Teacher Recruitment scam: ಬಂಧಿತ 38 ಶಿಕ್ಷಕರಿಗೆ ಪೊಲೀಸ್‌ ಕಸ್ಟಡಿ

By Kannadaprabha News  |  First Published Oct 21, 2022, 1:48 PM IST

ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಂಧಿತರಾಗಿದ್ದ 38 ಶಿಕ್ಷಕರನ್ನು ಹೆಚ್ಚಿನ ತನಿಖೆ ಸಲುವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಿಐಡಿ ಗುರುವಾರ ವಶಕ್ಕೆ ಪಡೆದಿದೆ. ನಿರೀಕ್ಷಣಾ ಜಾಮೀನಿಗೆ ಮೂವರ ಅರ್ಜಿ.


ಬೆಂಗಳೂರು (ಅ.21): ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಂಧಿತರಾಗಿದ್ದ 38 ಶಿಕ್ಷಕರನ್ನು ಹೆಚ್ಚಿನ ತನಿಖೆ ಸಲುವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಿಐಡಿ ಗುರುವಾರ ವಶಕ್ಕೆ ಪಡೆದಿದೆ. 2012-13 ಹಾಗೂ 2014-15ನೇ ಸಾಲಿನ ನೇಮಕಾತಿ ಅಕ್ರಮ ಹಗರಣ ಸಂಬಂಧ ಬೆಂಗಳೂರು ದಕ್ಷಿಣ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 38 ಶಿಕ್ಷಕರನ್ನು ಸಿಐಡಿ ಬುಧವಾರ ಬಂಧಿಸಿತ್ತು. ಈ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ, ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, 6 ಶಿಕ್ಷಕರಿಗೆ ಎರಡು ದಿನಗಳು ಇನ್ನುಳಿದ 32 ಶಿಕ್ಷಕರಿಗೆ ಅ.25 ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತು. ಇನ್ನು ಇದೇ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ಮೂವರು ಶಿಕ್ಷಕರಾದ ವಿದ್ಯಾ, ಇಂದ್ರಮ್ಮ, ರಾಮು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಾವು ಅಕ್ರಮದಲ್ಲಿ ಪಾಲ್ಗೊಂಡಿರುವುದು ಖಚಿತವಾಗಿದ್ದ ಕೆಲ ಶಿಕ್ಷಕರು, ಸಿಐಡಿ ಪೊಲೀಸರ ನಿರೀಕ್ಷೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ನಮಗೆ ಗೊತ್ತಿತ್ತು ಸರ್‌, ನೀವು ಬಂದೇ ಬರುತ್ತೀರಾ ಅಂತ. ಹಾಗಾಗಿ ಅಷ್ಟರಲ್ಲಿ ಸಿಲೆಬಸ್‌ ಮುಗಿಸಿ ಬಿಡೋಣ ಅಂತ ಪಾಠ ಮಾಡುತ್ತಿದ್ದೇವು ಎಂದು ಸಿಐಡಿ ತಂಡಕ್ಕೆ ಶಿಕ್ಷಕರು ಹೇಳಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣ: ಮತ್ತೆ 38 ಶಿಕ್ಷಕರು ಅರೆಸ್ಟ್‌

Tap to resize

Latest Videos

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 6 ಶಿಕ್ಷಕರು: ಮಲ್ಲಿಕಾರ್ಜುನ ಕರಡಿ-ಬೆಂಗಳೂರು ಪೂರ್ವ ತಾಲೂಕಿನ ಕಾಡುಸೊಣ್ಣಪ್ಪನಹಳ್ಳಿ ಶಾಲೆ, ಚಂದ್ರಶೇಖರ್‌ ಕಲ್ಯಾಣಿ- ಆನೇಕಲ್‌ ತಾಲೂಕಿನ ಮಾಯಸಂದ್ರ ಶಾಲೆ, ಡಿ.ಎ.ನಿಶ್ಚಿತ- ಆನೇಕಲ್‌ ತಾಲೂಕಿನ ಸರ್ಜಾಪುರ ಶಾಲೆ, ನರೇಂದ್ರ ಹಿಪ್ಪರಗಿ- ಆನೇಕಲ್‌ ತಾಲೂಕಿನ ಕನ್ನಮಂಗಲ ಶಾಲೆ, ಶಾಂತಪ್ಪ ಅವರಾದಿ- ಆನೇಕಲ್‌ ತಾಲೂಕಿನ ಗುಂಜೂರು ಶಾಲೆ ಹಾಗೂ ಜಿ.ಎಲ್‌.ಮಹೇಶ್‌ ಶರ್ಮ- ಯಶವಂತಪುರದ ಸಂತೆ ಬೀದಿ ಶಾಲೆ.

Raichuru: 2ನೇ ತರಗತಿ ವಿದ್ಯಾರ್ಥಿಗಳಿಗೆ ಎಬಿಸಿಡಿ ಕಲಿಸಿಕೊಡದ ಶಿಕ್ಷಕ, ಎಸಿ ತರಾಟೆ 

ಕಾಯಂಗಾಗಿ ನಗರದಲ್ಲಿ ಅತಿಥಿ ಶಿಕ್ಷಕರ ಪ್ರತಿಭಟನೆ: ಪಂಜಾಬ್‌, ಹರಿಯಾಣ ಮತ್ತು ದೆಹಲಿ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲೂ ಅತಿಥಿ ಶಿಕ್ಷಕರನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅತಿಥಿ ಶಿಕ್ಷಕರ ಸಂಘ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.

ಅತಿಥಿ ಶಿಕ್ಷಕರು,ದಿನಗೂಲಿ ನೌಕರರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಸರ್ಕಾರ ನೀಡುವ ಹತ್ತು ಸಾವಿರ ಗೌರವಧನಕ್ಕೆ ದುಡಿಯುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ಎಂದು ನ್ಯಾಯಾಲಯ ತೀರ್ಪು ನೀಡಿದ್ದರೂ ಸರ್ಕಾರ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಯಂ ಶಿಕ್ಷಕರ ವರ್ಗಾವಣೆಯಿಂದ ಹೊರಗುಳಿದ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಅವರ ಮೊದಲ ಸ್ಥಳಕ್ಕೆ ನಿಯೋಜನೆ ಮಾಡಬೇಕು. ಇಲಾಖೆ ನಡೆಸುವ ನೇಮಕಾತಿ ಪರೀಕ್ಷೆಗೆ ಕೃಪಾಂಕ ನೀಡಬೇಕು. ಕನಿಷ್ಠ ವೇತನ ಹೆಚ್ಚಳ ಮಾಡಬೇಕು. ಸೇವಾ ಭದ್ರತೆಯನ್ನು ನೀಡಬೇಕು. ಪ್ರತಿ ವರ್ಷ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನೆ ನಿರತರು ಸರ್ಕಾರವನ್ನು ಆಗ್ರಹಿಸಿದರು. ಸಂಘದ ರಾಜ್ಯಾಧ್ಯಕ್ಷ ಸಿ.ಎನ್‌.ನಾಗೇಶ್‌, ಉಪಾಧ್ಯಕ್ಷೆ ಎಂ.ಡಿ.ರೂಪಾ, ಕಾರ್ಯದರ್ಶಿ ಎಲ್‌.ಪಿ.ಹರೀಶ್‌ ಕುಮಾರ್‌ ಪಾಲ್ಗೊಂಡಿದ್ದರು.

click me!