2 ವರ್ಷದ ಮಗುವಿನ ಮೇಲೆ ಹಲ್ಲೆ ಮಾಡುವ ವೇಳೆ ಕುಟುಂಬದ ಕೆಲ ಸಂಬಂಧಿಕರು ಕೂಡ ಉಪಸ್ಥಿತರಿದ್ದರು. ಹೆಂಡತಿ ಜೊತೆಗಿನ ಮನಸ್ತಾಪದ ಕಾರಣದಿಂದಾಗಿ ತಂದೇ ಪದೇ ಪದೇ ಮಗುವಿನ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.
ನವದೆಹಲಿ (ಮಾ.26): ಎರಡು ವರ್ಷದ ಮಗಳನ್ನು ದಾರುಣವಾಗಿ ಕೊಂದ ಆರೋಪದಲ್ಲಿ ಕೇರಳ ಮಲಪ್ಪುರಂನಲ್ಲಿ ಕ್ರೂರಿ ತಂದೆಯನ್ನು ಪೊಲೀಸರು ಬಂದಿದ್ದಾರೆ. ಸೋಮವಾರ ರಾತ್ರಿ ಆರೋಪಿ ಮೊಹಮದ್ ಫೈಜ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಮೇಲೆ ಹಲ್ಲೆ ಮಾಡುವ ವೇಳೆ ಆತನ ಕುಟುಂಬದವರು ಕೂಡ ಸ್ಥಳದಲ್ಲೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿ ಜೊತೆಗಿನ ಮನಸ್ತಾಪದ ಕಾರಣದಿಂದಾಗಿ ತಂದೆ, ಮಗುವಿನ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದರು. ಮೊಹಮದ್ ಫೈಜ್ ತನ್ನ ಮಗಳನ್ನು ಹೊಡೆದು ಕೊಂದಿದ್ದಾನೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಕಳೆದ ದಿನ ಗಂಟಲಲ್ಲಿ ಆಹಾರ ಸಿಕ್ಕಿಕೊಂಡಿದೆ ಎಂದು ಪ್ರಜ್ಞೆ ತಪ್ಪಿದ್ದ ಮಗುವನ್ನು ತಂದೆ ಆಸ್ಪತ್ರೆಗೆ ಕರೆತಂದಿದ್ದರು. ಬಳಿಕ ಮಗುವಿನ ಮೃತದೇಹವನ್ನು ಮಂಜೇರಿ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ರವಾನಿಸಲಾಗಿತ್ತು.
ಇನ್ನು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ಮೇಲೆ ಹಳೆಯ ಗಾಯಗಳೂ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ ಗುದ್ದಿ ಹಲ್ಲೆ ಮಾಡಲಾಗಿದೆ. ಅದಲ್ಲದೆ, ಸಿಗರೇಟ್‌ನಿಂದ ಆಕೆಯನ್ನು ಸುಡಲಾಗಿದೆ. ವಿಪರೀತ ಹಲ್ಲೆಯ ಕಾರಣದಿಂದಾಗಿ ಮಗುವಿನ ತಲೆಯ ಮೇಲೆ ಗಂಭೀರ ಗಾಯಗಳಾಗಿದ್ದವು. ಆಕೆಯ ಪಕ್ಕೆಲುಬುಗಳು ತುಂಡಾಗಿವೆ ಎಂದು ತಳಿಸಲಾಗಿದೆ. ಆಕೆಯ ತಲೆಯ ಮೇಲೆ ರಕ್ತಗಳದ್ದವು. ಹಲ್ಲೆಯ ವೇಳೆ ತಲೆಗೆ ಗಂಭೀರ ಪ್ರಮಾಣದ ಗಾಯವಾಗಿದ್ದು, ಇಂಟರ್ನಲ್ ಬ್ಲೀಡಿಂಗ್ ಕೂಡ ಆಗಿದೆ. ಇದರಿಂದಾಗಿ ಮಗು ಸಾವು ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಂಬಂಧಿಕರೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಮೊಹಮದ್ ಫೈಜ್ ಪ್ರತಿನಿತ್ಯ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಹಾಗೂ ಆತನ ವಿರುದ್ಧ ನೀಡಲಾಗಿರುವ ದೂರನ್ನು ಹಿಂಪಡೆದುಕೊಳ್ಳುವಂತೆ ಪೀಡಿಸುತ್ತಿದ್ದ. ಇನ್ನು ಮಗುವಿನ ಅಜ್ಜಿ ರಮಾಲತ್ ಕೂಡ ಈ ಬಗ್ಗೆ ಮಾತನಾಡಿದ್ದು, ಆಹಾರ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಮಗು ಸಾವು ಕಂಡಿದೆ ಎಂದು ಫೈಜ್ ನನಗೆ ತಿಳಿಸಿದ್ದ ಎಂದಿದ್ದಾರೆ. ಮಗುವಿನ ಮೇಲೆ ಪದೇ ಪದೇ ಹೀಯಾಳಿಸುತ್ತಿದ್ದ ಹಾಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ತನ್ನ ಮಗಳ ಎದುರಿನಲ್ಲಿಯೇ ಆತ ಮಗುವನ್ನು ಹೊಡೆದು ಕೊಂದಿದ್ದಾನೆ ಎಂದು ತಿಳಿಸಿದ್ದಾರೆ.
ಮದ್ವೆ ಆಗಿ 8 ವರ್ಷ ಆಯ್ತು ಮಗು ಬೇಡ್ವಾ ಎಂದ ನೆಟ್ಟಿಗರಿಗೆ 'ಇವ್ನು ದೊಡ್ಡವನಾಗ್ಲಿ ಮಗು ಮಾಡ್ಕೋತೀನಿ..' ಎಂದ ನಟಿ!
ಮಗುವನ್ನು ಬೆಡ್ ಮೇಲೆ ಎಸೆದು ಉಸಿರುಗಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದಾನೆ ಆಸ್ಪತ್ರೆ ತಲುಪುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಖದ ಮೇಲೆ ಕತ್ತರಿ, ಚಾಕುವಿನ ಪ್ರಯೋಗ ಬೇಡ; ಪಾಸ್ಟಿಕ್ ಸರ್ಜರಿ ಬಗ್ಗೆ ಕಾಜೋಲ್ ಹೇಳಿಕೆ ವೈರಲ್!