
ಶಿವಮೊಗ್ಗ(ಜೂ.13): ಸಾಲಬಾಧೆಯಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. ಶಿವಮೊಗ್ಗದ ಹರಿಗೆ ಗ್ರಾಮದ ವಾಸುದೇವ (50) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ.
ಶಿವಮೊಗ್ಗದ ಬೈಪಾಸ್ ರಸ್ತೆಯ ಗರುಡ ಲೇಔಟ್‌ನಲ್ಲಿ ವಿಷ ಸೇವಿಸಿ ವಾಸುದೇವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಗುತ್ತಿಗೆದಾರಾಗಿದ್ದ ವಾಸುದೇವ್ ಲಕ್ಷಾಂತರ ರು. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ತೀರಿಸಲಾಗಿದೆ ಇತ್ತ ಗುತ್ತಿಗೆಗಳು ಸಿಗದ ಹಿನ್ನೆಲೆ, ಮನನೊಂದಿದ್ದರು. ನಿನ್ನೆ ಸಂಜೆಯ ವೇಳೆ ವಿಷ ಸೇವಿಸಿ ಗದ್ದೆಯಲ್ಲಿ ಬಿದ್ದಿದ್ದ ವಾಸುದೇವನನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬೆಳಗಾವಿ: ಕುಡಿದ ಅಮಲಿನಲ್ಲಿ ನೇಣು ಬಿಗಿದುಕೊಂದು ಪೊಲೀಸ್ ಕಾನ್ಸಟೇಬಲ್ ಆತ್ಮಹತ್ಯೆ
ಶವವನ್ನು ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗುತ್ತಿಗೆದಾರ ವಾಸುದೇವ ನಿಧನಕ್ಕೆ ಮಹಾನಗರ ಪಾಲಿಕೆ ಗುತ್ತಿಗೆದಾರರಿಂದ ಸಂತಾಪ ಸೂಚಿಸಿದ್ದಾರೆ.
ಕೊರೋನಾ ನಂತರ ಕಾಮಗಾರಿಗಳು ತೀರ ವಿರಳವಾಗಿದ್ದು ಹಲವಾರು ಗುತ್ತಿಗೆದಾರರು ಸಾಲ ಮಾಡಿಕೊಂಡಿದ್ದಾರೆ . ಇದರಿಂದಾಗಿ ಸಾಲ ತೀರಿಸಲಾಗಿದೆ ಆತ್ಮಹತ್ಯೆ ಪರಿಸ್ಥಿತಿ ಬಂದಿದೆ ಎದು ಗುತ್ತಿಗೆದಾರ ಸಂಘದ ಕಾರ್ಯದರ್ಶಿ ನಫೀಜ್ ತಿಳಿಸಿದ್ದಾರೆ.
ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ