ಡಾಲರ್ ಲೆಕ್ಕದಲ್ಲಿ ಹಣ ಸಂಪಾದಿಸಬಹುದೆಂಬ ಮಧ್ಯವರ್ತಿಗಳ ಮೋಸದಾಟಕ್ಕೆ ಬಲಿಯಾಗಿ ಬೀದರ್ ಕಲಬುರಗಿ ಮೂಲದ 14ಕ್ಕೂ ಹೆಚ್ಚು ಯುವಕರು ಉದ್ಯೋಗ ಅರಸಿ ಉಜ್ಬೇಕಿಸ್ತಾನಕ್ಕೆ ಹೋಗಿ ನರಕಯಾತನೆ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬೀದರ್ (ಆ.1) ಡಾಲರ್ ಲೆಕ್ಕದಲ್ಲಿ ಹಣ ಸಂಪಾದಿಸಬಹುದೆಂಬ ಮಧ್ಯವರ್ತಿಗಳ ಮೋಸದಾಟಕ್ಕೆ ಬಲಿಯಾಗಿ 14ಕ್ಕೂ ಹೆಚ್ಚು ಯುವಕರು ಉದ್ಯೋಗ ಅರಸಿ ಉಜ್ಬೇಕಿಸ್ತಾನಕ್ಕೆ ಹೋಗಿ ನರಕಯಾತನೆ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದ ಬೀದರ್, ಕಲಬುರ್ಗಿ ಜಿಲ್ಲೆಯ ಸುಮಾರು 14 ಯುವಕರು ಉಜ್ಬೇಕಿಸ್ತಾನದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಯುವಕರು, ಊಟ-ವಸತಿ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಿಸಿ, ದೇಶಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಅವರಿಗೆ ವಿಡಿಯೋ ಮನವಿ ಮಾಡಿರುವ ಯುವಕರು.
ಮುಡಾ ಹಗರಣ: ಬಿಜೆಪಿ ಪಾದಯಾತ್ರೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಘಟನೆ ಹಿನ್ನೆಲೆ:
ಬೀದರ್ ಜಿಲ್ಲೆಯ ಹುಮನಾಬಾದ್, ಬಸವಕಲ್ಯಾಣ, ಚಿಟಗುಪ್ಪ ಸೇರಿದಂತೆ ಕಲ್ಬುರ್ಗಿ ಜಿಲ್ಲೆಯ ಯುವಕರು. ಕೆಲಸಕ್ಕೆ ಹುಡುಕಾಡಿದ್ದಾರೆ. ಇದೇ ವೇಳೆ ಕಲಬುರಗಿ ಮೂಲದದ ಕನ್ಸಲ್ಟೆನ್ಸಿ ನಿರುದ್ಯೋಗ ಯುವಕರಿಗೆ ಗಾಳ ಹಾಕಿದೆ 14 ಯುವಕರಿಗೆ ಡಾಲರ್ ಹಣದ ಆಮಿಷೆ ತೋರಿಸಿದ್ದಾರೆ. ತಲಾ ಒಂದು ಲಕ್ಷ ರೂಪಾಯಿ ಕೊಟ್ಟರೆ ನಿಮಗೆ ಉಜ್ಬೇಕಿಸ್ತಾನದಲ್ಲಿ ಕೆಲಸ ಕೊಡಿಸುವುದಾಗಿ, ಡಾಲರ್ ಲೆಕ್ಕದಲ್ಲಿ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡಬಹುದು ಎಂಬ ಆಮಿಷೆ ತೋರಿಸಿರುವ ಕನ್ಸಲ್ಟೆನ್ಸಿ. ಇದನ್ನ ನಂಬಿದ ಯುವಕರು ಹಣ ಲಕ್ಷ ರೂಪಾಯಿ ಹಣ ನೀಡಿ ವಿದೇಶಕ್ಕೆ ಹೋಗಲು ಸಜ್ಜಾಗಿದ್ದಾರೆ.
INTERVIEW: ಕೇವಲ ಹೊಟ್ಟೆಕಿಚ್ಚಿಂದ ಹುಟ್ಟಿದ ಕೇಸ್ ಮುಡಾ - ಬೈರತಿ ಸುರೇಶ್
ಯುವಕರು ಡಾಲರ್ ಕನಸು ಕಟ್ಟಿಕೊಂಡು ವಿದೇಶಕ್ಕೆ ಹೊಗ್ತಿದ್ದಂತೆ. ಕನ್ಸಲ್ಟೆನ್ಸಿ ಹೇಳಿದಂತೆ ಅಲ್ಲಿ ಏನೂ ಇಲ್ಲ. ಅತ್ತ ಕಂಪನಿ ಕೆಲಸವೂ ಇಲ್ಲ. ಇತ್ತ ವಾಪಸ್ ಬರಲು ಆಗದೆ, ಉಳಿದುಕೊಳ್ಳಲು ವ್ಯವಸ್ಥೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು. ಕೆಲಸ ಕೊಡುತ್ತೇವೆಂದು ಹೇಳಿ ಕರೆಸಿಕೊಂಡಿರುವ ಕಂಪನಿಯವರು ಕೆಲಸ ಕೊಡಿಸುವ ಬದಲಾಗಿ ನಿರ್ಜನ ಪ್ರದೇಶದಲ್ಲಿ ವಸತಿ-ಊಟ ಇಲ್ಲದೆ ಕೂಡಿಹಾಕಿದ್ದಾರೆ. ಇದರಿಂದ ಭಯಭೀತರಾಗಿರುವ ಯುವಕರು ತಮ್ಮನ್ನು ಇಲ್ಲಿಂದ ಹೇಗಾದರೂ ರಕ್ಷಿಸುವಂತೆ ವಿಡಿಯೋ ಮಾಡಿ ಮನವಿ ಮಾಡಿದ್ದಾರೆ. ಈಗಾಗಲೇ ಇದೇ ರೀತಿ ಉದ್ಯೋಗ ಅರಸಿ ಬಂದ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರನ್ನು ಅನ್ನ-ನೀರು ಇಲ್ಲದೆ ಕೂಡಿಹಾಕಿ ಕೊಂದಿ ಎಸೆದಿರುವ ಬಗ್ಗೆ ಯುವಕರಿಗೆ ಮಾಹಿತಿ ಸಿಕ್ಕ ಹಿನ್ನೆಲೆ ಇನ್ನಷ್ಟು ಭಯಭೀತರಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿರುವ ಯುವಕರು.