ಮತದಾನ ಮಾಡಲು ಬಂದವರು, ಮತಗಟ್ಟೆಯಲ್ಲೇ ಸಾವು! ಇದೆಂಥಾ ದುರ್ಘಟನೆ

By Sathish Kumar KH  |  First Published May 10, 2023, 1:02 PM IST

ಮತದಾನ ಮಾಡಿ ಬಂದ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿಯಲ್ಲಿ ಮತದಾನಕ್ಕೆ ಬಂದ ಮಹಿಳೆ ಸಾವನ್ನಪ್ಪಿದ್ದಾರೆ. 


ಹಾಸನ (ಮೇ 10): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮತದಾನ ಮಾಡಿ ಪೋಲಿಂಗ್ ಬೂತ್‌ನಿಂದ ಹೊರಗೆ ಬಂದ ವ್ಯಕ್ತಿಯೊಬ್ಬ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಯಣ್ಣ (49) ಸಾವನ್ನಪ್ಪಿದ ದುರ್ದೈವಿ ಆಗಿದ್ದಾನೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚಿಕ್ಕೋಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜಕೀಯ ಪಕ್ಷಗಳ ಕಾರ್ಯಕರ್ತರೊಂದಿಗೆ ಒಡನಾಟ ಹೊಂದಿದ್ದ ಜಯಣ್ಣ, ಬೆಳಗ್ಗೆ ಖುಷಿಯಿಂದಲೇ ಮತಗಟ್ಟೆಗೆ ಹೋಗಿ ಮತದಾನ ಮಾಡಿ ಹೊರಬಂದಿದ್ದಾರೆ. ಹೊರ ಬಂದ ನಂತರ ಪೋಲಿಂಗ್‌ ಬೂತ್‌ನ ಹೊರಗಡೆ ಸುಸ್ತಾಗುತ್ತಿದೆ ಎಂದು ಎದೆ ಹಿಡಿದು ಕೊಳಿತುಕೊಂಡವರು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

Bengaluru: ಡ್ಯೂಟಿಯಲ್ಲಿದ್ದ ಕಂಡಕ್ಟರ್‌ಗೆ ಗುದ್ದಿದ ಬಿಎಂಟಿಸಿ ಬಸ್‌: ಗೋಡೆಗೆ ಅಪ್ಪಚ್ಚಿಯಾಗಿ ಸಾವು!

ಮೃತ ಜಯಣ್ಣನಿಗೆ ಹೃದಯಾಘಾತ ಆಗಿದ್ದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ, ಮತದಾನ 100 ಮೀಟರ್‌ ವ್ಯಾಪ್ತಿಯೊಳಗೆ ಸಾವನ್ನಪ್ಪದ್ದರಿಂದ ಕೆಲ ಹೊತ್ತು ಮತದಾನ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಚಿಕ್ಕೋಲೆ ಗ್ರಾಮದಲ್ಲಿ ಹಕ್ಕು ಚಲಾಯಿಸಿ ಹೊರಗೆ ಬಂದ ವೇಳೆ ಹೃದಯಾಘಾತ ಆಗಿದ್ದರಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು.

ಮತ ಚಲಾವಣೆಗೆ ಬಂದಿದ್ದ ಮಹಿಳೆ ಸಾವು: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಝರ್ವಿ ಗ್ಆಮದಲ್ಲಿ ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಪಾರವ್ವ ಈಶ್ವರ ಸಿದ್ನಾಳ (ಪನದಿ) (68) ಎಂದು ಗುರುತಿಸಲಾಗಿದೆ. 'ಪಾರವ್ವ ತಮ್ಮ‌ ಮತದಾನದ ಹಕ್ಕು ಚಲಾಯಿಸಲು ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮತಗಟ್ಟೆಯ ಬಳಿಯೇ ಮಹಿಳೆ ಮೃತಪಟ್ಟಿದ್ದರಿಂದ ಕೆಲ ಹೊತ್ತು ಮತದಾನ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. 

KARNATAKA ELECTION 2023: ಮತದಾನ ದಿನವೂ ಮಂಡ್ಯದಲ್ಲಿ ಗಿಫ್ಟ್‌ ಪಾಲಿಟಿಕ್ಸ್‌, ಬಿಜೆಪಿಗೆ ಮತ ನೀಡುವಂತೆ ಸೀರೆ, ಕೋಳಿ ಹಂಚಿಕೆ..?

ಚಳ್ಳಕೆರೆಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವು: ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ರೇಣುಕಾಪುರದಲ್ಲಿ ಮತಗಟ್ಟೆಗೆ ಆಗಮಿಸಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಅಮೀರ್ ಸಾಬ್ (56) ಎಂದು ಗುರುತಿಸಲಾಗಿದೆ. ಮತಗಟ್ಟೆ ಕೇಂದ್ರದ ಕೋಣೆಯಲ್ಲಿ ಮತದಾನಕ್ಕೆ ಹೋಗುವಾಗ ಅಮೀರ್‌ಸಾಬ್‌ ಕುಸಿದು ಬಿದ್ದುದ್ದಾನೆ. ಕೂಡಲೇ ಅವರನ್ನು ತಪಾಸಣೆ ಮಾಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಮತಯಂತ್ರಗಳನ್ನು ಒಡೆದು ಹಾಕಿದ ಗ್ರಾಮಸ್ಥರು: ವಿಜಯಪುರ: ಮತದಾನ ಮಾಡುವುಕ್ಕಾಗಿ ತರಲಾಗಿದ್ದ  ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನ ಒಡೆದು ಹಾಕಿದ ಗ್ರಾಮಸ್ಥರು. ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ ಗ್ರಾಮಸ್ಥರು. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ ಗ್ರಾಮಸ್ಥರು. ಸಿಬ್ಬಂದಿಗಳಿಗು ಥಳಿತ, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

click me!