ಕೋಲಾರದಲ್ಲಿ ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ನಾಲ್ವರು ಅಪರಾಧಿಗಳಿಗೆ ಪೋಕ್ಸೊ ಕಾಯಿದೆ ಆಡಿಯಲ್ಲಿ ಜೀವಿತಾವಧಿವರೆಗೂ ಸಜೆ, ಜೊತೆಗೆ ತಲಾ ರೂ. 25,000/- ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಜೆಯನ್ನು ವಿಧಿಸಿ, ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕೋಲಾರ (ಫೆ.18): ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಾಮಸಮುದ್ರಂ ಪೊಲೀಸ್ ಠಾಣೆ, ಕೆಜಿಎಫ್ ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಮತ್ತು ಕೆ.ಜಿ.ಎಫ್. ತಾಲ್ಲೂಕು ತಿಮ್ಮಾಪುರ ಗ್ರಾಮದ ಕಾಂತ್‌ರಾಜ್, ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ನಿವಾಸಿ ಪ್ರವೀಣ್ ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವೇಣು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪದ ಮೇಲೆ ಕಾಮಸಮುದ್ರಂ ಪೋಲೀಸ್ ಠಾಣಾಧಿಕಾರಿ ಸಿ.ಆರ್. 19/2022 ರಂತೆ ಕಲಂ 363, 376 (ಡಿಎ),376 (3), 34 ಐ.ಪಿ.ಸಿ. ಮತ್ತು ಕಲಂ 6 ಪೋಕ್ಸೊ ಕಾಯಿದೆ ರೀತಿ ಪರ‍್ಯಾದಿ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡು ಜೆ. ಎನ್. ಆನಂದ್ ಕುಮಾರ್, ವೃತ್ತ ನಿರೀಕ್ಷಕರು, ಕಾಮಸಮುದ್ರಂ ವೃತ್ತ ರವರು ಆರೋಪಿತರ ವಿರುದ್ಧ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ಸ್ಪೆಷಲ್ ಸಿ. (ಪೋಕ್ಸ್) 36/2022 ರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಿ. ಪಿ. ದೇವಮಾನೆ ಯವರು ವಿಚಾರಣೆ ನಡೆಸಿದ್ದು, ಸದರಿ ಪ್ರಕರಣದಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ಆರೋಪಿತರಾದ ಎ1 ಆನಂದ್,ಎ2 ಕಾಂತ್‌ರಾಜ್, ಎ3 ಪ್ರವೀಣ್ ಮತ್ತು ಎ4 ವೇಣು ರವರ ವಿರುದ್ಧ ಆರೋಪವು ರುಜುವಾತಾದ ಹಿನ್ನೆಲೆಯಲ್ಲಿ ದಿನಾಂಕ 17-02-2023 ರಂದು ಆರೋಪಿತರಿಗೆ ಕಲಂ 363, 376 (ಡಿಎ), 376 (3), 34 ಐ.ಪಿ.ಸಿ. ಮತ್ತು ಕಲಂ 6 ಪೋಕ್ಸೊ ಕಾಯಿದೆ ಆಡಿಯಲ್ಲಿ ಜೀವಿತಾವಧಿವರೆಗೂ ಸಜೆ, ಜೊತೆಗೆ ತಲಾ ರೂ. 25,000/- ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳ ಸಜೆಯನ್ನು ವಿಧಿಸಿ, ತೀರ್ಪು ಪ್ರಕಟಿಸಿದೆ. ಸದರಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಡಿ. ಲಲಿತಕುಮಾರಿ ರವರು ವಾದ ಮಂಡಿಸಿದ್ದರು.
Mysuru: ಮಕ್ಕಳಿಲ್ಲವೆಂಬ ಕೊರಗು, ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!
ಉಡುಪಿಯ ಕೆಮ್ಮಣ್ಣು ರಸ್ತೆ ಪಕ್ಕ ಸಿಕ್ಕ ವ್ಯಕ್ತಿ ಕುಡಿದು ಸಾವು, ಕೊಲೆಯಲ್ಲ
ಉಡುಪಿಯ ಕೆಮ್ಮಣ್ಣು ಗ್ರಾಮದ ರಸ್ತೆ ಪಕ್ಕದಲ್ಲಿ ಮೃತಪಟ್ಟವ್ಯಕ್ತಿ, ಕೊಲೆಯಾಗಿಲ್ಲ, ಆತ ವಿಪರೀತ ಮದ್ಯಪಾನ ಮಾಡಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಹಣ್ಣಿನ ವ್ಯಾಪಾರಿಗಳು ಗೂಡ್ಸ್ ರಿಕ್ಷಾದಲ್ಲಿ ವ್ಯಕ್ತಿಯೊಬ್ಬನನ್ನು ರಸ್ತೆ ಪಕ್ಕ ಮಲಗಿಸಿ ಪರಾರಿಯಾಗಿದ್ದರು, ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಆ ವ್ಯಕ್ತಿ ಮೃತಪಟ್ಟಿದ್ದು, ತನನ್ನು ಕೊಲೆ ಮಾಡಿ ತಂದು ಎಸೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿತ್ತು.
CRIME NEWS: ಮನೆಯ ಹೊಸ್ತಿಲಲ್ಲಿ ಬಿದ್ದಿತ್ತು ಶಿಕ್ಷಕಿಯ ಹೆಣ: ಸುಂದರಿ ಸಾವಿಗೆ ಕಾರಣ ಏನು ಗೊತ್ತಾ?
ಮೃತ ವ್ಯಕ್ತಿ ಎಂದಿನಂತೆ ಕುಡಿದು ಸಂತೆಯಲ್ಲಿ ಬಿದ್ದುಕೊಂಡಿದ್ದ, ಹಣ್ಣಿನ ವ್ಯಾಪಾರಿಗಳು ಆತನನ್ನು ರಿಕ್ಷಾದಲ್ಲಿ ಹಾಕಿಕೊಂಡು ಆತ ಸಾಮಾನ್ಯವಾಗಿ ಕುಡಿದು ಬಿದ್ದುಕೊಂಡಿರುತ್ತಿದ್ದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಆತ ಜೀವಂತವಿದ್ದ. ನಂತರ ಆತ ಅಲ್ಲಿ ಮೃತಪಟ್ಟಿದ್ದಾನೆಯೇ ಹೊರತು ಕೊಲೆಯಲ್ಲ, ಆತನ ಸಂಗಡಿಗರನ್ನು ವಿಚಾರಣೆ ನಡೆಸಲಾಗಿದೆ. ಕೊಲೆ ಮಾಡಲಾದ ಯಾವುದೇ ಕುರುಹುಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.