
ಕೊಲ್ಲಂ (ಮೇ.10):ಆಘಾತಕಾರಿ ಘಟನೆಯೊಂದರಲ್ಲಿ, ವೈದ್ಯಕೀಯ ತಪಾಸಣೆಗೆಂದು ಕರೆತಂದಿದ್ದ ಆರೋಪಿಯೊಬ್ಬ ಬುಧವಾರ ಬೆಳಗ್ಗೆ ಕೊಟ್ಟಾರಕರ ತಾಲೂಕು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಮೃತ ವೈದ್ಯೆ ವಂದನಾ ದಾಸ್ (23 ವರ್ಷ) ಕೊಟ್ಟಾಯಂ ಜಿಲ್ಲೆಯವರು. ಪ್ರಕರಣದ ಆರೋಪಿ ಸಂದೀಪ್ ನೆಡುಂಪಣ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ತಾಲೂಕಾ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ವಂದನಾ ದಾಸ್‌ರನ್ನು ತಕ್ಷಣವೇ ತಿರುವನಂತಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಸರ್ಜಿಕಲ್ ವಸ್ತುಗಳಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಂದಾಜು ಐದಕ್ಕೂ ಅಧಿಕ ಬಾರಿ ಆಕೆಯ ಮೇಲೆ ಸಂದೀಪ್ ಹಲ್ಲೆ ಮಾಡಿದ್ದಾರೆ. ಆಕೆಯ ಎದೆಗೆ ಚುಚ್ಚಿದ್ದ ಚೂರಿ ರೀತಿಯ ವಸ್ತು ಶ್ವಾಸಕೋಶಕ್ಕೆ ಹಾನಿ ಮಾಡಿತ್ತು. ಅದರೊಂದಿಗೆ ಆಕೆಯ ಬೆನ್ನಿಗೂ ಸಂದೀಪ್ ಚಾಕು ರೀತಿಯ ಸರ್ಜಿಕಲ್ ವಸ್ತುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ವಶದಲ್ಲಿರುವ ಪೂಯಪಲ್ಲಿ ನಿವಾಸಿ ಸಂದೀಪ್ ಎಂಬಾತ ಮಹಿಳಾ ವೈದ್ಯೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಪೊಲೀಸರು ವಶಕ್ಕೆ ಪಡೆದ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಿಂಸಾಚಾರ ನಡೆದಿದೆ. ಮನೆಯಲ್ಲಿ ಹಿಂಸಾಚಾರ ಎಸಗಿದ ಸಂದೀಪ್ ನನ್ನು ಪೊಲೀಸರು ಹಾಗೂ ಸಂಬಂಧಿಕರು ಬೆಳಗ್ಗೆ 5 ಗಂಟೆ ಸುಮಾರಿಗೆ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿಯೂ ಸಹ ಯುವಕ ಯಾವುದೇ ಪ್ರಚೋದನೆ ಇಲ್ಲದೆ ಹಲ್ಲೆ ನಡೆಸಿದ್ದಾನೆ.
ಋತುಮತಿಯಾದ ಸಹೋದರಿಯನ್ನು ಕೊಂದ ಅಣ್ಣ, ರಕ್ತದ ಕಲೆ ಕಂಡು ಅಂದುಕೊಂಡಿದ್ದೇ ಬೇರೆ!
ಶಂಕಿತ ವ್ಯಕ್ತಿ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ತೆಗೆದುಕೊಂಡು ಆಸ್ಪತ್ರೆಯಲ್ಲಿದ್ದವರಿಗೆ ಮತ್ತು ತಡೆಯಲು ಯತ್ನಿಸಿದವರಿಗೆ ಇರಿದಿದ್ದಾನೆ. ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವೈದ್ಯೆ ವಂದನಾ ಅವರನ್ನು ತಿರುವನಂತಪುರದ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಕೆಯ ಬೆನ್ನು ಮತ್ತು ಎದೆಗೆ ಹಲವು ಬಾರಿ ಇರಿದ ನಂತರ ಆಕೆಯ ಜೀವವನ್ನು ಉಳಿಸಲಾಗಲಿಲ್ಲ. ಮಹಿಳಾ ವೈದ್ಯರ ಸಾವಿನ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.
3 ವರ್ಷದ ದತ್ತುಪುತ್ರಿಯ ಗುಪ್ತಾಂಗವನ್ನು ಸಿಗರೇಟ್‌ನಿಂದ ಸುಟ್ಟ ಪಾಪಿಗಳು, ಅಸ್ಸಾಂನಲ್ಲಿ ವೈದ್ಯ ದಂಪತಿಯ ಬಂಧನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ