ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಹಣಕಳೆದುಕೊಂಡಿದ್ದೇನೆ ಎಂದಿರುವ ಮಂಜುನಾಥ್ ಹಬೀಬ್, ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸುಲಿಗೆ ಮಾಡುಲು ತೆರಳಿದ್ದ. ಕ್ಯಾಶ್ ಕೌಂಟರ್‌ನಲ್ಲಿದ್ದ ನೌಕರನ ಕುತ್ತಿಗೆಗೆ ಚಾಕು ಹಿಡಿದು ಬ್ಯಾಗ್‌ನಲ್ಲಿ ಕೂಡಲೇ 10 ಲಕ ಹಣ ಹಾಕುವಂತೆ ಹೆದರಿಸಿದ್ದಾನೆ. ಉಳಿದ ನೌಕರರು ಆತನ ರಕ್ಷಣೆಗೆ ಧಾವಿಸಿದ ಕೂಡಲೇ ಮಂಜುನಾಥ್ ಪರಾರಿಯಾಗಿದ್ದಾನೆ.
ಹುಬ್ಬಳ್ಳಿ(ಸೆ.07): ಷೇರು ಮಾರುಕಟ್ಟೆಯಲ್ಲಿ ಹಣಕಳೆದುಕೊಂಡ ಬಳಿಕ ಬ್ಯಾಂಕ್ ದರೋಡೆ ಮಾ ಡಲು ಯತ್ನಿಸಿದ್ದ ಯುವಕನೊಬ್ಬ ಪೊಲೀಸ್ ಅತಿಥಿಯಾಗಿದ್ದಾನೆ. ನಗರದ ನಿವಾಸಿ ಮಂಜುನಾಥ್ ಹಬೀಬ್ (28) ಬಂಧಿತ ಆರೋಪಿ.
ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಹಣಕಳೆದುಕೊಂಡಿದ್ದೇನೆ ಎಂದಿರುವ ಈತ, ಗುರುವಾರ ಹುಬ್ಬಳ್ಳಿಯ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಸುಲಿಗೆ ಮಾಡುಲು ತೆರಳಿದ್ದ. ಕ್ಯಾಶ್ ಕೌಂಟರ್‌ನಲ್ಲಿದ್ದ ನೌಕರನ ಕುತ್ತಿಗೆಗೆ ಚಾಕು ಹಿಡಿದು ಬ್ಯಾಗ್‌ನಲ್ಲಿ ಕೂಡಲೇ 10 ಲಕ ಹಣ ಹಾಕುವಂತೆ ಹೆದರಿಸಿದ್ದಾನೆ.
undefined
ಸ್ನೇಹಿತೆಯ ಭೇಟಿಗೆ ಬೆಂಗ್ಳೂರಿಗೆ ಬಂದಿದ್ದ ನಕ್ಸಲ್ ಬಂಧನ..!
ಉಳಿದ ನೌಕರರು ಆತನ ರಕ್ಷಣೆಗೆ ಧಾವಿಸಿದ ಕೂಡಲೇ ಮಂಜುನಾಥ್ ಪರಾರಿಯಾಗಿದ್ದಾನೆ. ಬ್ಯಾಂಕ್ ಸಿಬ್ಬಂದಿ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಸಂಜೆ ಹೊತ್ತಿಗೆ ಆರೋಪಿಯನ್ನು ಬಂಧಿಸಿದ್ದಾರೆ.