ಕೊಲೆ ಆರೋಪಿ ನಟ ದರ್ಶನ್ ಬಚಾವ್ ಮಾಡಲು ಸಚಿವರ ಶತಪ್ರಯತ್ನ; ತನಿಖಾ ಪೊಲೀಸರಿಗೆ 128 ಬಾರಿ ಕರೆ

By Sathish Kumar KH  |  First Published Jun 13, 2024, 1:48 PM IST

ಚಿತ್ರದುರ್ಗದ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿ ಬೀದಿ ಹೆಣ ಮಾಡಿದ ಕೊಲೆ ಆರೋಪಿ ನಟ ದರ್ಶನ್ ಬಚಾವ್ ಮಾಡಲು ಕಾಂಗ್ರೆಸ್ ಪ್ರಭಾವಿ ಸಚಿವರೊಬ್ಬರು ತನಿಖಾ ಪೊಲೀಸ್ ಅಧಿಕಾರಿಗೆ 128 ಬಾರಿ ಕರೆ ಮಾಡಿದ್ದಾರೆ.


ಬೆಂಗಳೂರು (ಜೂ.12): ಚಿತ್ರದುರ್ಗದ ಒಬ್ಬ ಜನ ಸಾಮಾನ್ಯ ವ್ಯಕ್ತಿಯನ್ನು ಬೆಂಗಳೂರಿಗೆ ಎತ್ತಾಕಿಕೊಂಡು ಬಂದು ಕ್ರೂರವಾಗಿ ಹಲ್ಲೆ ಮಾಡಿ ಬೀದಿ ಹೆಣವಾಗಿ ಮಾಡಿದ ನಟ ದರ್ಶನ್‌ನನ್ನು ಕೊಲೆ ಕೇಸಿನಿಂದ ಬಚಾವ್ ಮಾಡಲು ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಬ್ಬರು ಪೊಲೀಸ್ ತನಿಖಾಧಿಕಾರಿಗೆ 128 ಬಾರಿ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.

ಹೌದು, ಇಡೀ ರಾಜ್ಯಾದ್ಯಂತ ತೀವ್ರವಾಗಿ ಚರ್ಚೆಗೆ ಗ್ರಾಸವಾಗಿರುವ ಕನ್ನಡ ಸಿನಿಮಾ ನಟ ದರ್ಶನ್ ಕೊಲೆ ಕೇಸಿನಲ್ಲಿ ಪೊಲೀಸರು ಬಂಧಿಸಿದ ಪ್ರಕರಣವನ್ನು ಮುಚ್ಚಿಹಾಕಲು ಸ್ವತಃ ರಾಜ್ಯ ಸರ್ಕಾರದ ಪ್ರಭಾವಿ ಸಚಿವರೇ ಮುಂದಾಗಿದ್ದಾರೆ. ನಟ ದರ್ಶನ್, ಆತನ 2ನೇ ಪತ್ನಿ ಪವಿತ್ರಾಗೌಡ ಹಾಗೂ 15 ಜನ ಸಹಚರರು ಸೇರಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ. ಈ ಕೃತ್ಯ ಅತ್ಯಂತ ಅಮಾನವೀಯವಾಗಿದ್ದು, ಇದನ್ನು ರಾಜ್ಯಾದ್ಯಂತ ಎಲ್ಲರೂ ಖಂಡಿಸುತ್ತಿದ್ದಾರೆ. ಅದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಒಂದು ಕಾಮೆಂಟ್ ಮಾಡಿದ್ದಕ್ಕೆ ಪೊಲೀಸರಿಗೆ ದೂರು ಕೊಟ್ಟು ಶಿಕ್ಷೆ ಕೊಡಿಸುವುದು ಬಿಟ್ಟು, ಕಾನೂನು ಕೈಗೆತ್ತಿಕೊಂಡು ಕ್ರೂರವಾಗಿ ಕೊಲೆ ಮಾಡಿರುವುದು ಕ್ಷಮಗೆ ಅರ್ಹವಲ್ಲದ ಅಪರಾಧವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಇಷ್ಟಿದ್ದರೂ ಪ್ರಭಾವಿ ಸಚಿವರೊಬ್ಬರು ಕೊಲೆ ಆರೋಪಿಯನ್ನು ಬಚಾವ್ ಮಾಡಲು ಮುಂದಾಗಿದ್ದಾರೆ.

Tap to resize

Latest Videos

ರೇಣುಕಾಸ್ವಾಮಿ ಮರ್ಮಾಂಗದ ಮೇಲೆ ಕ್ರೂರ ದಾಳಿ; ಪೋಸ್ಟ್‌ಮಾರ್ಟಮ್ ವರದಿಯಲ್ಲಿ ಹಲ್ಲೆಯ ಇಂಚಿಂಚೂ ಮಾಹಿತಿ ಬಹಿರಂಗ

ದರ್ಶನ್ ಬಚಾವ್ ಮಾಡಲು ಪ್ರಭಾವಿ ರಾಜಕಾರಣಿಗಳ ಶತಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ರಕ್ಷಿಸಲು ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡ ಹಾಕುತ್ತಿದ್ದಾರೆ. ಇಬ್ಬರು ಕಾಂಗ್ರೆಸ್ ಅಚಿವರು, ಒಬ್ಬ ಬಿಜೆಪಿ ರಾಜಕಾರಣಿಯನ್ನು ಭೇಟಿಯಾಗಿರುವ ನಟ ದರ್ಶನ್ ಪರ ಪ್ರಭಾವಿಗಳು ಕೂಡಲೇ ದರ್ಶನ್‌ನನ್ನು ಹೊರಗೆ ಕರೆತರುವಂತೆ ಹಾಗೂ ಮರ್ಡರ್ ಕೆಸ್‌ನಿಂದ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಬ್ಬ ಸಚಿವ ಸೇರಿದಂತೆ ಮೂವರು ರಾಜಕಾರಣಿಗಳಿಂದ ಪೊಲೀಸರ ಮೇಲೆ ಶತ ಪ್ರಯತ್ನ ಮಾಡಲಾಗುತ್ತಿದೆ. ತನಿಖೆಯಲ್ಲಿರುವ ಅಧಿಕಾರಿಗಳ ಮೇಲೂ ರಾಜಕಾರಣಿಗಳ ಒತ್ತಡ ಹಾಕಲಾಗುತ್ತಿದ್ದು, ಪೊಲೀಸರು ಮಾತ್ರ ಪೊಲೀಸರ ಕರೆ ಸ್ವೀಕರಿಸದೇ ತನಿಖೆಯ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ. 

ತನಿಖಾ ಪೊಲೀಸ್ ಅಧಿಕಾರಿಗೆ 128 ಬಾರಿ ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ಇದೇ ಕೇಸಿನ ಮತ್ತೊಬ್ಬ ಅಧಿಕಾರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಆಗ ನಾನು ರಾತ್ರಿ ವೇಳೆ ನಟ ದರ್ಶನ್​ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪ್ರಭಾವಿ ರಾಜಕಾರಣಿ ಹೇಳಿದ್ದಾರೆ. ನಿನ್ನೆವರೆಗೂ ದರ್ಶನ್ ಬಚಾವ್​ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿದ ರಾಜಕಾರಣಿ, ಈಗ ದರ್ಶನ್ ಭೇಟಿಯಾಗಲು ಅವಕಾಶ ಕೊಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

click me!