Expired Food Seized: 2022ರಲ್ಲೇ ಎಕ್ಸ್ಪೈರಿ ಆದ ಖರ್ಜೂರ ರೀ ಪ್ಯಾಕ್ ಮಾಡಿ ಮಾರಾಟ, ಕೊಳ್ಳುವಾಗ ಜೋಪಾನ

Published : Feb 23, 2026, 04:39 PM IST
Expiry dates

ಸಾರಾಂಶ

ಹಬ್ಬದ ಟೈಂನಲ್ಲಿ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿರುತ್ತೆ. ರಂಜಾನ್ ನಲ್ಲಿ ಖರ್ಜೂರಕ್ಕೆ ಡಿಮ್ಯಾಂಡ್ ಹೆಚ್ಚು. ಆದ್ರೆ ಇದನ್ನೇ ಅನೇಕರು ಬಂಡವಾಳ ಮಾಂಡ್ಕೊಂಡು ಜನರ ಆರೋಗ್ಯದ ಜೊತೆ ಆಟ ಆಡ್ತಿದ್ದಾರೆ. 

ಹೋಳಿ, ರಂಜಾನ್ ಸಮಯದಲ್ಲಿ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಅದ್ರಲ್ಲೂ ಖರ್ಜೂರ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಲಾಭಕ್ಕಾಗಿ ಅನೇಕರು ತಪ್ಪು ದಾರಿ ತುಳಿಯುತ್ತಿದ್ದಾರೆ. ಜನರ ಆರೋಗ್ಯದ ಜೊತೆ ಆಟ ಆಡ್ತಿದ್ದಾರೆ. ನಮ್ಮ ದೇಹಕ್ಕೆ ಶಕ್ತಿ ನೀಡುವ ಖರ್ಜೂರ ಕೂಡ ನಮ್ಮ ಆರೋಗ್ಯ ಹಾಳ್ಮಾಡಬಹುದು. ಎಕ್ಸ್ಪೈರಿ ಆಗಿರುವ ಖರ್ಜೂರಗಳನ್ನು ಮಾರ್ಕೆಟ್ ನಲ್ಲಿ ಮಾರಾಟ ಮಾಡಲಾಗ್ತಿದೆ. ಹಳೆಯ ಖರ್ಜೂರಕ್ಕೆ ಹೊಸ ಸ್ಟಿಕ್ಕರ್ ಹಾಕಿ ಮಾರಾಟ ಮಾಡುವವರು ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಹಳೆ ಖರ್ಜೂರಕ್ಕೆ ಹೊಸ ಸ್ಟಿಕ್ಕರ್

ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಹಾರ ಸುರಕ್ಷತಾ ಇಲಾಖೆ ಕಲಬೆರಕೆದಾರರ ವಿರುದ್ಧ ಅಭಿಯಾನ ಶುರುಮಾಡಿದೆ. ಇದರ ಅಡಿ ಕೋಟ್ಯಂತರ ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲಾಖೆ ಸದಸ್ಯರು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಅವಧಿ ಮೀರಿದ ಖರ್ಜೂರವನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ದೊಡ್ಡ ಪ್ರಮಾಣದ ಕಲಬೆರಕೆ ಖೋಯಾ ಮತ್ತು ಕತ್ತರಿಸಿದ ವೀಳ್ಯದೆಲೆಗಳನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ.

ಹಬ್ಬಗಳ ಸಮಯದಲ್ಲಿ ಹೆಚ್ಚಿನ ಲಾಭಕ್ಕಾಗಿ ಕಳಪೆ, ಕಲಬೆರಿಕೆ ಆಹಾರ ವಸ್ತುಗಳ ಮಾರಾಟ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಗರದಾದ್ಯಂತ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಅಭಿಯಾನದ ಭಾಗವಾಗಿ, ಫಜಲ್ಗಂಜ್ ಪ್ರದೇಶದಲ್ಲಿ ಸಗಟು ವ್ಯಾಪಾರಿಯ ಗೋದಾಮಿನ ಮೇಲೆ ದಾಳಿ ನಡೆಸಲಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದ ಕಳಪೆ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

60 ಸಾವಿರದ ಕ್ಯಾಮೆರಾ ಆರ್ಡರ್​ ಮಾಡಿದ್ರೆ ಬಂತು ವಾಷಿಂಗ್​ ಪೌಡರ್​: ಹುಬ್ಬಳ್ಳಿಯಲ್ಲಿ ದುಬೈವಾಲಾನಿಗೆ ಮೋಸ!

ಹಳೆಯ, ಡೇಟ್ ಮೀರಿದ ಸುಮಾರು 10,000 ಕಿಲೋಗ್ರಾಂಗಳಷ್ಟು ಖರ್ಜೂರ ಗೋದಾಮಿನಲ್ಲಿ ಪತ್ತೆಯಾಗಿದೆ. 2022 -2023ರಲ್ಲಿಯೇ ಈ ಖರ್ಜೂರಗಳ ಎಕ್ಸ್ಪೈರಿ ಮುಗಿದಿತ್ತು. ಇದನ್ನು ರಂಜಾನ್ ಸಮಯದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆದಿತ್ತು. ಅದಕ್ಕೆ ಹೊಸ ಲೇಬಲ್ಗಳು ಮತ್ತು ಸ್ಟಿಕ್ಕರ್ಗಳನ್ನು ಹಾಕಲಾಗಿತ್ತು. ಡೇಟ್ ಮುಗಿದ ಆಹಾರ ಸೇವನೆ ಆರೋಗ್ಯಕ್ಕೆ ಅಪಾಯ ಅಂತ ಅಧಿಕಾರಿಗಳು ಎಚ್ಚರಿಸಿದ್ದಾರೆ. ಗೋದಾಮಿನಲ್ಲಿ ಪತ್ತೆಯಾದ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತ್ರ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇದೇ ಅಭಿಯಾನದಡಿ ಫಜಲ್ಗಂಜ್ ಪ್ರದೇಶದಲ್ಲಿ ಸುಮಾರು 675 ಕಿಲೋಗ್ರಾಂಗಳಷ್ಟು ಕಲಬೆರಕೆ ಖೋಯಾವನ್ನು ವಶಪಡಿಸಿಕೊಳ್ಳಲಾಗಿದೆ. ಪರೀಕ್ಷೆಯ ನಂತರ, ಅದನ್ನು ಸ್ಥಳದಲ್ಲೇ ನಾಶಪಡಿಸಲಾಗಿದೆ. ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಕತ್ತರಿಸಿದ ವೀಳ್ಯದೆಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಹಿತಿಂಡಿಗಳು, ಒಣ ಹಣ್ಣುಗಳು ಮತ್ತು ಇತರ ಆಹಾರ ಪದಾರ್ಥಗಳ ಮಾರಾಟ ಹೆಚ್ಚಾದ ಕಾರಣ ಹಬ್ಬಗಳ ಸಮಯದಲ್ಲಿ ಕಲಬೆರಕೆದಾರರು ಆಕ್ಟಿವ್ ಆಗ್ತಾರೆ. ಹಾಗಾಗಿ ಈ ಅಭಿಯಾನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖರೀದಿದಾರರಿಗೆ ಸೂಚನೆ

ಯಾವುದೇ ಆಹಾರ ಪದಾರ್ಥ ಖರೀದಿ ವೇಳೆ ಎಚ್ಚರಿಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಎಕ್ಸ್ಫೈರಿ ಡೇಟ್, ಪ್ಯಾಕಿಂಗ್ ಹಾಗೂ ಗುಣಮಟ್ಟವನ್ನು ಪರೀಕ್ಷಿಸಿ ಆಹಾರ ಖರೀದಿ ಮಾಡುವಂತೆ ಸಲಹೆ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ನಿಂದ ಮತ್ತೊಂದು ಬೇಡಿಕೆ, ಕೋರ್ಟ್ ಗೆ ಅರ್ಜಿ ಸಲ್ಲಿಕೆ

ರಂಜಾನ್ ಸಮಯದಲ್ಲಿ ಖರ್ಜೂರ

ರಂಜಾನ್ ಸಮಯದಲ್ಲಿ ಖರ್ಜೂರವು ವಿಶೇಷ ಪ್ರಯೋಜನಕಾರಿಯಾಗಿದೆ. ಅವು ಸಕ್ಕರೆ ಮತ್ತು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಜೀವಸತ್ವಗಳಲ್ಲಿ ಸಮೃದ್ಧವಾಗಿವೆ. ಫೈಬರ್ ಮತ್ತು ಕಾರ್ಬೋಹೈಡ್ರೇಟ್ಗಳ ಅತ್ಯುತ್ತಮ ಮೂಲವಾಗಿದೆ. ಉಪವಾಸದ ಸಮಯದಲ್ಲಿ ಇದನ್ನು ಸೇವನೆ ಮಾಡೋದ್ರಿಂದ ತಲೆನೋವು ಮತ್ತು ಆಲಸ್ಯದಂತಹ ಸೌಮ್ಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಆದ್ರೆ ಇಂಥ ಆಹಾರಗಳೇ ಕಲಬೆರಕೆ ಆದ್ರೆ ಆರೋಗ್ಯ ಹಾಳಾಗೋದ್ರಲ್ಲಿ ಅನುಮಾನ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

60 ಸಾವಿರದ ಕ್ಯಾಮೆರಾ ಆರ್ಡರ್​ ಮಾಡಿದ್ರೆ ಬಂತು ವಾಷಿಂಗ್​ ಪೌಡರ್​: ಹುಬ್ಬಳ್ಳಿಯಲ್ಲಿ ದುಬೈವಾಲಾನಿಗೆ ಮೋಸ!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ನಿಂದ ಮತ್ತೊಂದು ಬೇಡಿಕೆ, ಕೋರ್ಟ್ ಗೆ ಅರ್ಜಿ ಸಲ್ಲಿಕೆ