ದಲಿತ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರಗೈದು ಕೊಲೆ, ಆರೋಪಿಗಳ ಪೈಕಿ ಇಬ್ಬರು ಪೊಲೀಸ್!

Published : Jun 21, 2023, 05:20 PM IST
ದಲಿತ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರಗೈದು ಕೊಲೆ, ಆರೋಪಿಗಳ ಪೈಕಿ ಇಬ್ಬರು ಪೊಲೀಸ್!

ಸಾರಾಂಶ

ಕಂಪ್ಯೂಟರ್ ಕ್ಲಾಸ್ ತೆರಳಿದ ದಲಿತ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಗೈದು ಕೊಲೆ ಮಾಡಿದ ಘಟನೆ ನಡೆದಿದೆ. ಐವರು ಆರೋಪಿಗಳ ಪೈಕಿ ಇಬ್ಬರು ಪೊಲೀಸ್ ಪೇದೆಗಳು ಅನ್ನೋದು ಮತ್ತೊಂದು ದುರಂತ

ಜೈಪುರ್(ಜೂ.21) ಕಂಪ್ಯೂಟರ್ ತರಗತಿಗೆ ತೆರಳಿದ 20 ವರ್ಷದ ವಿದ್ಯಾರ್ಥಿನಿಯನ್ನು ಕಾಮುಕರ ಅಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ರಾಜಸ್ಥಾನದ ಬಿಕಾನೆರ್ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಐವರ ಮೇಲೆ ಪ್ರಕರಣ ದಾಖಲಾಗಿದೆ. ಇದರಲ್ಲಿ ಇಬ್ಬರು ಪೊಲೀಸ್ ಪೇದೆಗಳು ಅನ್ನೋದು ದುರಂತ. ಖಜುವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಲಿತ ಯುವತಿ ಬಿಕಾನೆರ್‌ನಿಂದ ಖಜುವಾಲಾಗೆ ಕಂಪ್ಯೂಟರ್ ಕ್ಲಾಸ್‌ಗೆ ತೆರಳಿದ್ದಾಳೆ. ಜೂನ್ 20ರ ಬೆಳಗ್ಗೆ ತರಗತಿಗೆ ತೆರಳುತ್ತಿದ್ದ ವೇಳೆ ದಿನೇಶ್ ಅನ್ನೋ ಆರೋಪಿ ಮತ್ತಿಬ್ಬರೊಂದಿಗೆ ಯುವತಿಯ ಅಪಹರಿಸಿದ್ದಾನೆ. ಅಪಹರಣ ಮಾಡಲು ದಿನೇಶ್‌ಗೆ ಇಬ್ಬರು ಪೊಲೀಸ್ ಪೇದೆಗಳು ನೆರವು ನೀಡಿದ್ದಾರೆ. ಯುವತಿಯ ಅಪಹರಣ ಮಾಡಿದ ದಿನೇಶ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.ಯಾರು ಇಲ್ಲದ ಮನೆಯಲ್ಲಿ ಸಾಮೂಹಿತ ಅತ್ಯಾಚಾರ ಎಸಗಿದ್ದಾರೆ. 

ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

ಅತ್ಯಾಚಾರದ ಬಳಿಕ ಪ್ರಕರಣ ಹೊರಬರದಂತೆ ನೋಡಿಕೊಳ್ಳಲು ಯುವತಿಯನ್ನು ಹತ್ಯೆ ಮಾಡಲಾಗಿದೆ. ಬಲಿಕ ಖಜುವಾಲಾ ಬಳಿಯ ಸಿನಿಮಾ ಮಂದಿರದ ಬಳಿ ಯುವತಿಯ ಮೃತದೇಹ ಎಸೆಯಲಾಗಿದೆ. ಈ ಕುರಿತು ಯುವತಿ ನಾಪತ್ತೆ ಎಂದು ತಂದೆ ದೂರು ದಾಖಲಿಸಿದ್ದಾರೆ. ಇತ್ತ ಪೊಲೀಸರು ಸಿಸಿಟಿವಿ ಸೇರಿದಂತೆ ಹಲವು ಕಡೆಗಳಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕ ಮಾಹಿತಿಗಳ ಅನ್ವಯ ತನಿಖೆ ಆರಂಭಿಸಿದ್ದಾರೆ. 

ಇತ್ತ ಯುವತಿಯ ಮೃತದೇಹವೂ ಪತ್ತೆಯಾಗಿದೆ. ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಆರೋಪಿಗಳ ಮಾಹಿತಿ ಸಿಕ್ಕಿದೆ. ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಪೇದೆಗಳಾದ ಭಾಗಿರತ್ ವಿಷ್ಣೋಯ್ ಹಾಗೂ ಮನೋಜ್ ವಿಷ್ಣೋಯ್ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.  ಇಬ್ಬರನ್ನು ಅಮಾನತು ಮಾಡಲಾಗಿತ್ತು. ಇದೀಗ ಪ್ರಮುಖ ಆರೋಪಿ ದಿನೇಶ್ ಹಾಗೂ ಮತ್ತಿಬ್ಬರಿಗೆ ಹುಡುಕಾಟ ಆರಂಭಗೊಂಡಿದೆ.

ನಟನೆಗೆ ಅವಕಾಶ ಕೊಡೋದಾಗಿ 75 ಲಕ್ಷ ಪಡೆದು ಅತ್ಯಾಚಾರ!
ತಾನು ನಿರ್ಮಿಸುವ ಚಲನಚಿತ್ರಗಳಲ್ಲಿ ನಟನೆಗೆ ಅವಕಾಶ ಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ .75 ಲಕ್ಷ ಪಡೆದು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇರೆಗೆ ಚಲನಚಿತ್ರ ನಿರ್ಮಾಪಕನೊಬ್ಬನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಚಲನಚಿತ್ರ ನಿರ್ಮಾಪದ ಎಸ್‌.ಕುಮಾರ್‌ ಬಂಧಿತನಾಗಿದ್ದು, ಈ ಕೃತ್ಯ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ದಾಬಸ್‌ಪೇಟೆ: ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿ ಬಂಧನ

2 ವರ್ಷಗಳ ಹಿಂದೆ ತಮ್ಮ ಪರಿಚಿತ ಬ್ಯಾಂಕ್‌ ಉದ್ಯೋಗಿ ಮೂಲಕ ಸಂತ್ರಸ್ತೆಗೆ ಕುಮಾರ್‌ ಪರಿಚಯವಾಗಿದೆ. ಆಗ ತನ್ನನ್ನು ಚಲನಚಿತ್ರ ನಿರ್ಮಾಪಕ ಎಂದು ಆರೋಪಿ ಪರಿಚಯ ಮಾಡಿಕೊಂಡಿದ್ದ. ಕೆಲ ದಿನಗಳ ಬಳಿಕ ತಾನು ‘ದಿ ಕಲ​ರ್‍ಸ್ ಆಫ್‌ ಟೊಮೆಟೊ’ ಸೇರಿದಂತೆ ಎರಡು ಸಿನಿಮಾಗಳನ್ನು ನಿರ್ಮಿಸುತ್ತಿದ್ದೇನೆ. ಅದರಲ್ಲಿ ತಮಗೆ ನಟನೆಗೆ ಅವಕಾಶ ಕೊಡುವುದಾಗಿ ಸಂತ್ರಸ್ತೆಗೆ ಆರೋಪಿ ಹೇಳಿದ್ದ. ಈ ಮಾತು ನಂಬಿದ ಬಳಿಕ ಆಕೆಯಿಂದ .75 ಲಕ್ಷವನ್ನು ಸಾಲ ರೂಪದಲ್ಲಿ ಆತ ಪಡೆದಿದ್ದಾನೆ. ಕ್ರಮೇಣ ಆಕೆಯನ್ನು ಲೈಂಗಿಕವಾಗಿ ಸಹ ಶೋಷಿಸಿದ್ದಾನೆ. ಈ ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಮಗನನ್ನು ಕೊಲ್ಲುವುದಾಗಿ ಸಂತ್ರಸ್ತೆಗೆ ಆರೋಪಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ