ನಕಲಿ ಕೀ ಬಳಸಿ ಪಕ್ಕದ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಗ್ಯಾಂಗನ್ನು ಕೆಜಿ ನಗರ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ (ಏ.12): ನಕಲಿ ಕೀ ಬಳಸಿ ಪಕ್ಕದ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಗ್ಯಾಂಗನ್ನು ಕೆಜಿ ನಗರ ಪೊಲೀಸರು ಬಂಧಿಸಿದ್ದಾರೆ.
ಕಿರಣ್,ಆನಂದ್,ನಾನಿ ಬಂಧಿತ ಖದೀಮರು. ಕಳೆದ ಮಾ.29ರಂದು ಚಾಮರಾಜಪೇಟೆಯ ಅಪ್ಪುರಾವ್ ರಸ್ತೆ ಉಮಾ ಎಂಬಾಕೆ ಮನೆ ಕಳವು ಆಗಿತ್ತು. ನಕಲಿ ಕೀ ಬಳಸಿ 6 ಲಕ್ಷ ನಗದು ಹಣ, 3 ಲಕ್ಷ 22 ಸಾವಿರ ಚಿನ್ನಾಭರಣ ಕದ್ದಿದ್ದ ಖದೀಮರು. ಇನ್ನೂ ವಿಚಿತ್ರವೆಂದರೆ ಈ ಖದೀಮರು ಅಪರಿಚತರಲ್ಲ. ಸುಮಾರು ಹದಿನೈದು ವರ್ಷಗಳಿಂದಲೂ ಉಮಾ ಎಂಬಾಕೆಯ ಮನೆ ಹತ್ತಿರದಲ್ಲಿಯೇ ವಾಸವಾಗಿದ್ದಾರೆ. ಚಿನ್ನಾಭರಣ, ಹಣ ಕದ್ದ ಬಳಿಕ ನೇರವಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿಳದಿರಲಿ ಎಂಬ ಕಾರಣಕ್ಕೋ, ಮಾಡಿದ ಪಾಪದ ಕೆಲಸಕ್ಕೋ ಮಹದೇಶ್ವರ ಹುಂಡಿಗೆ ತಪ್ಪು ಕಾಣಿಕೆ ನೀಡಿದ್ದಾರೆ.
ಬೆಂಗಳೂರು: ರೀಲ್ಸ್ ಮಾಡಲು ಕಪ್ಪು ಬಣ್ಣದ 29 ಡಿಯೋ ಸ್ಕೂಟರ್ ಕಳುವು, ಮೂವರ ಬಂಧನ
ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮಹಿಳೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಕೊನೆಗೂ ಖದೀಮರು ಸಿಕ್ಕಿಬಿದ್ದಿದ್ದಾರೆ. ಸದ್ಯ ಅರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು. ಇದೇ ರೀತಿ ಬೇರೆಡೆ ಕಳ್ಳತನ ಮಾಡಿರುವ ಸಾಧ್ಯತೆ ಹಿನ್ನೆಲೆ ವಿಚಾರಣೆ ಮುಂದುವರಿಸಿದ್ದಾರೆ.