ಸ್ನೇಹಿತೆಯ ಭೇಟಿಗೆ ಬೆಂಗ್ಳೂರಿಗೆ ಬಂದಿದ್ದ ನಕ್ಸಲ್‌ ಬಂಧನ..!

By Kannadaprabha News  |  First Published Sep 7, 2024, 9:40 AM IST

ಮೆಜಿಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ರಾಜನ್‌ನನ್ನು ಬಂಧಿಸಿದ ಪೊಲೀಸರು, ಬಳಿಕ ನ್ಯಾಯಾಲಯ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 14 ದಿನ ಕಸ್ಟಡಿಗೆ ಪಡೆದಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆಗೆ ಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ರಾಜನ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ (ಯುಎಪಿಎ)ಯಡಿ ಎಫ್‌ಐಆರ್ ದಾಖಲಾಗಿದೆ. 
 


ಬೆಂಗಳೂರು(ಸೆ.07):  ತನ್ನ ಸ್ನೇಹಿತೆ ಭೇಟಿಗೆ ನಗರಕ್ಕೆ ಬಂದಿದ್ದ ನಿಷೇಧಿತ ಮಾವೋವಾದಿ ನಕ್ಸಲ್ ಭಾರತ ವಲಯದ ಪ್ರಮುಖ ನಿಗ್ರಹ ದಳಗಳು ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ತಮಿಳುನಾಡು ರಾಜ್ಯ ಪಣೆಯೂರು ಚೆನ್ನೈ ನಗರದ ಅನಿರುದ್ಧ ರಾಜನ್ ಬಂಧಿತನಾಗಿದ್ದು, ಬಂಧಿತನಿಂದ ಮೊಬೈಲ್, ಪೆನ್‌ಡೆ, ವ್‌ಗಳು, ನಕಲಿ ಆಧಾರ್‌ ಕಾರ್ಡ್‌ಗಳು ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. 

ಮೆಜಿಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ರಾಜನ್‌ನನ್ನು ಬಂಧಿಸಿದ ಪೊಲೀಸರು, ಬಳಿಕ ನ್ಯಾಯಾಲಯ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ 14 ದಿನ ಕಸ್ಟಡಿಗೆ ಪಡೆದಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆಗೆ ಸಿಬಿಗೆ ವಹಿಸಿ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ರಾಜನ್ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆ (ಯುಎಪಿಎ)ಯಡಿ ಎಫ್‌ಐಆರ್ ದಾಖಲಾಗಿದೆ. 

Tap to resize

Latest Videos

ತುಮಕೂರು: ಏಳು ಪೊಲೀಸರನ್ನು ‌ಹತ್ಯೆ ಮಾಡಿದ್ದ ನಕ್ಸಲ್‌ ಚಂದ್ರ ಬಂಧನ

ಉ.ಭಾರತದ ನಕ್ಸಲ್ ಕೊರಿಯರ್‌ ಅನಿರುದ್ಧ: 

ತಮಿಳುನಾಡಿನ ಚೆನ್ನೈ ನಗರದ ಅನಿರುದ್ಧ ರಾಜನ್ ಬಿಕಾಎಂ ಪದವೀಧರನಾಗಿದ್ದು, 2018ರಲ್ಲಿ ಎಡಪಂ ಥೀಯ ವಾದದ ಕಡೆ ಆಕರ್ಷಿತನಾಗಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಜತೆಗುರುತಿಸಿಕೊಂಡಿದ್ದ. ತರು ವಾಯ ಆ ಸಂಘಟನೆಯಲ್ಲಿ ತನ್ನ ಚುರುಕಿನ ಚಟುವಟಿಕೆಗಳಿಂದ ನಕಲೀಯರ ಕಮಾಂಡರ್‌ಗಳ ವಿಶ್ವಾಸವನ್ನು ಅಲ್ಪಾವಧಿಯಲ್ಲೇ ಆತನ ಗಳಿಸಿದೆ. ಇದರಿಂದ ಪ್ರಮುಖ ನಿರ್ಧಾರಗಳಲ್ಲಿ ಆತ ಪ್ರಭಾವಿಸುವಂತಾದ. ಪ್ರಸುತ್ತ ಉತ್ತರ ಭಾರತದಲ್ಲಿ ಮಾವೋ ವಾದಿಗಳ ನಡುವೆ 'ಕೊರಿಯರ್' ಪಾತ್ರವನ್ನು ಅನಿ ರುದ್ದ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ತನ್ನ ಸ್ನೇಹಿತೆಯ ಭೇಟಿಗೆ ಆಗಾಗ್ಗೆ ರಾಜನ್ ಬಂದು ಹೋಗುತ್ತಿದ್ದ. ಇತ್ತೀಚಿಗೆ ಆತನ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಹಾಗೂ ಎಟಿಎಸ್ ತಂಡಗಳು, ರಾಜನ್ ಮೇಲೆ ನಿಗಾವಹಿಸಿದ್ದರು. ಆ ವೇಳೆ ಬೆಂಗಳೂರಿಗೆ ರಾಜನ್ ಬಂದು ತಾತ್ಕಾಲಿಕವಾಗಿ ಆಜ್ಞಾತ ಸ್ಥಳದಲ್ಲಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಭೂಗತವಾಗಿದ್ದುಕೊಂಡೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತನ್ನ ಸದಸ್ಯರ ಜತೆ ಆತ ಸಕ್ರಿಯವಾಗಿದ್ದು, ಬೆಂಗಳೂರಿನಲ್ಲಿ ಓಡಾಟಕ್ಕೆ ಬಿಎಂಟಿಸಿ ಬಸ್ ಬಳಸುತ್ತಿದ್ದ ಸುಳಿವು ಬಾತ್ಮೀದಾರರಿಂದ ಸಿಕ್ಕಿತು. ಈ ಮಾಹಿತಿ ಪಡೆದ ಕೂಡಲೇ ಚುರುಕಾದ ಪೊಲೀಸರು, ಗುರುವಾರ ರಾತ್ರಿ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಆತ ಬೇರೆಡೆ ಹೋಗಲು ಸಜ್ಜಾಗಿದ್ದಾಗ ಬಂಧಿಸಿದ್ದಾರೆ. 

ದೇಣಿಗೆ, ನೇಮಕಾತಿಯಲ್ಲಿ ಪ್ರಮುಖ ಪಾತ್ರ: 

ಕಳೆದ ನಾಲೈದು ವರ್ಷಗಳಿಂದ ಎಡ ಪಂಥೀಯ ಉಗ್ರ ಚಟುವಟಿಕೆಗಳ ಬಗ್ಗೆ ಸಹಾನುಭೂತಿಯುಳ್ಳ ವ್ಯಕ್ತಿಗಳ ಜೊತೆಯಲ್ಲಿ ಅನಿರುದ್ಧ ಸಂಪರ್ಕದಲ್ಲಿದ್ದು, ಆತ ಕೊರಿಯ‌ರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ನಿಷೇಧಿತ ನಕ್ಸಲ್ ಸಂಘಟನೆಗೆ ಹಣ ಸಂಗ್ರಹ ಹಾಗೂ ಆ ಸಂಘಟನೆಗೆ ಯುವಕರ ನೇಮಕಾತಿಯಲ್ಲಿ ರಾಜನ್ ಪ್ರಮುಖ ಪಾತ್ರವಹಿಸಿದ್ದ. ಈ ಸಂಘಟನೆ ವಿಸ್ತಣೆ ಸಲುವಾಗಿ ದೇಶವ್ಯಾಪ್ತಿ ರಹಸ್ಯ ಸಭೆಗಳನ್ನು ಏರ್ಪಡಿಸಿ ಯುವಕರನ್ನು ಒಟ್ಟುಗೂಡಿಸುತ್ತಿದ್ದ ಬಳಿಕ ದೇಶದ ಸಾರ್ವಭೌಮತೆಗೆ, ಏಕತೆಗೆ, ಸಮಗ್ರತೆಗೆ ಹಾಗೂ ಭದ್ರತೆಗೆ ಹಾನಿಯುಂಟು ಮಾಡಿ ದೇಶದಲ್ಲಿ ನಕ್ಸಲ್ ಸಂಘಟನೆಯ ಆಡಳಿತ ನಡೆಸುವ ದುರುದ್ದೇಶ ಹೊಂದಿದ್ದ, ಈ ಅಪರಾಧಿಕ ಕೃತ್ಯಗಳನ್ನು ಎಸಗುವ ಸಲುವಾಗಿ ಬೆಂಗಳೂರಿಗೆ ರಾಜನ್ ಬಂದಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರ ದೂರಿನಲ್ಲಿ ಉಲ್ಲೇಖವಾಗಿದೆ.

ನಾನೇಕೆ ಮಾಹಿತಿ ಕೊಡಲಿ: ರಾಜನ್ ಮೊಂಡಾಟ 

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಎರಡು ಬ್ಯಾಗ್ ಗಳನ್ನು ಹಿಡಿದುಕೊಂಡು ಹೊರ ರಾಜ್ಯಕ್ಕೆ ಹೊರಡಲು ಅಣಿಯಾಗಿದ್ದ ರಾಜನ್‌ನನ್ನು ಪೊಲೀಸರು ವಶಕ್ಕೆ ಪಡೆದರು. ಆಗ ಆತನ್ನು ಪ್ರಶ್ನಿಸಿದಾಗ ತನ್ನ ಹೆಸರನ್ನು ರಾಜನ್ ಎಂದು ಆಂಗ್ಲ ಭಾಷೆಯಲ್ಲಿ ಹೇಳಿದ್ದಾನೆ. ಆದರೆ ಹೆಚ್ಚಿನ ವಿವರ ಕೇಳಿದಾಗ ನೀಡಲು ರಾಜನ್ ನಿರಾಕರಿಸಿದ್ದಾನೆ. ಬಳಿಕ ಆತನ್ನು ವಶಕ್ಕೆ ಪಡೆದು ಮಡಿವಾಳದಲ್ಲಿರುವ ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು ಪ್ರಶ್ನಿಸಿದಾಗ ಕೊನೆಗೆ ತನ್ನ ವಿವರ ಬಹಿರಂಗಪಡಿಸಿದ್ದಾನೆ. ತಾನು 5 ವರ್ಷಗಳ ಹಿಂದೆ ಎಡಪಂಥೀಯ ವಿಷಯಗಳಲ್ಲಿ ಆಕರ್ಷಣೆಯಾಗಿದೆ. ಅಂದಿನಿಂದ ರಹಸ್ಯವಾಗಿ ಸಿ.ಪಿ.ಐ (ಮಾವೋವಾದಿ) ಸಂಘಟನೆ ಯವರೊಂದಿಗೆ ಸಂಪರ್ಕದಲ್ಲಿಟ್ಟುಕೊಂಡಿದ್ದೆ. ತನ್ನ ಬಳಿಯಲ್ಲಿರುವ ವೆಸ್‌ಡ್ರೈವ್‌ಗಳಲ್ಲಿ ಸಿಪಿಐ (ಮಾವೋವಾದಿ)ಗೆ ಸಂಬಂಧಿಸಿದ ಲೆಟರ್‌ಗಳು ಸೇರಿ ಇತರೆ ಮಾಹಿತಿಗಳಿದೆ ಎಂದು ರಾಜನ್ ವಿವರಿಸಿ ದ್ದಾನೆ. ಅಲ್ಲದೆ ತನ್ನ ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ಅನ್ನು ಪೊಲೀಸರಿಗೆ ಆತ ಒಪ್ಪಿಸಿದ್ದಾನೆ. ಹಾಗೆಯೇ ಕೆಲವು ಪೆನ್ ಡ್ರೈವ್‌ಗಳು ಇಂದಿರಾನಗರದಲ್ಲಿರುವ ಆತನ ಸ್ನೇಹಿತನ ಮನೆಯಲ್ಲಿ ಪತ್ತೆಯಾದವು ಎಂದು ಪೊಲೀಸರು ಹೇಳಿದ್ದಾರೆ.

Tumakuru: ಅನೇಕ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಜಿ ನಕ್ಸಲ್ ಚಂದ್ರ ಬಂಧನ!

ನಕಲಿ ಆಧಾ‌ರ್ ಪತ್ತೆ 

ನಿಷೇಧಿತ ನಕ್ಸಲ್‌ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ವಿಕಾಸ್ ಫಾರ್ ಎಂಬ ನಕಲಿ ಆಧಾರ್‌ಕಾರ್ಡ್ ಪತ್ತೆಯಾಗಿದೆ. ಅಲ್ಲದೆ ನಿಷೇಧಿತ ಸಂಘಟನೆಯ ವಿಚಾರಗಳನ್ನು ಪ್ರಚಾರ ಮಾಡಲು ಮತ್ತು ಸದಸ್ಯರನ್ನು ಸಂಪರ್ಕಿಸಲು ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಆಧಾರ್‌ಕಾರ್ಡ್ ಗಳನ್ನು ರಾಜನ್ ಸೃಷ್ಟಿಸಿಕೊಳ್ಳುತ್ತಿದ್ದ ಈ ದಾಖಲೆ ಯನ್ನು ಬಳಸಿ ಅಪರಿಚಿತರ ಹೆಸರಿನಲ್ಲಿ ಸಿಮ್ ಕಾರ್ಡ್ಗಳನ್ನು ಕೂಡ ರಾಜನ್ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಮಾವೋವಾದಿ ಸಂಘಟನೆಯ ಬಂಧಿತ ಸದಸ್ಯ ಅನಿರುದ್ಧ ರಾಜನ್ ಕರ್ನಾಟಕದ ನಂಟಿನ ಕುರಿತು ತನಿಖೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಆತನ ಸಂಪರ್ಕದಲ್ಲಿದ್ದವರ ಪತ್ತೆ ಕಾರ್ಯ ಮುಂದುವರೆದಿದ್ದು, ಇದುವರೆಗೆ ವಿಚಾರಣೆ ವೇಳೆ ರಾಜ್ಯದಲ್ಲಿ ತನ್ನ ಮಾಹಿತಿ ನೀಡಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ| ಚಂದ್ರಗುಪ್ತ ತಿಳಿಸಿದ್ದಾರೆ. 

click me!