ಅರೇಬಿಕ್‌ ಶಾಲೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌: 6 ತಿಂಗಳ ಮೊದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿ!

By BK Ashwin  |  First Published May 31, 2023, 4:07 PM IST

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾಬೀತಾಗಿದೆ.


ತಿರುವನಂತಪುರಂ (ಮೇ 31, 2023): ಕೇರಳದ ಖಾಸಗಿ ಧಾರ್ಮಿಕ ಶಾಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದೆ. ಬಲರಾಮಪುರಂನ ಖಾಸಗಿ ಧಾರ್ಮಿಕ ಶಾಲೆಯಲ್ಲಿ ಬಾಲಕಿ ನಿಗೂಢ ಸಾವಿನ ಪ್ರಕರಣದ ತನಿಖೆಯಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಗಣನೀಯ ಪ್ರಗತಿ ಸಾಧಿಸಿದ್ದು, ಆಕೆ 6 ತಿಂಗಳ ಹಿಂದೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ವರದಿ ಹೇಳುತ್ತಿದೆ.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆ ಪೊಲೀಸರು ಆಕೆಯ ಬಾಯ್‌ಫ್ರೆಂಡ್‌ ಮೇಲೆ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ರಕ್ಷಣೆ ಕಾಯ್ದೆ (ಪೋಕ್ಸೊ) ಪ್ರಕರಣ ದಾಖಲಿಸಿದ್ದಾರೆ. ಮೇ 13 ರಂದು ಇಡಮನಕುಝಿಯಲ್ಲಿರುವ ಖದೀಜತ್-ಉಲ್ ಕುಬ್ರಾ ಮಹಿಳಾ ಅರೇಬಿಕ್ ಕಾಲೇಜಿನ ಗ್ರಂಥಾಲಯದಲ್ಲಿ 17 ವರ್ಷದ ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು .ಮೃತಳನ್ನು ಬೀಮಾಪಲ್ಲಿಯ ಅಸ್ಮಿಯಾ ಮೋಲ್ ಎಂದು ಗುರುತಿಸಲಾಗಿದ್ದು, ಈಕೆ ಪ್ಲಸ್‌ ಒನ್‌ ಅಥವಾ ಹನ್ನೊಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿತ್ತು.

Tap to resize

Latest Videos

ಇದನ್ನು ಓದಿ: ಸಹೋದರಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನ ಮೇಲೆ ಚಾಕು ಹಾಕಿದ ಯುವಕ

ಅಲ್ಲದೆ, ಧಾರ್ಮಿಕ ಶಾಲೆಗೆ ಸೇರುವ 6 ತಿಂಗಳ ಮೊದಲೇ ಅಪ್ರಾಪ್ತೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಳು ಎಂದು ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಿದೆ. ಇನ್ನು, ವಿದ್ಯಾರ್ಥಿನಿಯನ್ನು ಧಾರ್ಮಿಕ ಶಾಲೆಯ ಸಿಬ್ಬಂದಿ ಗದರಿಸಿದ್ದರೇ ಹೊರತು ದೈಹಿಕವಾಗಿ ಹಲ್ಲೆ ಮಾಡಿರಲಿಲ್ಲ ಎಂದು ಆ ಶಾಲೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಾಗೂ, ಬಾಯ್‌ಫ್ರೆಂಡ್‌ನೊಂದಿಗಿನ ಸಂಪರ್ಕದ ಬಗ್ಗೆ ತಿಳಿದ ನಂತರ ಕುಟುಂಬವು ತನ್ನ ಮಗಳನ್ನು ಧಾರ್ಮಿಕ ಶಾಲೆಗೆ ಕಳುಹಿಸಿತ್ತು ಎಂದೂ ಪೊಲೀಸರು ಹೇಳಿದ್ದಾರೆ. ಹಾಗೆ, ಬಾಲಕಿಗೆ ಮಾನಸಿಕ ಹಿಂಸೆ ನೀಡಲಾಗಿತ್ತು ಎಂದೂ ಮಾಹಿತಿ ನೀಡಿದ್ದಾರೆ.

ಇನ್ನು, ಪೋಕ್ಸೋ ಕೇಸ್‌ ದಾಖಲಾದ ನಂತರ ಆತ್ಮಹತ್ಯೆ ಪ್ರಚೋದನೆಯ ವಿಷಯದಲ್ಲಿ ಮತ್ತಷ್ಟು ಪ್ರಗತಿ ಇರುತ್ತದೆ ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ. ಆಸ್ಮಿಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಕೆಯ ಬಾಯ್‌ಫ್ರೆಂಡ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಬಾಲಕಿ ಬರ್ಬರ ಹತ್ಯೆ ಕೇಸ್‌: 15 ದಿನದ ಹಿಂದೆಯೇ ಸ್ಕೆಚ್‌; ಕೊಲೆಗೆ ಕಾರಣ ಹೀಗಿದೆ..

ಇದು ಆತ್ಮಹತ್ಯೆ ಅಲ್ಲ: ಕುಟುಂಬಸ್ಥರ ಆಕ್ರೋಶ
ಈ ಮಧ್ಯೆ, ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅಸ್ಮಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ, ಈ ವರದಿ ಅವ್ಯವಹಾರದಿಂದ ಕೂಡಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ ಎಂದು ಆಕೆಯ ಸಂಬಂಧಿಕರು ಹೇಳಿಕೊಂಡಿದ್ದಾರೆ. ಅಲ್ಲದೆ, ಅಸ್ಮಿಯಾಳ ಮಾನಹಾನಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಸಂಬಂಧಿಕರು ದೂರಿದ್ದಾರೆ.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ನಂತರ ಆಸ್ಮಿಯಾ ಪ್ಲಸ್ ಒನ್ ಮತ್ತು ಧಾರ್ಮಿಕ ಅಧ್ಯಯನಕ್ಕಾಗಿ ಬಲರಾಮಪುರಂ ಸಂಸ್ಥೆಗೆ ಪ್ರವೇಶ ಪಡೆದರು. ಉಪವಾಸದ ಸಮಯದಲ್ಲಿ ಒಂದು ತಿಂಗಳ ರಜೆಗಾಗಿ ಮನೆಗೆ ಹಿಂದಿರುಗಿದ ಹುಡುಗಿ, ಕೆಲವು ವಿಷಯಗಳ ಬಗ್ಗೆ ದೂರು ನೀಡಿದ್ದಳು ಮತ್ತು ವಿಷಯಗಳು ಸರಿಯಾಗಿ ನಡೆಯದ ಕಾರಣ ಆ ಕಾಲೇಜಿಗೆ ತಾನು ಓದುವುದಿಲ್ಲ ಎಂದು ತನ್ನ ಪೋಷಕರಿಗೆ ತಿಳಿಸಿದ್ದಳು. ಆದರೂ, ಮಗಳನ್ನು ಸಮಾಧಾನ ಮಾಡಿ ವಾಪಸ್‌ ಶಾಲೆಗೆ ಕಳಿಸಿದ್ದರು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್‌ ಕೇಸ್‌: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!

click me!