
ಬೆಂಗಳೂರು(ಮಾ.26): ಮೊಬೈಲ್ ವಿಚಾರವಾಗಿ ಜಗಳವಾಡುತ್ತಿದ್ದ ತಂಗಿಯರ ಮಧ್ಯೆ ಪ್ರವೇಶಿಸಿದ ಸಂಬಂಧಿ, ಸಿಟ್ಟಿಗೆದ್ದು ಅಕ್ಕನ ತಲೆಗೆ ದೊಣ್ಣೆಯಿಂದ ಹೊಡೆದು ಹತ್ಯೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿಂಗಸಂದ್ರದ ನಿವಾಸಿ ಗೂಡಿಯಾ ದೇವಿ (42) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಸಂಬಂಧಿ ರಾಜೇಶ್ ಕುಮಾರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಭಾನುವಾರ ದೇವಿ ಹಾಗೂ ಆಕೆಯ ತಂಗಿ ನಡೆದ ಜಗಳದಲ್ಲಿ ಮಧ್ಯೆ ಪ್ರವೇಶಿಸಿ ಅವರ ಸಂಬಂಧಿ ರಾಜೇಶ್ ಈ ಕೃತ್ಯ ಎಸಗಿದ್ದಾನೆ.
ವಿಜಯಪುರ: ಅನೈತಿಕ ಸಂಬಂಧ ಶಂಕೆ, ಜೋಡಿ ಕೊಲೆ
ಮೃತ ದೇವಿ ಹಾಗೂ ಸಂಬಂಧಿ ರಾಜೇಶ್ ಮೂಲತಃ ಬಿಹಾರ ರಾಜ್ಯದವರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಳಿಕ ಗಾರ್ಮೆಂಟ್ಸ್‌ನಲ್ಲಿ ದೇವಿ ಸೋದರಿಯರು ಕೆಲಸಕ್ಕೆ ಅಕ್ಕ- ಸೇರಿದರೆ, ಸ್ವಿಗ್ಗಿ ಡೆಲವರಿ ಬಾಯ್ ಆಗಿ ರಾಜೇಶ್ ದುಡಿಯುತ್ತಿದ್ದ. ಈ ಮೂವರು ಸಿಂಗಸಂದ್ರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ನೆಲೆಸಿದ್ದರು. ಮನೆಯಲ್ಲಿ ಸಣ್ಣಪುಟ್ಟ ವಿಚಾರವಾಗಿ ದೇವಿ ಸೋದರರು ಕಿತ್ತಾಡುತ್ತಿದ್ದರು.
ಅಂತೆಯೇ ಭಾನುವಾರ ಮಧ್ಯಾಹ್ನ ಮೊಬೈಲ್ ವಿಷಯವಾಗಿ ಅವರಿಬ್ಬರು ಜಗಳ ವಾಡುತ್ತಿದ್ದರು. ಆಗ ಸಿಟ್ಟಿಗೆದ್ದ ರಾಜೇಶ್, 'ಯಾವಾಗಲೂ ಯಾಕೆ ಜಗಳವಾಡುತ್ತೀರಾ' ಎಂದು ಬೈದಿದ್ದಾನೆ. ಈ ಮಾತಿಗೆ ದೇವಿ ಆಕ್ಷೇಪಿಸಿದಾಗ ಕೆರಳಿದ ಆತ, ದೇವಿ ತಲೆಗೆ ದೊಣ್ಣೆಯಿಂದ ಬಾರಿಸಿದ್ದಾನೆ. ಆಗ ಕೆಳಗೆ ಆಕೆಯ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಕೊಂದು ಪರಾರಿ ಆಗಿದ್ದಾನೆ. ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಮೃತಳ ಸೋದರಿ ಮಾಹಿತಿ ನೀಡಿದ್ದಾಳೆ.
ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ರಾಜೇಶ್‌ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ