ತೃತೀಯಲಿಂಗಿಗಳ ಬರ್ಬರ ಹತ್ಯೆ: ಡಬ್ಬಲ್‌ ಮರ್ಡರ್‌ಗೆ ಕಾರಣ ಹೀಗಿದೆ..

By BK Ashwin  |  First Published Jun 21, 2023, 4:44 PM IST

ಮೃತರನ್ನು ಯೂಸುಫ್ ಅಲಿಯಾಸ್ ಡಾಲಿ (25) ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ (30) ಎಂದು ಗುರುತಿಸಲಾಗಿದೆ. ಕೊಲೆಯಾದ ಒಂದು ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಳಿವುಗಳನ್ನು ಹುಡುಕಿದ್ದು,  ದಾಳಿಗೆ ಬಳಸಿದ್ದ ಚಾಕು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.


ಹೈದರಾಬಾದ್ (ಜೂನ್ 21, 2023):  ತೆಲಂಗಾಣ ರಾಜಧಾನಿ ಹೈದರಾಬಾದ್‌ನ ದೈಬಾಗ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಇಬ್ಬರು ತೃತೀಯಲಿಂಗಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕಲ್ಲು ಮತ್ತು ಚಾಕುವಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ಯೂಸುಫ್ ಅಲಿಯಾಸ್ ಡಾಲಿ (25) ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ (30) ಎಂದು ಗುರುತಿಸಲಾಗಿದೆ. ಕೊಲೆಯಾದ ಒಂದು ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಳಿವುಗಳನ್ನು ಹುಡುಕಿದ್ದು,  ದಾಳಿಗೆ ಬಳಸಿದ್ದ ಚಾಕು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

Tap to resize

Latest Videos

ಇದನ್ನು ಓದಿ: ಲಂಡನ್‌ನಲ್ಲಿ ವಾರದಲ್ಲಿ ಮೂವರು ಭಾರತೀಯ ಮೂಲದವರ ಹತ್ಯೆ: ಆತಂಕದಲ್ಲಿ ಅನಿವಾಸಿ ಭಾರತೀಯರು!

ಘಟನೆಯ ವಿವರ..
ಮಂಗಳವಾರ ರಾತ್ರಿ ಹೈದರಾಬಾದ್‌ನ ತಪ್ಪಚಬುತ್ರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ತೃತೀಯಲಿಂಗಿಗಳನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ತಪ್ಪಚಬುತ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಜೋಡಿ ಕೊಲೆ ನಡೆದಿದ್ದು, ಪೊಲೀಸರಿಗೆ ಮಾಹಿತಿ ತಿಳಿದ ಬಳಿಕ ಅವರು ಸ್ಥಳಕ್ಕಾಗಮಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ತಪ್ಪಚಬುತ್ರ ಡಿಸಿಪಿ, ಮೃತ ತೃತೀಯಲಿಂಗಿಗಳನ್ನು ಯೂಸುಫ್ ಅಲಿಯಾಸ್ ಡಾಲಿ ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳಾ ಜೈಲಲ್ಲಿ ಭೀಕರ ಗಲಭೆ: 41 ಕೈದಿಗಳನ್ನು ಸುಟ್ಟು, ಶೂಟ್‌ ಮಾಡಿ ಕೊಂದ ಗ್ಯಾಂಗ್‌ಸ್ಟರ್‌ಗಳು

“ ಕೊಲೆಯಾದ ಇಬ್ಬರೂ ತಪ್ಪಚಬುತ್ರದ ನಿವಾಸಿಗಳು. ದೊಡ್ಡ ದೊಡ್ಡ ಕಲ್ಲುಗಳು  ಮತ್ತು ಚಾಕುಗಳನ್ನು ಬಳಸಿ ಅವರನ್ನು ಕೊಲ್ಲಲಾಯಿತು. ಕೃತ್ಯ ನಡೆದ ಸ್ಥಳದಲ್ಲಿ ಚಾಕು ಪತ್ತೆಯಾಗಿದೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ಕೆಲವು ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ’’ ಎಂದೂ ಹೇಳಿದರು.

ಹೊಂಡುರಾಸ್‌ ಜೈಲಲ್ಲಿ ಗಲಭೆ: 41 ಮಹಿಳೆಯರ ಸಾವು
ಮಂಗಳವಾರ ಹೋಂಡುರಾಸ್‌ನ ಮಹಿಳಾ ಜೈಲಿನಲ್ಲಿ ಭೀಕರ ಗಲಭೆ ವರದಿಯಾಗಿದ್ದು, ಈ ಗಲಭೆಯಲ್ಲಿ 41 ಮಹಿಳಾ ಕೈದಿಗಳು ಬಲಿಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ಈ ಪೈಕಿ ಹೆಚ್ಚಿನ ಮಹಿಳೆಯರು ಸುಟ್ಟು ಕರಕಲಾಗಿದ್ದು, ಅನೇಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಹಾಗೂ ಹಲವರನ್ನು ಹರಿತ ಆಯುಧಗಳಿಂದ ಭೀಕರವಾಗಿ ಇರಿದು ಕೊಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೊಂಡುರಾಸ್‌ನ ಅಧ್ಯಕ್ಷರು "ಮಾರಾ" ಸ್ಟ್ರೀಟ್‌ ಗ್ಯಾಂಗ್‌ಗಳನ್ನು ದೂಷಿಸಿದ್ದಾರೆ. ಜೈಲಿನೊಳಗೆ ಈ ಗ್ಯಾಂಗ್ ಹೆಚ್ಚು ಅಧಿಕಾರವೊಂದಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ನಾಲ್ವರು ಹಿಂದೂಗಳನ್ನೇ ಮದ್ವೆಯಾಗಿರೋ ಲವ್‌ಜಿಹಾದಿಯಿಂದ ಮತ್ತೊಬ್ಳು ಹಿಂದೂ ಯುವತಿ ಕಿಡ್ನ್ಯಾಪ್‌

ಬಲಿಯಾದ 41 ಮಹಿಳಾ ಕೈದಿಗಳಲ್ಲಿ 26 ಮಂದಿಯನ್ನು ಸುಟ್ಟುಹಾಕಿದ್ದರೆ ಮತ್ತು ಉಳಿದವರು ಹೊಂಡುರಾಸ್‌ ರಾಜಧಾನಿ ಟೆಗುಸಿಗಲ್ಪಾದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ತಮಾರಾದಲ್ಲಿರುವ ಜೈಲಿನಲ್ಲಿ ಗುಂಡು ಹಾರಿಸಲಾಯಿತು ಅಥವಾ ಇರಿತಕ್ಕೊಳಗಾದರು ಎಂದು ಹೊಂಡುರಾಸ್‌ನ ರಾಷ್ಟ್ರೀಯ ಪೊಲೀಸ್ ತನಿಖಾ ಸಂಸ್ಥೆಯ ವಕ್ತಾರ ಯೂರಿ ಮೊರಾ ಹೇಳಿದ್ದಾರೆ. ಇನ್ನು, ತೆಗುಸಿಗಲ್ಪಾ ಆಸ್ಪತ್ರೆಯಲ್ಲಿ ಕನಿಷ್ಠ 7 ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಶವಗಳನ್ನು ಜೈಲಿನಿಂದ ತೆಗೆದುಹಾಕುತ್ತಿರುವ ವಿಧಿವಿಜ್ಞಾನ ತಂಡಗಳು 41 ಡೆಡ್‌ ಬಾಡಿಗಳನ್ನು ಎಣಿಸಿದ್ದಾರೆ ಎಂದು ಖಚಿತಪಡಿಸುತ್ತದೆ" ಎಂದೂ ಯೂರಿ ಮೊರಾ ಹೇಳಿದರು.

ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್‌: 15 ದಿನದ ಹಿಂದೆಯೇ ಸ್ಕೆಚ್‌; ಕೊಲೆಗೆ ಕಾರಣ ಹೀಗಿದೆ.

click me!