
ಬೆಂಗಳೂರು (ಜೂ.13): ನಟ ದರ್ಶನ್, ಆತನ 2ನೇ ಹೆಂಡತಿ ಪವಿತ್ರಾಗೌಡ ಸೇರಿ 17 ಜನರ ಗ್ಯಾಂಗ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಮರಣೋತ್ತರ ಪರೀಕ್ಷಾ ವರದಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ಕೈ ಸೇರಿದೆ. ಈ ಪೋಸ್ಟ್ ಮಾರ್ಟಮ್ ರಿಪೋರ್ಟ್‌ನಲ್ಲಿ ರೇಣುಕಾಸ್ವಾಮಿಯ ಮರ್ಮಾಂಗದ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ಹಿಂಸಾತ್ಮಕ ಕೃತ್ಯ ಬಹಿರಂಗವಾಗಿದೆ.
ಮನುಷ್ಯನ ದೇಹದಲ್ಲಿ ಅತಿ ಸೂಕ್ಷ್ಮ ದೇಹದ ಭಾಗಗಳಲ್ಲಿ ಪುರುಷರ ಮರ್ಮಾಂಗವೂ ಒಂದಾಗಿದೆ. ಆದರೆ, ನಟ ದರ್ಶನ್ ಎರಡನೇ ಪತ್ನಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾರೆಂದು ಕೋಪಗೊಂಡು, ನಟ ದರ್ಶನ್ ಅಭಿಮಾನಿಗಳು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಆತನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ವೇಳೆ ರೇಣುಕಾಸ್ವಾಮಿಗೆ ಕಬ್ಬಿಣದ ರಾಡ್‌ನಿಂದ ಕೈ ಮತ್ತು ಕಾಲಿಗೆ ರಕ್ತ ಹೆಪ್ಪುಗಟ್ಟುವ ರೀತಿ ಹಲ್ಲೆ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭರ್ಜರಿ ಟ್ವಿಸ್ಟ್; ನಟ ದರ್ಶನ್ ಬಚಾವಾಗಲು 30 ಲಕ್ಷ ರೂ. ಡೀಲ್
ತಣಿಯದ ಕ್ರೂರತ್ವ, ಮರ್ಮಾಂಕ್ಕೆ ಬಿತ್ತು ಹೊಡೆತ: ರೇಣುಕಾಸ್ವಾಮಿಯನ್ನು ಕೂಡಿಹಾಕಿ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಕೂಗಾಡುತ್ತಿದ್ದರೂ ನಟ ದರ್ಶನ್ ಅಂಡ್ ಗ್ಯಾಂಗ್‌ನ ಕ್ರೂರತ್ವ ಮಾತ್ರ ತಣಿದಿಲ್ಲ. ಹೀಗಾಗಿ, ದರ್ಶನ್ ಹಾಗೂ ಆತನ ಸಹಚರರು ರೇಣುಕಾಸ್ವಾಮಿಯ ಮರ್ಮಾಂಗವನ್ನು ಗುರಿಯಾಗಿಸಿ ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ನರಳುವುದನ್ನು ನೋಡಿ ವಿಕೃತವಾಗಿ ಆನಂದಿಸಿದ್ದಾರೆ. ಇದಾದ ನಂತರ ಎದೆಯ ಎಡಭಾಗ ಹೃದಯವಿರುವ ಜಾಗಕ್ಕೆ ಜೋರಾಗಿ ಬಾಕ್ಸಿಂಗ್ ಆಡುವ ರೀತಿಯಲ್ಲಿ ಪಂಚ್ ಮಾಡಿದ್ದಾರೆ. ಇದರಿಂದ ರೇಣುಕಾಸ್ವಾಮಿ ಒದ್ದಾಡಿ ಜೀವ ಬಿಟ್ಟಿದ್ದಾರೆ. ನಂತರ, ಆತನ ದೇಹವನ್ನು ಸುಮನಹಳ್ಳಿ ಮೇಲ್ಸೇತುವೆ ಬಳಿ ಬೀಸಾಡಿ ನಟ ದರ್ಶನ್ ಗ್ಯಾಂಗ್‌ನಲ್ಲಿ ಮೂವರು ಮಾತ್ರ ಪೊಲೀಸರಿಗೆ ಸರೆಂಡರ್ ಆಗಿದ್ದರು.
ಬೀದಿ ಹೆಣವಾಗಿ ಚರಂಡಿಯ ಬಳಿ ಬಿದ್ದಿದ್ದ ರೇಣುಕಾಸ್ವಾಮಿಯ ಮೃತದೇಹವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ನಂತರ ರೇಣುಕಾಸ್ವಾಮಿ ಅವರ ತಂದೆ-ತಾಯಿ ಬಂದು ಮಗನ ಮೃತದೇಹ ಗುರುತಿಸಿದ ನಂತರ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ನಂತರ, ರೇಣುಕಾಸ್ವಾಮಿಯ ಮೃತದೇಹವನ್ನು ಚಿತ್ರದುರ್ಗಕ್ಕೆ ಕೊಂಡೊಯ್ದು, ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈಗ ಮರಣೋತ್ತರ ಪರೀಕ್ಷಾ ವರದಿಯು ಬಂದಿದ್ದು, ಅದರಲ್ಲಿ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಭೀಕರವಾಗಿ ಹೊಡೆದಿರುವುದು ಪತ್ತೆಯಾಗಿದೆ. ಜೊತೆಗೆ, ದೇಹದ ವಿವಿಧೆಡೆ 15 ಭಾಗಗಳಲ್ಲಿ ಕ್ರೂರವಾಗಿ ಹಲ್ಲೆ ಮಾಡಿರುವುದು ಕಂಡುಬಂದಿದೆ.
ಕಾಂಟ್ರವರ್ಸಿಗಳ ಕಿಂಗ್ ದರ್ಶನ್ ಅಂಡ್ ಗ್ಯಾಂಗ್; ರೇಣುಕಾಸ್ವಾಮಿ ಕೊಲೆ ಮಾಡಿ ಖಾಕಿ ಪಡೆಗೆ ಸರೆಂಡರ್!
ರೇಣುಕಾಸ್ವಾಮಿ ಶವಪರೀಕ್ಷೆ ವರದಿಯ ವಿವರಗಳು:
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ