ವಿಜಯಪುರ: ಮಂಗಳಮುಖಿಯರ ವಿಕೃತಿ, ನಡುಬೀದಿಯಲ್ಲಿ ಯುವತಿ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಖಾರಪುಡಿ ಹಾಕಿ ಹಲ್ಲೆ!

Published : Jul 31, 2024, 01:25 PM IST
ವಿಜಯಪುರ: ಮಂಗಳಮುಖಿಯರ ವಿಕೃತಿ, ನಡುಬೀದಿಯಲ್ಲಿ ಯುವತಿ ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಖಾರಪುಡಿ ಹಾಕಿ ಹಲ್ಲೆ!

ಸಾರಾಂಶ

ವಿಜಯಪುರದಲ್ಲಿ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಎದುರಲ್ಲೇ ಮಂಗಳಮುಖಿ ರೂಪದ ಯುವತಿ ಬೆತ್ತಲೆಗೊಳಿಸಿ ಮಂಗಳಮುಖಿಯರೇ ಥಳಿಸಿದ್ದಾರೆ. ಮಂಗಳಮುಖಿಯರ ದರ್ಪದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವಿಜಯಪುರ (ಜು.31): ವಿಜಯಪುರದಲ್ಲಿ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಎದುರಲ್ಲೇ ಮಂಗಳಮುಖಿ ರೂಪದ ಯುವತಿ ಬೆತ್ತಲೆಗೊಳಿಸಿ ಮಂಗಳಮುಖಿಯರೇ ಥಳಿಸಿದ್ದಾರೆ. ಮಂಗಳಮುಖಿಯರ ದರ್ಪದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಮಂಗಳಮುಖಿ ಅಂತ ಹೇಳಿ ದುಡ್ಡು ಕೇಳುತ್ತಿದ್ದಳು ಎಂದು ಮಂಗಳಮುಖಿ ರೂಪದಲ್ಲಿರೋ ಯುವತಿಯನ್ನು  ಥಳಿಸಿದ್ದಾರೆ. ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಯುವತಿಯನ್ನಯ ಓಡಿಸಿಕೊಂಡು ಬಂದ ಮಂಗಳಮುಖಿಯರು ಲಲಿತ ಮಹಲ್ , ಹಾಗೂ ಮಿಶ್ರ ಪೇಡಾ ಮುಂಭಾಗದಲ್ಲಿ ಯುವತಿಯನ್ನು ಹಿಡಿದು ಮಂಗಳಮುಖಿಯರು ಮನಬಂದಂತೆ ಥಳಿಸಿದ್ದಾರೆ. ಯುವತಿಯ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿರುವುದು ಮಾತ್ರವಲ್ಲ ಮರ್ಮಾಂಗಕ್ಕೆ ಒದ್ದು, ಕಾರದಪುಡಿ ಹಾಕಿ ಹಲ್ಲೆ ಮಾಡಿದ್ದಾರೆ.

Wayanad landslide ಮಣ್ಣಿನಡಿ ಸಿಲುಕಿದವರ ರಕ್ಷಣೆಗೆ ಶ್ವಾನದಳ, ಹೇಗೆ ಕೆಲಸ ಮಾಡುತ್ತೆ ಶ್ವಾನಗಳು?

ಸಾರ್ವಜನಿಕರ ಎದುರಲ್ಲೇ ಏಳೆಂಟು ಮಂಗಳಮುಖಿಯರು ಅಮಾನವೀಯ ಕೃತ್ಯ ಎಸಗಿದ್ದು, ಯುವತಿ ಅಂಗಲಾಚಿ ಬೇಡಿಕೊಂಡ್ರು ಬಿಡದ ಮಂಗಳಮುಖಿಯರು ಬೆತ್ತಲೆಗೊಳಿಸಿ ಹಲ್ಲೆ ಮಾಡ್ತಿದ್ದರು. ಇಷ್ಟೆಲ್ಲ ಘಟನೆ ನಡೆದರೂ ಜನರು ನಿಂತು ನೋಡುತ್ತಿದ್ದರು. ಮಾತ್ರವಲ್ಲ ಬೆತ್ತಲೆಗೊಳಿಸಿ ಹಲ್ಲೆ ಮಾಡುವ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು.

ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!

ಎಲ್ಲೆಂದರಲ್ಲಿ ಯುವತಿಗೆ ಒದ್ದು ಆಕೆಯನ್ನು ನಿತ್ರಾಣ ಮಾಡುವಂತೆ ಮಾಡಿದ ಮಂಗಳಮುಖಿಯರು ಬಳಿಕ ಸೀರೆ ಎತ್ತಿ ತಮ್ಮ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ. ಯುವತಿ ಮಂಗಳಮುಖಿ ಎಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಳು ಎನ್ನಲಾಗಿದೆ. ಆದರೆ ಯಾವ ಕಾರಣಕ್ಕೆ ಹೊಡೆದರು. ಆಕೆ ಮಂಗಳಮುಖಿಯೇ ಅಲ್ಲವೇ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?