8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!

By Suvarna News  |  First Published Jul 6, 2020, 5:13 PM IST

8 ಪೊಲೀಸರ ಕೊಂದ ದುಬೆಗೆ ಪೊಲೀಸರೇ ಮಾಹಿತಿದಾರರು!| ತನ್ನ ಬಂಧನಕ್ಕೆ ಬಂದಿದ್ದ 8 ಪೊಲೀಸರ ಹತ್ಯಾಕಾಂಡ ನಡೆಸಿ ಪರಾರಿಯಾದ ಇಲ್ಲಿನ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ|  ವಿಕಾಸ್‌ ದುಬೆ ಸಹಚರ ದಯಾಶಂಕರ ಅಗ್ನಿಹೋತ್ರಿ ಕೊಟ್ಟ ಶಾಕಿಂಗ್ ಮಾಹಿತಿ


ಕಾನ್ಪುರ(ಜು.06): ತನ್ನ ಬಂಧನಕ್ಕೆ ಬಂದಿದ್ದ 8 ಪೊಲೀಸರ ಹತ್ಯಾಕಾಂಡ ನಡೆಸಿ ಪರಾರಿಯಾದ ಇಲ್ಲಿನ ಕುಖ್ಯಾತ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಗೆ, ಪೊಲೀಸ್‌ ಕಾರ್ಯಾಚರಣೆಯ ಸುಳಿವು ನೀಡಿದ್ದು ಬೇರಾರೂ ಅಲ್ಲ. ಕೆಲವು ಪೊಲೀಸ್‌ ಸಿಬ್ಬಂದಿಯೇ ವಿಕಾಸ್‌ಗೆ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.

ಭಾನುವಾರ ಪೊಲೀಸರಿಂದ ಬಂಧಿತನಾದ ವಿಕಾಸ್‌ ದುಬೆ ಸಹಚರ ದಯಾಶಂಕರ ಅಗ್ನಿಹೋತ್ರಿ, ಈ ವಿಷಯವನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಹೀಗಾಗಿ ತನಿಖೆಯು ಪೊಲೀಸರಿಗೇ ತಿರುಗುಬಾಣವಾಗಿದ್ದು, ತಮ್ಮಲ್ಲೇ ಇರುವ ಈ ‘ರಹಸ್ಯ ಮಾಹಿತಿದಾರ’ ಯಾರಿರಬಹುದು ಎಂದು ತಲಾಶೆ ಆರಂಭಿಸಿದ್ದಾರೆ.

Tap to resize

Latest Videos

undefined

8 ಪೊಲೀಸರ ಕೊಂದ ಪಾತಕಿ ಮನೆ ಸಂಪೂರ್ಣ ನಾಶ!

ಇದೇ ವೇಳೆ, ಬಂಧನ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ದುಬೆ ಸಹಚರರು ಗೆರಿಲ್ಲಾ ಶೈಲಿಯ ದಾಳಿ ಮಾಡಿದ್ದರು. ಕೊಡಲಿ ಬಳಸಿ ಡಿಎಸ್‌ಪಿ ದೇವೇಂದ್ರ ಮಿಶ್ರಾ ಅವರ ಶಿರಚ್ಛೇದ ಮಾಡಿದ್ದರು ಹಾಗೂ ಬೆರಳು ಕತ್ತರಿಸಿದ್ದರು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ವಿಕಾಸ್‌ ದುಬೆ ಅಡಗುತಾಣ ಬಿಕ್ರು ಗ್ರಾಮದ ಸನಿಹವಿದ್ದ ಚೌಬೇಪುರ ಪೊಲೀಸ್‌ ಠಾಣೆಯಿಂದ ವಿಕಾಸ್‌ ದುಬೆಗೆ ಕಾರ್ಯಾಚರಣೆಯ ಮುಂಚೆ ಒಂದು ಫೋನ್‌ ಕರೆ ಬಂದಿತ್ತು. ಫೋನ್‌ ಮಾಡಿದ ವ್ಯಕ್ತಿಯು, ‘ನಿನ್ನ ಬಂಧನಕ್ಕೆ ಪೊಲೀಸರು ಬರುತ್ತಿದ್ದಾರೆ’ ಎಂದು ತಿಳಿಸಿದ. ಕೂಡಲೇ ದುಬೆ ತನ್ನ ಸಹಚರನ್ನು ಬಳಸಿಕೊಂಡು ವಿದ್ಯುತ್‌ ಲೈನ್‌ ಕತ್ತರಿಸಿ ಹಾಕಿಸಿದ. ಸಹಚರರನ್ನು ಮನೆ ಮೇಲೆ ನಿಲ್ಲಿಸಿ, ಕಾರ್ಯಾಚರಣೆಗೆ ಬಂದ ಪೊಲೀಸರ ಮೇಲೆ ಗುಂಡಿನ ಮಳೆಗರಿಸಿ ಪರಾರಿಯಾದ ಎಂದು ಅಗ್ನಿಹೋತ್ರಿ ಹೇಳಿದ್ದಾನೆ.

ಈ ನಡುವೆ ವಿಕಾಸ್‌ ದುಬೆಯ ನಿಖರ ಸುಳಿವು ನೀಡಿದವರಿಗೆ ಇದ್ದ ಬಹುಮಾನ ಮೊತ್ತವನ್ನು 50 ಸಾವಿರ ರು.ನಿಂದ 1 ಲಕ್ಷಕ್ಕೆ ಹೆಚ್ಚಿಸಿದ್ದಾರೆ. ದುಬೆ ಮೇಲೆ 60 ಕ್ರಿಮಿನಲ್‌ ಕೇಸ್‌ಗಳಿವೆ.

ನನ್ನ ಮಗನನ್ನು ಕೊಂದು ಬಿಡಿ; 8 ಪೊಲೀಸರಿಗೆ ಗುಂಡಿಕ್ಕಿದ ವಿಕಾಸ್ ದುಬೆಗೆ ಕ್ಷಮೆ ಇಲ್ಲ ಎಂದ ತಾಯಿ!

ಪೊಲೀಸರ ಶಿರಚ್ಛೇದ ಮಾಡಿಸಿದ ದುಬೆ: - ನಕ್ಸಲರ ರೀತಿ ಕೃತ್ಯ

ಇಲ್ಲಿನ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಬಂಧನ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ದುಬೆ ಸಹಚರರು ಗೆರಿಲ್ಲಾ ಶೈಲಿಯ ದಾಳಿ ಮಾಡಿದ್ದರು. ಕೊಡಲಿ ಬಳಸಿ ಡಿಎಸ್‌ಪಿ ದೇವೇಂದ್ರ ಮಿಶ್ರಾ ಅವರ ಶಿರಚ್ಛೇದ ಮಾಡಿದ್ದರು ಹಾಗೂ ಬೆರಳು ಕತ್ತರಿಸಿದ್ದರು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಇದಲ್ಲದೆ, ಸಬ್‌ ಇನ್ಸ್‌ಪೆಕ್ಟರ್‌ ಒಬ್ಬರ ಮೇಲೆ ಸಮೀಪದಿಂದ ಗುಂಡು ಹಾರಿಸಿದ್ದಾರೆ ಹಾಗೂ ಪೇದೆಯನ್ನು ಪೊಲೀಸರಿಂದ ಕಸಿದ ಎಕೆ-47 ಬಳಸಿ ಹತ್ಯೆ ಮಾಡಲಾಗಿದೆ ಎಂದೂ ಪೋಸ್ಟ್‌ ಮಾರ್ಟಂ ವರದಿ ಹೇಳಿದೆ. ಈ ರೀತಿಯ ಶಿರಚ್ಛೇದ ಹಾಗೂ ಕ್ರೂರತೆಯನ್ನು ಕಂಡು ಪೊಲೀಸರೇ ದಂಗುಬಡಿದಿದ್ದಾರೆ.

ಹಿಡಿಯಲು ಬಂದ 8 ಜನ ಪೊಲೀಸರನ್ನೇ ಹತ್ಯೆ ಮಾಡಿದ ರೌಡಿ ವಿಕಾಸ್ ದುಬೆ! ಯಾರೀತ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾನ್ಪುರ ವಲಯದ ಐಜಿಪಿ ಮೋಹಿತ್‌ ಅಗರ್‌ವಾಲ್‌, ‘ಇದು ಗೆರಿಲ್ಲಾ ಮಾದರಿಯ ದಾಳಿ. ಉತ್ತರ ಪ್ರದೇಶದಲ್ಲಿ ಹಿಂದೆಂದೂ ಈ ರೀತಿಯ ದಾಳಿ ನಡೆದಿರಲಿಲ್ಲ. ನಕ್ಸಲರು ಈ ರೀತಿಯ ದಾಳಿ ನಡೆಸುತ್ತಾರೆ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟು 8 ಪೊಲೀಸರು ಈ ದಾಳಿಯಲ್ಲಿ ಹತರಾಗಿದ್ದರು.

click me!