ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಜೆ.ಸಿ.ಪುರ ಗ್ರಾಮದ ಮುಸ್ಲಿಂ ಕಾಲೋನಿ ನಿವಾಸಿ ಶೋಯೆಬ್ ಪಾಷ ಅಲಿಯಾಸ್ ತುರ್ಕ ಬಾಬು ಬಂಧಿತನಾಗಿದ್ದು, ಆರೋಪಿಯಿಂದ 101 ಗ್ರಾಂ ತೂಕದ ಚಿನ್ನಾಭರಣ ಹಾಗೂ 2 ಲ್ಯಾಪ್ಟಾಪ್‌ಗಳು ಸೇರಿ ₹8 ಲಕ್ಷ ಮೌಲ್ಯದ ಜಪ್ತಿ ಮಾಡಲಾಗಿದೆ.
ಬೆಂಗಳೂರು(ಜು.31): ಮನೆಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಕಿಡಿಗೇಡಿಯೊಬ್ಬನನ್ನು ಸೋಲದೇವನ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಜೆ.ಸಿ.ಪುರ ಗ್ರಾಮದ ಮುಸ್ಲಿಂ ಕಾಲೋನಿ ನಿವಾಸಿ ಶೋಯೆಬ್ ಪಾಷ ಅಲಿಯಾಸ್ ತುರ್ಕ ಬಾಬು ಬಂಧಿತನಾಗಿದ್ದು, ಆರೋಪಿಯಿಂದ 101 ಗ್ರಾಂ ತೂಕದ ಚಿನ್ನಾಭರಣ ಹಾಗೂ 2 ಲ್ಯಾಪ್ಟಾಪ್‌ಗಳು ಸೇರಿ ₹8 ಲಕ್ಷ ಮೌಲ್ಯದ ಜಪ್ತಿ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ಚಿಕ್ಕಬಾಣಾವರದ ವಿನಾಯಕ ಲೇಔಟ್‌ನಲ್ಲಿ ಪುಷ್ಪಾ ಎಂಬುವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಹಾಗೂ ಬೆರಳಚ್ಚು ಮಾದರಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೈಕ್ ಕಳ್ಳತನಕ್ಕೆ ಬಂದವನ ಆ್ಯಕ್ಟಿಂಗ್‌ಗೆ ಫಿದಾ ಆಗೋದು ಖಚಿತ, ಸಿಸಿಟಿವಿಯಿಂದ ಸ್ಟಂಪ್ ಔಟ್!
ಪಾಷ ವೃತ್ತಿಪರ ಕ್ರಿಮಿನಲ್ ಆಗಿದ್ದು, ಹಲವು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾನೆ. 9ನೇ ತರಗತಿಗೆ ಓದಿಗೆ ಸಲಾಂ ಹೊಡೆದ ಆತ, ಮೊದಲು ಉಮೇಶ್ ಅಲಿಯಾಸ್ ಸಿ.ಕೆ.ಬಾಬು ಎಂಬಾತನ ಜತೆ ಸೇರಿ ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ. ಈ ಕೃತ್ಯದಲ್ಲಿ ಆತನನ್ನು ರಾಜಗೋಪಾಲನಗರ ಠಾಣೆ ಪೊಲೀ ಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಪಾಷ ಮನೆಗಳ್ಳತನ ಕೃತ್ಯಕ್ಕಿಳಿದಿದ್ದ. ಈತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಹಗಲು ಹೊತ್ತಿನಲ್ಲಿ ಮುಂಬಾಗಿಲಿಗೆ ರಂಗೋಲಿ ಹಾಕದ ಮನೆಗಳನ್ನು ಗುರಿಯಾಗಿಸಿಕೊಂಡು ಪಾಷ ಕಳ್ಳತನ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.