ, ಮಗ ಸಾವನ್ನಪ್ಪಿ 9 ಜನ  ಗಾಯಗೊಂಡಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಮಂಗಳಾಪುರ ಬಳಿ ನಡೆದಿದೆ.


ಕೊಪ್ಪಳ (ಮೇ.31): ಕೊಪ್ಪಳ ಜಿಲ್ಲೆಯ ಕುಷ್ಟಗಿ ಅಪಘಾತದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ನಡೆದಿದೆ. ಡಿವೈಡರಿಗೆ ಮಿನಿ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ತಾಯಿ, ಮಗ ಸಾವನ್ನಪ್ಪಿ 9 ಜನ  ಗಾಯಗೊಂಡಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಮಂಗಳಾಪುರ ಬಳಿ ನಡೆದಿದೆ. ಮಂಗಳಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಘಟನೆ ಈ ದುರ್ಘಟನೆ ನಡೆದಿದ್ದು, ರೇಣುಕಮ್ಮ( 50), ಪ್ರಭು(25) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಕೊಪ್ಪಳದ ತೆಗ್ಗಿನಕೇರಿ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಗೊಂಡ 9 ಜನರನ್ನು   ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಕನೂರಿನಿಂದ ಕೊಪ್ಪಳಕ್ಕೆ ಬರುತ್ತಿದ್ದ ಮಿನಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಮೂರು ದಿನಗಳ ಹಿಂದೆ ಕೂಡ ಕೊಪ್ಪಳದಲ್ಲಿ ಭೀಕರ ಅಪಘಾತ: ಮೇ.28ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಕೇರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ರಸ್ತೆಯಲ್ಲಿ ಹೋಗುವಾಗ ಕಾರಿನ ಟೈರ್‌ ಸ್ಪೋಟಗೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

Tap to resize

Latest Videos

undefined

Hassan: ತುತ್ತು ಅನ್ನ ಬೇಡಿ ಬಂದ 18 ಜನರನ್ನು ಜೀತಕಿಟ್ಟು ಉಪವಾಸದಿಂದ ಕೂಡಿ ಹಾಕಿದ

ಮೇ ತಿಂಗಳಿನಲ್ಲಿ ರಾಜ್ಯಾದ್ಯಂತ ಭೀಕರ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿ ಬಸ್‌, ಕಾರು, ಲಾರಿ, ಬೈಕ್‌ಗಳು ಸೇರಿ ಬಹುತೇಕ ವಾಹನಗಳು ನಜ್ಜುಗುಜ್ಜಾಗಿ ಪ್ರಾಣಹಾನಿ ಸಂಭವಿಸುವ ಪ್ರಕರಣಗಳೇ ಹೆಚ್ಚು.

Mysuru Road Accident: ಅಪಘಾತದಲ್ಲಿ ಬಲಿಯಾದವರ ಸಾಮೂಹಿಕ ಅಂತ್ಯ ಸಂಸ್ಕಾರ

click me!