ಕೋಲಾರದಲ್ಲಿ ಪತ್ನಿಯ ಅಕ್ರಮ ಸಂಬಂಧ ಗೊತ್ತಿದ್ದರೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದ ಜಾನಪದ ಕಲಾವಿದ ಗಂಡನನ್ನು ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಮೇ 30): ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷನಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪಡೆದಿದ್ದಾನೆ. ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ದರೂ, ಸಂಸಾರದ ಕಲೆ ಗೆಲ್ಲುವಲ್ಲಿ ವಿಫಲನಾಗಿದ್ದ. ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ದರೂ ತನ್ನ ಮಕ್ಕಳಿಗಾಗಿ ಎಲ್ಲವನ್ನ ಸಹಿಸಿಕೊಂಡಿದ್ದ ಜಾನಪದ ಕಲಾವಿದ ಇಂದು ಪತ್ನಿಯ ಪ್ರಿಯಕರನಿಂದಲೆ ಕೊಲೆಯಾಗಿದ್ದಾನೆ.
ಎಲ್ಲಾ ಮಾಯ ನಾಳೆ ನಾವು ಮಾಯ ಎಂದು ಹಾಡುತ್ತಿರುವ ಹಾಡುಗಾರ, ಗ್ರಾಮದ ಬಳಿಯೇ ಪತ್ನಿಯ ಪ್ರಿಯಕರನಿಂದಲೆ ಕೊಲೆಯಾಗಿ ಬಿದ್ದಿರುವ ಜನಪದ ಕಲಾವಿದ, ಮತ್ತೊಂದೆಡೆ ಪುಟ್ಟ ಮಕ್ಕಳೊಂದಿಗೆ ಕಣ್ಣೀರಾಕುತ್ತಿರುವ ಮಗನನ್ನ ಕಳೆದುಕೊಂಡ ತಾಯಿ, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಲಾರದಲ್ಲಿ. ಹೌದು ಪ್ರಿಯಕರನೊಂದಿಗೆ ಸೇರಿ ಪತಿಯನ್ನೆ ಕೊಂದು ಬೈಕ್ ಅಪಘಾತ ಎಂದು ಬಿಂಬಿಸಿದ ಧಾರುಣ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಕೋಲಾರ ತಾಲ್ಲೂಕಿನ ಜನ್ನಘಟ್ಟ ಬಳಿ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಜನ್ನಘಟ್ಟ ಗ್ರಾಮದ ಕಲಾವಿದ 45 ವರ್ಷದ ಕೃಷ್ಣಮೂರ್ತಿ ಬೈಕ್ ನಿಂದ ಬಿದ್ದು ಮೃತಪಟ್ಟ ಎಂದು ತಡರಾತ್ರಿ ಎಲ್ಲೆಡೆ ಸುದ್ದಿ ಹರಡಿತ್ತು.ಅದರಂತೆ ಜಿಲ್ಲೆಯ ಕಲಾವಿದರು, ವಿವಿಧ ಸಂಘಟನೆಗಳ ಮುಖಂಡರು ಮರುಗಿದ್ದರು. ಒಬ್ಬ ಕಲಾವಿದ ಬೈಕ್ ಆಪಘಾತದಲ್ಲಿ ಮೃತಪಟ್ಟ ಸುದ್ದ ಕೇಳಿ ಎಲ್ಲರಲ್ಲೂ ಒಂದು ಕ್ಷಣ ಆಶ್ಚರ್ಯ ಉಂಟಾಗಿತ್ತು. ಆದರೆ, ಬೆಳಗಾಗುವಷ್ಟರಲ್ಲಿ ಕೊಲೆ ಮಾಡಿ ಬೈಕ್ ಅಪಘಾತವೆಂದು ಬಿಂಬಿಸಲಾಗಿತ್ತು ಅನ್ನೋ ಸುದ್ದಿ ಜೋರಾಗಿಯೇ ಹರಡಿತ್ತು.
Mysuru Accident: ಸಾವಿನ ದವಡೆಯಲ್ಲಿದ್ದರೂ ಅಪ್ಪನನ್ನು ಕೇಳುತ್ತಿರುವ ಮಗು, ಅನಾಥನಾದ ಅರಿವೇ ಇಲ್ಲ
ಓಡಿ ಹೋಗಿದ್ದ ಪತ್ನಿಯನ್ನು ಕರೆದುಕೊಂಡು ಬಂದು ಬಾಳು ಕೊಟ್ಟಿದ್ದ: ಮೃತ ಕಲಾವಿದ ಕೃಷ್ಣಮೂರ್ತಿ ಸಂಬಂಧಿಕರು ಸೇರಿದಂತೆ ಇಡೀ ಗ್ರಾಮಕ್ಕೆ ಗೊತ್ತಿರುವಂತೆ ಕೃಷ್ಣಮೂರ್ತಿ ಪತ್ನಿಗೆ ಅಕ್ರಮ ಸಂಬಂಧ ಇದ್ದು ಆಕೆಯೆ ಕೊಲೆ ಮಾಡಿಸಿರುವ ಅನುಮಾನ ಎಲ್ಲೆಡೆ ಇತ್ತು.ಅಲ್ಲದೆ ಪ್ರತಿನಿತ್ಯ ಗಲಾಟೆ,ನ್ಯಾಯಾ ಪಂಚಾಯತಿ ನೋಡಿದ್ದವರು ಇಲ್ಲ ಇದು ಬೈಕ್ ಅಪಘಾತವಲ್ಲ ಇದೊಂದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಒಂದು ವರ್ಷದ ಹಿಂದೆ ಗಂಡ ಮಕ್ಕಳನ್ನ ಬಿಟ್ಟು ಓಡಿ ಹೋಗಿದ್ದಳು. ಆಗ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿದ್ದರು. ಆದ್ರೂ ಸಹ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾ ಇದ್ದ ಪತ್ನಿ ಸೌಮ್ಯ ಗಂಡನೊಂದಿಗೆ ಒಂದಿಲ್ಲೊಂದು ವಿಚಾರಕ್ಕೆ ತಗಾದೆ ತೆಗೆಯುತ್ತಲೆ ಇದ್ದಳು. ಆದ್ರೆ ಎಲ್ಲವನ್ನೂ ತನ್ನ ಮೂರು ಜನ ಮಕ್ಕಳಿಗಾಗಿ ಸಹಿಸಿಕೊಂಡ ಕಲಾವಿದ ತನ್ನ ಸಂಸಾರದಲ್ಲಿದ್ದ ಕಲಹಕ್ಕೆ ಬಲಿಯಾಗಿದ್ದಾನೆ ಅನ್ನೋದು ತಾಯಿ ಚೌಡಮ್ಮ ಅಳಲು ತೋಡಿಕೊಂಡಿದ್ದಾರೆ.
ಫೋನ್‌ನಲ್ಲಿ ಟ್ಯಾಪ್ ಮಾಡಿ ಕೊಲೆ: ಕಲಾವಿದ ಕೃಷ್ಣಮೂರ್ತಿ ಹಾಗೂ ಸೌಮ್ಯಾಳ 10 ವರ್ಷಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಗಣೇಶ್ ಮೂರ್ತಿ, ಜ್ಞಾನಶ್ರೀ ಹಾಗೂ ದತ್ತಾಶ್ರೀ ಮಕ್ಕಳಿದ್ದಾರೆ. ಪುಟ್ಟ ಮಕ್ಕಳಿಗಾಗಿ ಕೃಷ್ಣಮೂರ್ತಿ ಸಂಬಂದಿಕರ ಮಾತು ಕೇಳಿ ಹಲವು ಬಾರಿ ನ್ಯಾಯ ಪಂಚಾಯತಿ ಮಾಡಿ ಎಲ್ಲವನ್ನ ಸಹಿಸಿಕೊಂಡಿದ್ದ,ಆದ್ರೆ ಹಳೆ ಚಾಳಿ ಬಿಡದ ಸೌಮ್ಯ ತನ್ನ ಗಂಡ ಇಲ್ಲದ ವೇಳೆ ತನ್ನ ಪ್ರಿಯಕರನನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳಂತೆ.ಅಲ್ಲದೆ ಇತ್ತೀಚೆಗೆ ಆತನೊಂದಿಗೆ ಸುತ್ತಾಡುತ್ತಾ ಹಲವು ಬಾರಿ ಗಂಡನಿಗೆ ಹೊಡೆಯೋದು, ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಳಂತೆ. ಅಲ್ಲದೆ ಇತ್ತೀಚೆಗೆ ಚಿನ್ನ ಹಾಗೂ ಮೊಬೈಲ್ ಸಹ ಗಂಡನಿಂದ ಪಡೆದಿರುವ ಸೌಮ್ಯ ಗಂಡನೊಂದಿಗೆ ಅಷ್ಟಕಷ್ಟೆ. ಇತ್ತೀಚೆಗೆ ಕೊಲೆ ಮಾಡುವ ಬೆದರಿಕೆ ಸಹ ಹಾಕಿದ್ದು ನಿನ್ನೆ ಸಂಜೆ ಒನ್ ಟು ಒನ್ ಫೊನ್ ನಲ್ಲಿ ಎಲ್ಲಿ ಬರ್ತಿದ್ದೀರ ಎಂದು ಎಲ್ಲವೂ ಮಾಹಿತಿ ಪಡೆದಿದ್ದಾಳೆ.
ಬೈಕ್ ನಿಲ್ಲಿಸಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದರು: ಅದರಂತೆ ಕಳೆದ ರಾತ್ರಿ ತನ್ನ ಪ್ರಿಯಕರನಿಗೆ ತಿಳಿಸಿ ಗ್ರಾಮದ ಹೊರಹೊಲಯದಲ್ಲಿರುವ ರೈಲ್ವೇ ಅಂಡರ್ ಪಾಸ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಕೃಷ್ಣಮೂರ್ತಿಯ ಗಾಡಿ ನಿಲ್ಲಿಸಿದ್ದಾರೆ. ಈ ವೇಳೆ ಆತನ ಮೇಲೆ ರಾಡ್ ನಿಂದ ಹೊಡೆದು ಕೊಲೆ ಮಾಡಿಸಿ ಬೈಕ್ ನಿಂದ ಬಿದ್ದು ಮೃತಪಟ್ಟಿರುವಂತೆ ಗ್ರಾಮದಲ್ಲೆಲ್ಲಾ ಈಕೆಯೆ ಹಬ್ಬಿಸಿದ್ದಾಳೆ. ಆದ್ರೆ ಕೃಷ್ಣಮೂರ್ತಿಗೆ ಆಗಿದ್ದ ಗಾಯಗಳನ್ನು ಗಮನಿಸಿದ ಡಾಕ್ಟರ್ ಇದು ಅಪಘಾತದಿಂದ ಆಗಿರುವ ಸಾವು ಅಲ್ಲ ಅಂತ ಅನಿಸುತ್ತಿದೆ, ಬಲವಾಗಿ ಗಾಯಗಳ ಗುರುತುಗಳು ತಲೆ ಹಾಗೂ ಮುಖದ ಭಾಗದಲ್ಲಿ ಕಂಡು ಬರ್ತಿದೆ ಎಂದು ವೈದ್ಯರು ಪೊಲೀಸರಿಗೆ ತಿಳಿಸುತ್ತಾರೆ.
MYSURU ROAD ACCIDENT: ಅಪಘಾತದಲ್ಲಿ ಬಲಿಯಾದವರ ಸಾಮೂಹಿಕ ಅಂತ್ಯ ಸಂಸ್ಕಾರ, ಇವರನ್ನ ಬಿಟ್ಟು ನಾ ಹ್ಯಾಂಗ ಬದುಕಲಿ
ಮೂವರು ಪುಟ್ಟ ಮಕ್ಕಳು ಅನಾಥ: ಇದರ ಜೊತೆ ಸಂಬಂಧಿಕರು ಸಹ ಇದೊಂದು ಕೊಲೆ ಅನ್ನೋ ಅನುಮಾನ ಪೊಲೀಸರ ಬಳಿ ವ್ಯಕ್ತಪಡಿಸಿದ್ದಾರೆ. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ತಿಳಿದಿದ್ದು ಕಲಾವಿದ ಕೃಷ್ಣಮೂರ್ತಿ ಪತ್ನಿ ಸೌಮ್ಯ ಖತರ್ನಾಕ್ ಕೊಲೆ ಮಾಡಿಸಿರುವುದು ಹೊರ ಬಿದ್ದಿದೆ. ಪ್ರಿಯಕರ ಶ್ರೀನಿವಾಸಪುರ ತಾಲ್ಲೂಕಿನ ಚೊಕ್ಕರೆಡ್ಡಪಲ್ಲಿ ಶ್ರೀಧರ್, ತನ್ನ ಮತ್ತೊಬ್ಬ ಸ್ನೇಹಿತ ಶ್ರೀಧರ್‌ನೊಂದಿಗೆ ಸೇರಿ ಕೃಷ್ಣಮೂರ್ತಿಯನ್ನ ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದಿದೆ. ಅದರಂತೆ ಸಧ್ಯ ಮೂರು ಜನರನ್ನ ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಒಟ್ನಲ್ಲಿ ಪತ್ನಿಯ ಅಕ್ರಮ ಸಂಬಂಧ ಗೊತ್ತಿದ್ರು ತನ್ನ ಮಕ್ಕಳಿಗಾಗಿ ಎಲ್ಲವನ್ನ ಸಹಿಸಿಕೊಂಡು ತ್ಯಾಗ ಮಾಡಿದ್ದ ಕಲಾವಿದ ಇಂದು ಕೊಲೆಯಾಗಿದ್ದಾನೆ. ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದಾಕೆ ಜೈಲು ಸೇರಿದ್ದಾಳೆ, ಆದ್ರೆ ಮೂರು ಜನ ಪುಟ್ಟ ಮಕ್ಕಳು ಮಾತ್ರ ಅನಾಥವಾಗಿದ್ದು,ಕಲಾವಿದನ ಸಂಸಾರ ನಾವಿಕನಿಲ್ಲದ ನೌಕೆಯಂತ್ತಾಗಿದೆ.