ಏರ್‌ಗನ್ ಜೊತೆ ಆಡುವಾಗ ಮಿಸ್‌ಫೈರ್ 8 ವರ್ಷ ಬಾಲಕನ ಎದೆ ತೂರಿದ ಗುಂಡು!

Published : Apr 12, 2024, 11:03 AM IST
ಏರ್‌ಗನ್ ಜೊತೆ ಆಡುವಾಗ ಮಿಸ್‌ಫೈರ್ 8 ವರ್ಷ ಬಾಲಕನ ಎದೆ ತೂರಿದ ಗುಂಡು!

ಸಾರಾಂಶ

ಪೋಷಕರ ನಿರ್ಲಕ್ಷದಿಂದ ಏರ್‌ಗನ್‌ ಮಿಸ್ ಫೈರ್‌ ಆಗಿ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ವಿಷ್ಣುರಾಜ್(8) ಮೃತ ಬಾಲಕ.

ಚಿಕ್ಕಮಗಳೂರು (ಏ.12): ಪೋಷಕರ ನಿರ್ಲಕ್ಷದಿಂದ ಏರ್‌ಗನ್‌ ಮಿಸ್ ಫೈರ್‌ ಆಗಿ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ನಡೆದಿದೆ.

ವಿಷ್ಣುರಾಜ್(8) ಮೃತ ಬಾಲಕ. ಕಾಫಿತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್. ಏರ್‌ಗನ್ ಮಗುವಿನ ಕೈಗೆ ಸಿಗದಂತೆ ಎತ್ತರದಲ್ಲಿಡದೆ ನಿರ್ಲಕ್ಷ್ಯವಹಿಸಿರುವ ಪೋಷಕರು. ಹೀಗಾಗಿ ಏರ್‌ಗನ್ ಹಿಡಿದು ಆಟವಾಡುತ್ತಿದ್ದ ಬಾಲಕ. ಈ ವೇಳೆ ಏರ್‌ಗನ್ ಉಲ್ಟಾ ಹಿಡಿದು ಟ್ರಿಗರ್ ಒತ್ತಿರುವ ಬಾಲಕ. ಮಿಸ್ಫೈರ್ ಆಗಿ ಎದೆಯ ಭಾಗಕ್ಕೆ ಗುಂಡುಹೊಕ್ಕಿದೆ. ತೀವ್ರ ಗಾಯಗೊಂಡ ಮಗು ಪೋಷಕರ ಕಣ್ಮುಂದೆ ಪ್ರಾಣಬಿಟ್ಟಿರುವ ಬಾಲಕ. ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.

 

 ಮಲೆನಾಡಿನಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರಲ್ಲಿ ಹರ್ಷ

ಸದ್ ಬಾಲಕನ ಮೃತದೇಹ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಂದು ಸಣ್ಣ ತಪ್ಪಿನಿಂದ, ನಿರ್ಲಕ್ಷ್ಯದಿಂದಾಗಿ ಎಂತಹ ಅನಾಹುತಗಳಾಗುತ್ತವೆಂಬುದು ಈ ಘಟನೆ ಸಾಕ್ಷಿಯಾಗಿದೆ. ಅಪಾಯಕಾರಿ, ಸ್ಫೋಟಕ, ಕೀಟನಾಶಕದಂತಹ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ಎತ್ತರದ ಸ್ಥಳದಲ್ಲಿರಿಸಬೇಕು. ಏರ್‌ಗನ್ ಬಗ್ಗೆ ಪೋಷಕರು ನಿರ್ಲಕ್ಷ್ಯ ಹೆತ್ತಮಗುವನ್ನು ಕಳೆದುಕೊಳ್ಳುವಂತೆ ಮಾಡಿದ್ದು ದುರ್ದೈವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ