
ಪುಣೆ (ಜು. 05) ಕೊರೋನಾ ಎಫೆಕ್ಟ್ ಒಂದೆಲ್ಲಾ ಒಂದು ಬೇರೆ ಬೇರೆ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ 30 ವರ್ಷದ ಉದ್ಯೋಗಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ.
ಜೂನ್ 13 ಮತ್ತು 14ರ ನಡುವೆ ಘಟನೆ ನಡೆದಿದ್ದು ದೆಹಲಿಯಲ್ಲಿ ವಾಸ ಮಾಡುವುದಕ್ಕೋಸ್ಕರ ಉದ್ಯೋಗಿ ಕಂಪನಿ ಹಣ ಬಳಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಹಿಂಸೆ ನೀಡಲಾಗಿದೆ.
ಪುಣೆಯ ಕೊಥ್ರಾಡ್ ಏರಿಯಾದಲ್ಲಿ ಉದ್ಯೋಗದಾತ ಸೇರಿದಂತೆ ಮೂವರು ಸೇರಿ ಉದ್ಯೋಗಿಯನ್ನು ಅಪಹರಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಕಂಪನಿ ಕೆಲಸಕ್ಕೆ ದೆಹಲಿಗೆ ಬಂದೊದ್ದ ಉದ್ಯೋಗಿ ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿದ್ದರು. ಪುಣೆಗೆ ವಾಪಸ್ ಆಗಲು ಸಾಧ್ಯವಾಗಿರಲಿಲ್ಲ. ಪೇಂಟಿಂಗ್ ಎಕ್ಸಿಬೀಶನ್ ನಡೆಸುವ ಕಂಪನಿಯ ಮ್ಯಾನೇಜರ್ ಸಂಕಷ್ಟಕ್ಕೆ ಸಿಲುಕಿದ್ದರು.
ಅವಳು ಸೆಕ್ಸ್ ವೇಳೆ ಹಿಂಸೆ ಕೊಡ್ತಾಳೆ ಏನ್ ಮಾಡಲಿ
ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಉದ್ಯೋಗಿ ಅನಿವಾರ್ಯವಾಗಿ ಕಂಪನಿಯ ಹಣ ಬಳಸಿಕೊಂಡಿದ್ದರು. ಮೇ 7 ರಂದು ಪುಣೆಗೆ ವಾಪಸ್ ಆಗಿದ್ದಾರೆ. ಬಂದ ಮೇಲೆ 17 ದಿನ ಕ್ವಾರಂಟೈನ್ ಆಗುವಂತೆ ಕಂಪನಿ ಹೇಳಿದೆ. ಹಣವಿಲ್ಲದ ಉದ್ಯೋಗಿ ಕ್ವಾರಂಟೈನ್ ಗಾಗಿ ತನ್ನ ಮೊಬೈಲ್ ಅಡವಿಡಬೇಕಾದ ಪರಿಸ್ಥಿತಿ ಬಂದಿದೆ.
ಇದಾದ ಮೇಲೆ ಜೂನ್ 13 ರಂದು ನೀನು ದೆಹಲಿಯಲ್ಲಿ ಬಳಸಿಕೊಂಡ ಹಣ ನೀಡಬೇಕು ಎಂದು ಕಂಪನಿ ಹೇಳಿದೆ. ಉದ್ಯೋಗದಾತ ಬಂದು ಒತ್ತಾಯಪೂರ್ವಕವಾಗಿ ಉದ್ಯೋಗಿಉಯನ್ನು ಕಾರ್ ನಲ್ಲಿ ಹಾಕಿಕೊಂಡು ಬಂದಿದ್ದಾರೆ.
ಕಂಪನಿಯ ಕೋಣೆಯೊಂದರಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ. ಕಂಪನಿಯ ಮಾಲೀಕ ಕಂಡಕಂಡಲ್ಲಿ ಹೊಡೆದಿದ್ದು ಉದ್ಯೋಗಿಯ ಜನನೇಂದ್ರಿಯಕ್ಕೆ ಸಾನಿಟೈಸರ್ ಹಾಕಿದ್ದಾನೆ.
ಅಲ್ಲಿಂದ ಹೇಗೋ ಬಿಡುಗಡೆಯಾದ ಮೇಲೆ ಉದ್ಯೋಗಿ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಶರು ತನಿಖೆ ನಡೆಸುತ್ತಿದ್ದು ಇಲ್ಲಿಯವರೆಗೆ ಯಾರ ಬಂಧನವೂ ಆಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ